Asianet Suvarna News Asianet Suvarna News

ಫೆಬ್ರವರಿಯಲ್ಲಿ ಬಡಜನತೆಗೆ 36000 ಮನೆ ಹಂಚಿಕೆ: ಸಚಿವ ಜಮೀರ್‌ ಅಹ್ಮದ್‌

ಸರ್ಕಾರ ಆರನೇ ಗ್ಯಾರಂಟಿಯಾಗಿ ಬಡಜನತೆಗೆ ನಿವೇಶನಗಳನ್ನು ಹಂಚಿಕೆ ಮಾಡುತ್ತಿದೆ. ವಸತಿ ಯೋಜನೆಗಳಡಿ ನಿರ್ಮಿಸಿಕೊಡುತ್ತಿರುವ 2.32 ಲಕ್ಷ ಮನೆಗಳ ಪೈಕಿ ಮೊದಲ ಹಂತದಲ್ಲಿ ಫೆ.24ರಂದು 36000 ಮನೆಯನ್ನು ಹಂಚಿಕೆ ಮಾಡಲಾಗುವುದು ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಘೋಷಿಸಿದರು.

36000 houses distributed to the poor in February Says Minister Zameer Ahmed Khan gvd
Author
First Published Jan 17, 2024, 1:58 PM IST

ಬೆಂಗಳೂರು (ಜ.17): ಸರ್ಕಾರ ಆರನೇ ಗ್ಯಾರಂಟಿಯಾಗಿ ಬಡಜನತೆಗೆ ನಿವೇಶನಗಳನ್ನು ಹಂಚಿಕೆ ಮಾಡುತ್ತಿದೆ. ವಸತಿ ಯೋಜನೆಗಳಡಿ ನಿರ್ಮಿಸಿಕೊಡುತ್ತಿರುವ 2.32 ಲಕ್ಷ ಮನೆಗಳ ಪೈಕಿ ಮೊದಲ ಹಂತದಲ್ಲಿ ಫೆ.24ರಂದು 36000 ಮನೆಯನ್ನು ಹಂಚಿಕೆ ಮಾಡಲಾಗುವುದು ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಘೋಷಿಸಿದರು. ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ಆಯೋಜಿಸಿದ್ದ ‘ಮನೆ ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾವು ಪ್ರಣಾಳಿಕೆಯಲ್ಲಿ ಹೇಳದಿದ್ದರೂ ಆರನೇ ಗ್ಯಾರಂಟಿಯಾಗಿ ವಸತಿ ಯೋಜನೆಗೆ ಫಲಾನುಭವಿಗಳು ಕೊಡಬೇಕಾದ ಹಣವನ್ನು ಸರ್ಕಾರದಿಂದಲೇ ಭರಿಸುತ್ತಿದ್ದೇವೆ. 

₹7400 ಕೋಟಿ ಸ್ಲಂ ಬೋರ್ಡ್‌ಗೆ ಹಾಗೂ ₹1800 ಕೋಟಿ ರಾಜೀವ್‌ ಗಾಂಧಿ ವಸತಿ ನಿಗಮಕ್ಕೆ ನೀಡಲು ಕ್ಯಾಬಿನೆಟ್‌ನಲ್ಲಿ ಒಪ್ಪಿಗೆ ಸಿಕ್ಕಿದೆ. ಮೊದಲ ಹಂತದಲ್ಲಿ ಮುಖ್ಯಮಂತ್ರಿಗಳು ₹500 ಕೋಟಿ ಬಿಡುಗಡೆ ಮಾಡಿದ್ದಾರೆ. ಫೆ.24ರಂದು 36000 ಮನೆಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಇನ್ನೊಂದು ವರ್ಷದಲ್ಲಿ ಎಲ್ಲ ಮನೆಗಳನ್ನು ಹಂಚಿಕೆ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ ಎಂದರು. 2015ರಿಂದ 2023ರವರೆಗೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ 1,80,253 ಮನೆ, ರಾಜೀವ್ ಗಾಂಧಿ ವಸತಿ ನಿಗಮದಡಿ 53,680 ಮನೆ ಸೇರಿ ಒಟ್ಟಾರೆ 2.33 ಲಕ್ಷ ಮನೆಗಳು ಮಂಜೂರಾಗಿದ್ದವು. ಆದರೆ, ಈವರೆಗೆ ಒಂದು ಮನೆಯನ್ನೂ ಕೊಡಲು ಸಾಧ್ಯವಾಗಿರಲಿಲ್ಲ. ಒಂದು ಮನೆ ಕಟ್ಟಲು ₹7.50 ಲಕ್ಷ ಬೇಕಾಗುತ್ತದೆ. 

ದೇಶದ ಜನತೆಗೆ ಆಹಾರ ಭದ್ರತೆ ಕಲ್ಪಿಸಿದ್ದು ಪ್ರಧಾನಿ ಮೋದಿ: ಸಂಸದ ಮುನಿಸ್ವಾಮಿ

ಅದರಲ್ಲಿ ಕೇಂದ್ರ ಸರ್ಕಾರ ₹ 1.50 ಲಕ್ಷ , ರಾಜ್ಯ ಸರ್ಕಾರ ಜನರಲ್‌ ಕೆಟಗರಿಗೆ ₹1.20 ಲಕ್ಷ , ಎಸ್‌ಸಿ,ಎಸ್‌ಟಿಗೆ ₹2 ಲಕ್ಷ ಕೊಡುತ್ತೇವೆ. ಫಲಾನುಭವಿ ₹4.50 ಲಕ್ಷ ಹಾಕಬೇಕಾಗುತ್ತದೆ. ಆದರೆ, ಬಡವರು ಇಷ್ಟೊಂದು ಹಣ ಕೊಡಲು ಸಾಧ್ಯವಾಗಲ್ಲ. ಫಲಾನುಭವಿಗಳಿಂದ 1.80 ಲಕ್ಷ ಮನೆಗೆ ಸುಮಾರು ಸ್ಲಂ ಬೋರ್ಡ್‌ಗೆ ₹7400 ಕೋಟಿ ಬರಬೇಕು. ಆದರೆ, ಕೇವಲ 300 ಕೋಟಿ ಬಂದಿದೆ. ಇದರ ಜೊತೆಗೆ ಶಾಸಕರು ಈ ಬಗ್ಗೆ ಹೆಚ್ಚಿನ ಜಾಗೃತಿಯನ್ನೂ ಮೂಡಿಸಿಲ್ಲ. ಪರಿಣಾಮ ಬಡಜನತೆ ಇಂದಿಗೂ ತಾಡಪಾಲ್‌ , ಶೆಡ್‌ನಲ್ಲಿ ವಾಸಿಸುತ್ತಿದ್ದು, ವಸತಿ ಯೋಜನೆ ನನೆಗುದಿಗೆ ಬಿದ್ದಿತ್ತು. ನಮ್ಮ ಸರ್ಕಾರ ಬಡವರ ಮೇಲಿನ ಕಾಳಜಿಯಿಂದ ಫಲಾನುಭವಿಗಳ ಆರ್ಥಿಕ ಸಮಸ್ಯೆ ನಿವಾರಿಸಿದೆ ಎಂದರು.

Follow Us:
Download App:
  • android
  • ios