ಒಂದೇ ದಿನ ರಾಜ್ಯದಲ್ಲಿ 442 ಹೊಸ ಸೋಂಕು, 519 ಜನ ಡಿಸ್ಚಾರ್ಜ್..!

ರಾಜ್ಯದಲ್ಲಿ ಗುರುವಾರ ಒಂದೇ ದಿನ 442 ಮಂದಿಗೆ ಕರೋನಾ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 10,560ಕ್ಕೆ ಏರಿಕೆಯಾಗಿದೆ. ಜೊತೆಗೆ ಒಂದೇ ದಿನ ಸೋಂಕಿನಿಂದ ಗುಣಮುಖರಾದ ದಾಖಲೆಯ 519 ಜನರನ್ನು ಬಿಡುಗಡೆ ಮಾಡಿದ್ದು, ಇದರಿಂದ ಒಟ್ಟು ಬಿಡುಗಡೆಯಾದವರ ಸಂಖ್ಯೆ 6670ಕ್ಕೇರಿದೆ.

442 COVID19 Positive cases in Karnataka on June 25th

ಬೆಂಗಳೂರು(ಜೂ.26): ರಾಜ್ಯದಲ್ಲಿ ಗುರುವಾರ ಒಂದೇ ದಿನ 442 ಮಂದಿಗೆ ಕರೋನಾ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 10,560ಕ್ಕೆ ಏರಿಕೆಯಾಗಿದೆ. ಜೊತೆಗೆ ಒಂದೇ ದಿನ ಸೋಂಕಿನಿಂದ ಗುಣಮುಖರಾದ ದಾಖಲೆಯ 519 ಜನರನ್ನು ಬಿಡುಗಡೆ ಮಾಡಿದ್ದು, ಇದರಿಂದ ಒಟ್ಟು ಬಿಡುಗಡೆಯಾದವರ ಸಂಖ್ಯೆ 6670ಕ್ಕೇರಿದೆ.

ಈ ವರೆಗಿನ ಅಂಕಿ ಅಂಶಗಳ ಪ್ರಕಾರ ದಿನವೊಂದರಲ್ಲಿ ಇಷ್ಟುದೊಡ್ಡ ಸಂಖ್ಯೆಯಲ್ಲಿ ಗುಣಮುಖರಾದವರು ಬಿಡುಗಡೆಯಾಗಿದ್ದು ಇದೇ ಮೊದಲು. ಇದರ ನಡುವೆ ಸೋಂಕಿತರ ಸರಣಿ ಸಾವಿನ ಸರಣಿ ಗುರುವಾರವೂ ಮುಂದುವರೆದಿದ್ದು, ಬೆಂಗಳೂರು ಗ್ರಾಮಾಂತರದ ಮೂವರು ಸೇರಿ ಒಟ್ಟು 6 ಮಂದಿ ಮೃತಪಟ್ಟಿದ್ದಾರೆ. ಇದರಿಂದ ಮೃತರಾದ ಒಟ್ಟು ಸೋಂಕಿತರ ಸಂಖ್ಯೆ 170ಕ್ಕೆ ಏರಿಕೆಯಾಗಿದೆ. ಅಲ್ಲದೆ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮೊದಲ ಸಾವು ದಾಖಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಯಾವುದೇ ಸಾವು ಸಂಭವಿಸಿಲ್ಲ.

ಸುಧಾಕರ್‌ ಬಿಡದ ಕೊರೋನಾ; ಬಾಮೈದ, ಸ್ನೇಹಿತನಿಗೂ ಪಾಸಿಟಿವ್

ಬೆಂಗಳೂರು ಗ್ರಾಮಾಂತರದಲ್ಲಿ ಜೂ.30ರಂದು ಮೃತಪಟ್ಟಿದ್ದ 80 ವರ್ಷದ ವೃದ್ಧೆ, ಜೂ.20ರಂದು ಮೃತಪಟ್ಟಿದ್ದ 60 ವರ್ಷದ ಮತ್ತೊಬ್ಬ ವೃದ್ಧೆ ಹಾಗೂ ಜೂ.21ರಂದು ಮೃತಪಟ್ಟಿದ್ದ 38 ವರ್ಷದ ಪುರುಷನಿಗೆ ಮರಣಾನಂತರ ಬಂದ ವರದಿಯಲ್ಲಿ ಸೋಂಕು ದೃಢಪಟ್ಟಿದೆ. ಇನ್ನು, ಜೂನ್‌ 23 ರಂದು ಕಲಬುರಗಿಯ ಮೃತಪಟ್ಟಿದ್ದ 61 ವರ್ಷದ ವೃದ್ಧ, ದಕ್ಷಿಣ ಕನ್ನಡದಲ್ಲಿ ಜೂನ್‌ 24ರಂದು ಮೃತಪಟ್ಟಿದ್ದ 68 ವರ್ಷದ ವೃದ್ಧೆ, ಮೈಸೂರಿನನಲ್ಲಿ ಜೂ.24 ರಂದು ಆಸ್ಪತ್ರೆಗೆ ದಾಖಲಾಗಿ ಅಂದೇ ಮೃತಪಟ್ಟಿದ್ದ 87 ವರ್ಷದ ವೃದ್ಧನಿಗೆ ಸೋಂಕು ದೃಢಫಟ್ಟಿದೆ. ಆರೂ ಮಂದಿ ಉಸಿರಾಟ ತೊಂದರೆ, ಜ್ವರ ಮತ್ತಿತರ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾದಾಗ ಕೋವಿಡ್‌ ಪರೀಕ್ಷೆ ನಡೆಸಲಾಗಿತ್ತು.

ಜಿಲ್ಲಾವಾರು:

ಬೆಂಗಳೂರು ನಗರದಲ್ಲೇ 113 ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ಬೆಂಗಳೂರಿನಲ್ಲಿ ಸತತ ಐದನೇ ದಿನವೂ ಸೋಂಕಿತರ ಸಂಖ್ಯೆ ಶತಕ ಮೀರಿದೆ. ಉಳಿದಂತೆ ಕಲಬರುಗಿ 35, ರಾಮನಗರ 33, ದಕ್ಷಿಣ ಕನ್ನಡ 29, ಬಳ್ಳಾರಿ 26, ಧಾರವಾಡ 26, ಮೈಸೂರು 22, ಬಾಗಲಕೋಟೆ 18, ಕೊಡಗು 18, ಉಡುಪಿ 14, ಹಾಸನ 12, ಬೆಂಗಳೂರು ಗ್ರಾಮಾಂತರ 12, ಉತ್ತರ ಕನ್ನಡ 11, ವಿಜಯಪುರ 10,ಗದಗ 10, ಹಾವೇರಿ 10, ಮಂಡ್ಯ 9, ಬೀದರ್‌ 8, ದಾವಣಗೆರೆ 7, ಬೆಳಗಾವಿ 4, ಶಿವಮೊಗ್ಗ 4, ಕೋಲಾರ 4, ಯಾದಗಿರಿ 2, ಚಿಕ್ಕಬಳ್ಳಾಪುರ 2,ತುಮಕೂರು 1, ಚಿಕ್ಕಮಗಳೂರು 1, ಚಾಮರಾಜನಗರದಲ್ಲಿ ಒಬ್ಬರಿಗೆ ಸೋಂಕು ದೃಢಪಟ್ಟಿದೆ.

ಸಿಎಂ ಗೃಹ ಕಚೇರಿಗೆ ಕೊರೋನಾ ಕಾಟ, ಸೀಲ್ ಡೌನ್

ಗುರುವಾರದ ಪ್ರಕರಣಗಳಲ್ಲಿ ಗುಜರಾತ್‌, ಮಹಾರಾಷ್ಟ್ರ ಸೇರಿದಂತೆ ಅಂತಾರಾಜ್ಯ ಪ್ರಯಾಣದ ಹಿನ್ನೆಲೆಯ 81 ಮಂದಿಗೆ, ಸೌದಿ ಅರೇಬಿಯಾ ಸೇರಿ ಅಂತಾರಾಷ್ಟ್ರೀಯ ಪ್ರಯಾಣದ ಹಿನ್ನೆಲೆಯ 23 ಮಂದಿಗೆ ಸೋಂಕು ದೃಢಪಟ್ಟಿದೆ. ಉಳಿದ 338 ಜನರಿಗೆ ಸ್ಥಳೀಯವಾಗಿ ಸೋಂಕು ತಗುಲಿದೆ. ಈ ಪೈಕಿ 86 ಐಎಲ್‌ಐ, 20 ಸಾರಿ ಮತ್ತು ಇತರೆ ಪ್ರಕರಣಗಳು ಕಂಟೈನ್‌ಮೆಂಟ್‌ ಜೋನ್‌, ಸೋಂಕಿತರ ಸಂಪರ್ಕದಿಂದ ದೃಢಪಟ್ಟಿವೆ.

ಆಗಸ್ಟ್ 12ರವರೆಗೆ ರೈಲು ಸಂಚಾರ ಇಲ್ಲ, ಎಲ್ಲಾ ಹಣ ವಾಪಸ್!

ಇನ್ನು ಬಿಡುಗಡೆಯಾದ 519 ಮಂದಿಯಲ್ಲಿ ಯಾದಗಿರಿಯಲ್ಲಿ 118, ದಕ್ಷಿಣ ಕನ್ನಡ 88, ಬಳ್ಳಾರಿ 49, ರಾಯಚೂರು 48, ಧಾರವಾಡ 43, ಉಡುಪಿ 33, ಕಲಬುರಗಿ 31, ಬೆಂಗಳೂರು ನಗರ 30, ಬೀದರ್‌ 18, ಹಾಸನ 17, ಮೈಸೂರು 15, ಉತ್ತರ ಕನ್ನಡ 10, ಬೆಳಗಾವಿ 6, ಶಿವಮೊಗ್ಗ 5, ಗದಗ, ಬೆಂ.ಗ್ರಾಮಾಂತರ ತಲಾ 3, ಕೊಪ್ಪಳದಲ್ಲಿ ಇಬ್ಬರು ಸೋಂಕಿನಿಂದ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಇದರಿಂದ ಈ ವರೆಗೆ 6,670 ಜನ ಬಿಡುಗಡೆಯಾಗಿದ್ದು, 3,716 ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಐಸಿಯುನಲ್ಲಿ ದಾಖಲಾದವರ ಸಂಖ್ಯೆ ಹೆಚ್ಚಾಗಿದ್ದು, ಬುಧವಾರ 112 ಇದ್ದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರ ಸಂಖ್ಯೆ ಗುರುವಾರ 160ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲೇ 112 ಮಂದಿ ಐಸಿಯುನಲ್ಲಿದ್ದಾರೆ.

Latest Videos
Follow Us:
Download App:
  • android
  • ios