Covid Crisis: 5 ದಿನದ ಬಳಿಕ ಕೋವಿಡ್‌ ತುಸು ಇಳಿಕೆ: ಕರ್ನಾಟಕದಲ್ಲಿ 463 ಕೇಸು

ರಾಜ್ಯದಲ್ಲಿ ಕೊರೋನಾ ಸೋಂಕು ಪ್ರಕರಣಗಳು ಸತತ ಐದು ದಿನಗಳ ಬಳಿಕ ತುಸು ತಗ್ಗಿದೆ, ಆದರೆ, ಪರೀಕ್ಷೆಗಳ ಪಾಸಿಟಿವಿಟಿ ದರ ಶೇ.2 ಆಸುಪಾಸಿನಲ್ಲಿಯೇ ಮುಂದುವರೆದಿದೆ. ಭಾನುವಾರ 463 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 

463 new coronavirus cases on june 12th in karnataka gvd

ಬೆಂಗಳೂರು (ಜೂ.13): ರಾಜ್ಯದಲ್ಲಿ ಕೊರೋನಾ ಸೋಂಕು ಪ್ರಕರಣಗಳು ಸತತ ಐದು ದಿನಗಳ ಬಳಿಕ ತುಸು ತಗ್ಗಿದೆ, ಆದರೆ, ಪರೀಕ್ಷೆಗಳ ಪಾಸಿಟಿವಿಟಿ ದರ ಶೇ.2 ಆಸುಪಾಸಿನಲ್ಲಿಯೇ ಮುಂದುವರೆದಿದೆ. ಭಾನುವಾರ 463 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 199 ಮಂದಿ ಮಾತ್ರ ಗುಣಮುಖರಾಗಿದ್ದಾರೆ. ಹೀಗಾಗಿ ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿರುವ ಸಕ್ರಿಯ ಪ್ರಕರಣಗಳ ಸಂಖ್ಯೆ 3651ಕ್ಕೆ ಏರಿದೆ. ಸುದೈವದಿಂದ ಸೋಂಕಿತರ ಸಾವು ವರದಿಯಾಗಿಲ್ಲ. ಶೇ.2.15 ಪಾಸಿಟಿವಿಟಿ: ಸೋಂಕು ಪರೀಕ್ಷೆಗಳು 21519 ನಡೆದಿದ್ದು, ಪಾಸಿಟಿವಿಟಿ ದರ ಶೇ 2.15ರಷ್ಟುದಾಖಲಾಗಿದೆ. 

ಶನಿವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆ 5 ಸಾವಿರ ಕಡಿಮೆಯಾಗಿವೆ. ಹೀಗಾಗಿ, ಹೊಸ ಪ್ರಕರಣಗಳು ಕೂಡಾ 99ರಷ್ಟುಇಳಿಕೆಯಾಗಿವೆ. (ಶನಿವಾರ 562 ಪ್ರಕರಣಗಳು, ಸಾವು ಶೂನ್ಯ). ಹೊಸ ಪ್ರಕರಣಗಳು ಬೆಂಗಳೂರಿನಲ್ಲಿ 429, ದಕ್ಷಿಣ ಕನ್ನಡ 14, ಉತ್ತರ ಕನ್ನಡ 6, ಧಾರವಾಡ 4, ಉಡುಪಿ 3, ದಾವಣಗೆರೆ 2, ಬಳ್ಳಾರಿ, ಚಿತ್ರದುರ್ಗ, ಗದಗ, ಹಾಸನ ಹಾಗೂ ರಾಯಚೂರಿನಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ. 29 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ.

Covid Crisis: ಕರ್ನಾಟಕದಲ್ಲಿ ಕೊರೋನಾ ಪ್ರಕರಣ ಮತ್ತಷ್ಟು ಹೆಚ್ಚಳ: 3.5 ತಿಂಗಳ ಬಳಿಕ 500+ ಕೇಸ್‌

ನಗರದಲ್ಲಿ ಕೊರೋನಾ ತುಸು ಇಳಿಕೆ: ನಗರದಲ್ಲಿ ಕೊರೋನಾ ಸೋಂಕು ಹೊಸ ಪ್ರಕರಣ ಮತ್ತು ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ ಇಳಿಕೆಯಾಗಿದೆ. ಭಾನುವಾರ 429 ಮಂದಿಗೆ ಸೋಂಕು ತಗುಲಿದೆ 196 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರ ಸಾವು ವರದಿಯಾಗಿಲ್ಲ. ಸದ್ಯ 3496 ಸೋಂಕಿತರು ಆಸ್ಪತ್ರೆ/ ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಸೋಂಕು ಪರೀಕ್ಷೆಗಳು 17 ಸಾವಿರ ನಡೆದಿದ್ದು, ಪಾಸಿಟಿವಿಟಿ ದರ ಶೇಕಡ 2.4ರಷ್ಟುದಾಖಲಾಗಿದೆ. ಶನಿವಾರಕ್ಕಿಂತ 2500 ಪರೀಕ್ಷೆಗಳು ಕಡಿಮೆಯಾಗಿದ್ದು, ಈ ಹಿನ್ನೆಲೆ ಹೊಸ ಪ್ರಕರಣಗಳು ಕೂಡಾ 116 ಇಳಿಕೆಯಾಗಿವೆ. (ಶನಿವಾರ 545ಕೇಸ್‌, ಸಾವು ಶೂನ್ಯ).

ಸತತ ಐದು ದಿನಗಳಿಂದ ಹೊಸ ಪ್ರಕರಣಗಳು ಏರಿಕೆ ಹಾದಿಯಲ್ಲಿಯೇ ಸಾಗಿದ್ದವು. ಮೂರೂವರೆ ತಿಂಗಳ ಬಳಿಕ ಶನಿವಾರ ಮೊದಲ ಬಾರಿ ಹೊಸ ಪ್ರಕರಣಗಳು 500 ಗಡಿ ದಾಟಿತ್ತು. ಅಲ್ಲದೆ, ಪರೀಕ್ಷೆಗಳ ಪಾಸಿಟಿವಿಟಿ ದರ ಕೂಡಾ ಶೇ.3ಕ್ಕೆ ಹೆಚ್ಚಳವಾಗಿತ್ತು. ಸದ್ಯ ಹೊಸ ಪ್ರಕರಣ ಮತ್ತು ಪಾಸಿಟಿವಿಟಿ ದರ ಎರಡೂ ತಗ್ಗಿವೆ. ಸಕ್ರಿಯ ಸೋಂಕಿತರ ಪೈಕಿ 28 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದರಲ್ಲಿ ಐಸಿಯು ಮತ್ತು ಆಕ್ಸಿಜನ್‌ ಘಟಕದಲ್ಲಿ ತಲಾ ಒಬ್ಬರು, 26 ಮಂದಿ ಸಾಮಾನ್ಯ ವಾರ್ಡ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸದ್ಯ ನಗರದಲ್ಲಿ ಐದಕ್ಕಿಂತ ಕಡಿಮೆ ಕೊರೋನಾ ಪ್ರಕರಣಗಳಿರುವ 16 ಕ್ಲಸ್ಟರ್‌, ಐದಕ್ಕಿಂತ ಹೆಚ್ಚಿನ ಕೊರೋನಾ ಪ್ರಕರಣಗಳಿರುವ 1 ಕ್ಲಸ್ಟರ್‌ಗಳಿವೆ. ಈವರೆಗೆ ಸೋಂಕಿಗೆ ಒಳಗಾದವರ ಸಂಖ್ಯೆ 17.86 ಲಕ್ಷಕ್ಕೆ, ಗುಣಮುಖರ ಸಂಖ್ಯೆ 17.67 ಲಕ್ಷಕ್ಕೆ ತಲುಪಿದ್ದು, ಸಾವಿನ ಸಂಖ್ಯೆ 16,965 ಎಂದು ಬಿಬಿಎಂಪಿ ಕೊರೋನಾ ವರದಿಯಲ್ಲಿ ತಿಳಿಸಲಾಗಿದೆ.

ಉಡುಪಿಯಲ್ಲಿ ಮೂವರಿಗೆ ಸೋಂಕು: ದ.ಕ. ಜಿಲ್ಲೆಯಲ್ಲಿ ಭಾನುವಾರ ಕೊರೋನಾ ಸೋಂಕಿನ ಕೇಸ್‌ಗಳ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಜಿಲ್ಲೆಯ ಪಾಸಿಟಿವಿಟಿ ದರ ಶೇ.2.52 ದಾಖಲಾಗಿದೆ. ಜಿಲ್ಲೆಯಲ್ಲಿ ಈಗ ಒಟ್ಟು ಸೋಂಕಿತರ ಸಂಖ್ಯೆ 1,35,655 ತಲುಪಿದೆ. ಈ ಪೈಕಿ 28 ಸಕ್ರಿಯ ಪ್ರಕರಣಗಳು. 1,33,777 ಮಂದಿ ಗುಣಮುಖರಾಗಿದ್ದಾರೆ. 1,850 ಮಂದಿ ಇಲ್ಲಿವರೆಗೆ ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.

Covid Crisis: 100 ದಿನದ ಬಳಿಕ ಬೆಂಗಳೂರಿನಲ್ಲಿ 458 ಮಂದಿಗೆ ಕೊರೋನಾ

ಉಡುಪಿ ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳ ಹೆಚ್ಚುತ್ತಿದೆ. ಭಾನುವಾರ 150 ಮಂದಿಯನ್ನು ಕೋವಿಡ್‌ ಪರೀಕ್ಷೆಗೊಳಪಡಿಸಿದ್ದು, ಉಡುಪಿಯ ಇಬ್ಬರು ಮತ್ತು ಕಾರ್ಕಳ ತಾಲೂಕಿನ ಒಬ್ಬ ಸೇರಿ 3 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಜಿಲ್ಲೆಯಲ್ಲೀಗ ಸಕ್ರಿಯ ಸೋಂಕಿತರ ಸಂಖ್ಯೆ 14ಕ್ಕೇರಿದೆ. ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 539 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ.

Latest Videos
Follow Us:
Download App:
  • android
  • ios