ಬೆಂಗಳೂರು(ಮೇ 2)  ಕೊರೋನಾ ಎರಡನೇ ಅಲೆಯಲ್ಲಿ ಸೋಂಕಿತರು ಆಕ್ಸಿಜನ್ ಇಲ್ಲದೆ ಪ್ರಾಣ ಬಿಡ್ತಿದ್ದಾರೆ.  ಸೂಕ್ತ ರೀತಿಯಲ್ಲಿ ಜೀವ ವಾಯು ಪೂರೈಸಲಾಗದೆ ಸರ್ಕಾರವೇ ಸಂಕಷ್ಟದಲ್ಲಿದೆ.  ಅಷ್ಟಕ್ಕೂ ಸೋಂಕಿತರಿಗೆ ಆಕ್ಸಿಜನ್ ಯಾಕೆ ಇಷ್ಟು ಮುಖ್ಯ.? ಪಾಸಿಟಿವ್ ಆದರೆ ಆಕ್ಸಿಜನ್ ಬೇಕೇ ಬೇಕಾ..? ಇದಕ್ಕೆಲ್ಲ ಉತ್ತರ ಇಲ್ಲಿದೆ.

ಮೇ ತಿಂಗಳಲ್ಲಿ 1,400 ಮೆಟ್ರಿಕ್ ಟನ್ ಹೆಚ್ಚುವರಿ ಆಕ್ಸಿಜನ್ ಬೇಕಾಗುವ ಸಾಧ್ಯತೆ ಇದೆ ಎನ್ನುತ್ತಿದ್ದಾರೆ ತಜ್ಞರು. ಈಗಲೇ ಅಗತ್ಯಕ್ಕೆ ತಕ್ಕಂತೆ ಆಕ್ಸಿಜನ್ ಪೂರೈಕೆ ಆಗ್ತಿಲ್ಲ.. ಇನ್ನೂ 1400 ಮೆಟ್ರಿಕ್ ಟನ್ ಅಗತ್ಯ ಬಿದ್ದರೆ ಜನರ ಪಾಡೇನು.!? ಅಷ್ಟಕ್ಕೂ ಪಾಸಿಟಿವ್ ಆದ ಕೂಡಲೇ ಆಕ್ಸಿಜನ್ ಬೇಕೇ ಬೇಕಾ..!?  ಇದರ ಬಗ್ಗೆ ತಜ್ಞ ವೈದ್ಯರು ಏನು ಹೇಳ್ತಾರೆ? ಎಂಥಾ ಸೋಂಕಿತರಿಗೆ ಆಕ್ಸಿಜನ್ ಅಗತ್ಯ ಇದೆ? ಈ ಪ್ರಶ್ನೆಗಳು ನಮ್ಮ ಮುಂದೆ ಇವೆ.

ಕೊರೋನಾ ಕಂಡುಹಿಡಿಯುವ ಮೂರು ವಿಧಾನ

ಎಲ್ಲಾ ಕಾವಿಡ್ ಪಾಸಿಟಿವ್ ರೋಗಿಗಳಿಗೆ ಆಕ್ಸಿಜನ್ ಅವಶ್ಯಕತೆ ಇರುವುದಿಲ್ಲ. ಯಾವ್ ರೋಗಿಯ ಆಕ್ಸಿಜನ್ ಲೆವೆಲ್ 94ಕ್ಕಿಂತ ಕಡಿಮೆ ಇರುತ್ತದೆಯೋ, ಅಂತಹವರಿಗೆ ಆಕ್ಸಿಜನ್ ಬೇಕಾಗುತ್ತದೆ.  ಕೊರೋನಾ ಸೋಂಕಿತರಿಗೆ ವೈರಲ್ ನ್ಯೂಮೋನಿಯಾ ಇರುತ್ತದೆ. ಅದು ಜಾಸ್ತಿ ಆದಲ್ಲಿ ಶ್ವಾಸಕೋಶದಿಂದ ರಕ್ತಕ್ಕೆ ಆಕ್ಸಿಜನ್ ಪೂರೈಕೆ ಸರಿಯಾಗಿ ಆಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಆಕ್ಸಿಜನ್ ಅವಶ್ಯಕತೆ ಬಹಳ ಇರುತ್ತದೆ. ಆದ್ದರಿಂದ ಆಕ್ಸಿಜನ್ ರೋಗಿಯ ಜೀವ ಉಳಿಸುವಲ್ಲಿ ಬಹಳ ಮುಖ್ಯ.

ಆಕ್ಸಿಜನ್ ಅಗತ್ಯ ಇರುವ ರೋಗಿಗೆ ಎಷ್ಟು ಪ್ರಮಾಣದಲ್ಲಿ ಆಕ್ಸಿಜನ್ ಬೇಕಾಗುತ್ತೆ.? ಆಕ್ಸಿಜನ್ ಅವಶ್ಯಕತೆ ಇರುವ ರೋಗಿಗಳಿಗೆ ಘಂಟೆಗೆ 2-6 ಲೀಟರ್ ಆಕ್ಸಿಜನ್ ಅವಶ್ಯಕತೆ ಇರುತ್ತದೆ. ಅಂದರೆ  ದಿನಕ್ಕೆ ಆಕ್ಸಿಜನ್ ಅವಶ್ಯಕವಿರುವ ಪೇಷಂಟ್ ಗೆ 3-7 ಸಾವಿರ ಲೀಟರ್ ಆಕ್ಸಿಜನ್  ಅವಶ್ಯಕತೆ ಇರುತ್ತದೆ ಎಂದು ತಜ್ಞ ಡಾ. ಶರತ್ ತಿಳಿಸಿದ್ದಾರೆ. 

"