Asianet Suvarna News Asianet Suvarna News

ಆಗಸ್ಟ್ 12ರವರೆಗೆ ರೈಲು ಸಂಚಾರ ಇಲ್ಲ, ಎಲ್ಲಾ ಹಣ ವಾಪಸ್!

ಆಗಸ್ಟ್ 12ರವರೆಗೆ ರೈಲು ಸಂಚಾರ ಇಲ್ಲ/ ರೈಲ್ವೆ ಮಂಡಳಿ ತೀರ್ಮಾನ/ ಕೊರೋನಾ ಆರ್ಭಟದ ಕಾರಣಕ್ಕೆ ತೀರ್ಮಾನ/ ಬುಕಿಂಗ್ ಮಾಡಿದ್ದ ಹಣ ವಾಪಸ್ ನೀಡಲು ತೀರ್ಮಾನ

Regular trains cancelled until 12 August special trains to continue
Author
Bengaluru, First Published Jun 25, 2020, 10:57 PM IST

ನವದೆಹಲಿ(ಜೂ 25 )  ಪ್ರಯಾಣಿಕ ರೈಲುಗಳ ಸಂಚಾರದ ಬಗ್ಗೆ ರೈಲ್ವೆ ಮಂಡಳಿ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದು ಆಗಸ್ಟ್ 12ರ ತನಕ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದೆ.

"

ಸಾಮಾನ್ಯ ವೇಳಾಪಟ್ಟಿಯ ಪ್ಯಾಸೆಂಜರ್/ಮೇಲ್/ಎಕ್ಸ್‌ಪ್ರೆಸ್/ಸಬ್ ಅರ್ಬನ್ ರೈಲುಗಳ ಸಂಚಾರ ರದ್ದು ಮಾಡಲಾಗಿದೆ.  ಆಗಸ್ಟ್ 12 ರವರೆಗೆ ಬುಕಿಂಗ್ ಮಾಡಿದ್ದವರಿಗೆ ಹಣ ವಾಪಸ್ ಮಾಡುವುದಾಗಿಯೂ ತಿಳಿಸಲಾಗಿದೆ.

ಚೀನಾ ಕಂಪನಿಗೆ ಬಿಗ್ ಶಾಕ್ ನೀಡಿದ ಭಾರತೀಯ ರೈಲ್ವೆ

ಈಗಾಗಲೇ ಸಂಚಾರ ನಡೆಸುತ್ತಿರುವ 230 ವಿಶೇಷ ರೈಲುಗಳು, ಗೂಡ್ಸ್ ರೈಲು, ಅಗತ್ಯ ವಸ್ತುಗಳನ್ನು ಸಾಗಣೆ ಮಾಡುವ ವಿಶೇಷ ರೈಲುಗಳ ಸಂಚಾರ ಮುಂದುವರಿಯಲಿದೆ.

ಕೊರೋನಾ ಲಾಕ್ ಡೌನ್ ಕಾರಣಕ್ಕೆ ಮಾರ್ಚ್ 25 ರಿಂದಲೇ ಸಾಮಾನ್ಯ ರೈಲು ಸಂಚಾರ ಬಂದ್ ಮಾಡಲಾಗಿತ್ತು. ಬುಕಿಂಗ್ ಮಾಡುವ ಅವಕಾಶವನ್ನು ಸಹ ಐಆರ್‌ಸಿಟಿಸಿ ತೆಗೆದು ಹಾಕಲಿದ್ದು ಮುಂದಿನ ಪ್ರಕಟಣೆವರೆಗೂ ಕಾಯಬೇಕಾಗಿದೆ.

Follow Us:
Download App:
  • android
  • ios