ಕರ್ನಾಟಕದಲ್ಲಿ ಕೊರೋನಾ ಪಾಸಿಟಿವ್  ಹಾಗೂ ಸಾವಿನ ಪ್ರಕರಣಗಳ ಸಂಖ್ಯೆಯಲ್ಲಿ ಏರುತ್ತಲೇ ಇದೆ. ಮೇ.02 ಅಂಕಿ-ಸಂಖ್ಯೆ ಇಲ್ಲಿದೆ.

ಬೆಂಗಳೂರು, (ಏ.02) : ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಅಬ್ಬರ ಮುಂದುವರೆದಿದ್ದು, ಇಂದು (ಭಾನುವಾರ) 37,733 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. 217 ಸೋಕಿಂತರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದರಿಂದಾಗಿ ಸೋಂಕಿತರ ಸಂಖ್ಯೆ 1601865ಕ್ಕೇರಿದ್ರೆ, ಕಿಲ್ಲರ್ ಕೊರೋನಾಗೆ ಬಲಿಯಾದವರ ಸಂಖ್ಯೆ 16,011ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕೊರೋನಾ ಪೇಶಂಟ್‌ಗಳಿಗೆ ನಿಜಕ್ಕೂ ಆಕ್ಸಿಜನ್ ಅಗತ್ಯ ಎಷ್ಟಿದೆ? 

ಇನ್ನು ಕಳೆದ 24 ಗಂಟೆಗಳಲ್ಲಿ 21,149 ಜನರು ಸೇರಿದಂತೆ ಇದುವರೆಗೆ 1164398 ಸೋಂಕಿತರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ 421436 ಸಕ್ರಿಯ ಪ್ರಕರಣಗಳಿವೆ.

ಜಿಲ್ಲಾವಾರು ಪ್ರಕರಣಗಳ ಸಂಖ್ಯೆ 
ಬಾಗಲಕೋಟೆ 691, ಬಳ್ಳಾರಿ 1156, ಬೆಳಗಾವಿ 372, ಬೆಂಗಳೂರು ಗ್ರಾಮಾಂತರ 286, ಬೆಂಗಳೂರು ನಗರ 21199, ಬೀದರ್ 584, ಚಾಮರಾಜನಗರ 271, ಚಿಕ್ಕಬಳ್ಳಾಪುರ 446, ಚಿಕ್ಕಮಗಳೂರು 166, ಚಿತ್ರದುರ್ಗ 152, ದಕ್ಷಿಣ ಕನ್ನಡ 996, ದಾವಣಗೆರೆ 317, ಧಾರವಾಡ 741, ಗದಗ 118, ಹಾಸನ 792, ಹಾವೇರಿ 157, ಕಲಬುರಗಿ 427, ಕೊಡಗು 246, ಕೋಲಾರ 282, ಕೊಪ್ಪಳ 567, ಮಂಡ್ಯ 653, ಮೈಸೂರು 2750, ರಾಯಚೂರು 445, ರಾಮನಗರ 441, ಶಿವಮೊಗ್ಗ 620, ತುಮಕೂರು 1302, ಉಡುಪಿ 413, ಉತ್ತರ ಕನ್ನಡ 5328, ವಿಜಯಪುರ 303, ಯಾದಗಿರಿಯಲ್ಲಿ 302 ಪ್ರಕರಣಗಳು ಪತ್ತೆಯಾಗಿವೆ.