Asianet Suvarna News Asianet Suvarna News

ದೇಶದ ಜನತೆಗೆ ಆಹಾರ ಭದ್ರತೆ ಕಲ್ಪಿಸಿದ್ದು ಪ್ರಧಾನಿ ಮೋದಿ: ಸಂಸದ ಮುನಿಸ್ವಾಮಿ

ಭಾರತದ ಪ್ರಧಾನಿ ಮೋದಿ ಬಡವರ ಕಲ್ಯಾಣವೇ ದೇಶದ ಕಲ್ಯಾಣ ಎಂಬ ಧೋರಣೆ ಹೊಂದುವ ಮೂಲಕ ಹಲವಾರು ಯೋಜನೆಗಳನ್ನು ರೂಪಿಸಿ, ಪ್ರತಿಯೋಬ್ಬ ಪ್ರಜೆಗೊ ತಲುಪುವಂತೆ ಆರಿವು ಮೂಡಿಸುವಂತ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮಕ್ಕೆ ೧೦ ಸಾವಿರ ರಥ ಯಾತ್ರೆಗಳನ್ನು ಕೈಗೊಳ್ಳಲಾಗಿದೆ. 

PM Narendra Modi has ensured food security for the people of the country Says MP S Muniswamy gvd
Author
First Published Jan 17, 2024, 10:45 AM IST

ಕೋಲಾರ (ಜ.17): ಭಾರತದ ಪ್ರಧಾನಿ ಮೋದಿ ಬಡವರ ಕಲ್ಯಾಣವೇ ದೇಶದ ಕಲ್ಯಾಣ ಎಂಬ ಧೋರಣೆ ಹೊಂದುವ ಮೂಲಕ ಹಲವಾರು ಯೋಜನೆಗಳನ್ನು ರೂಪಿಸಿ, ಪ್ರತಿಯೋಬ್ಬ ಪ್ರಜೆಗೊ ತಲುಪುವಂತೆ ಆರಿವು ಮೂಡಿಸುವಂತ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮಕ್ಕೆ ೧೦ ಸಾವಿರ ರಥ ಯಾತ್ರೆಗಳನ್ನು ಕೈಗೊಳ್ಳಲಾಗಿದೆ. ದೇಶದ ಉದ್ದಗಲಕ್ಕೂ ೭೦ ರಿಂದ ೮೦ ಸಾವಿರ ಗ್ರಾಪಂಗಳಲ್ಲಿ ರಥಗಳು ಸಂಚರಿಸುತ್ತಿವೆ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.

ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ಆವರಣದಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯಿಂದ ಆಯುಷ್ಮಾನ್ ಭಾರತ್ ಕಾರ್ಡ್ ನೋಂದಣಿ ಹಾಗೂ ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿ, ಕೇಂದ್ರ ಸರ್ಕಾರ ನೂರಾರು ಯೋಜನೆಗಳನ್ನು ರೂಪಿಸಿದ್ದು ಇವುಗಳನ್ನು ಅನುಷ್ಠಾನಗೊಳಿಸಿರುವುದನ್ನು ಗಮನಿಸಲು ವಿಕಸಿತ ಭಾರತ ಸಂಕಲ್ಪ ಯಾತ್ರೆ ರೂಪಿಸಲಾಗಿದೆ, ಸೌಲಭ್ಯಗಳಿಂದ ವಂಚಿತರಾದವರು ಯೋಜನೆಗಳನ್ನು ಸದ್ಬಳಿಸಿಕೊಂಡು ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ಕರೆನೀಡಿದರು.

ಲೋಕಸಭೆ ಚುನಾವಣೆ ಟಿಕೆಟ್‌ ಫೈಟ್‌: ಕೋಲಾರ ಟಿಕೆಟ್‌ ಮುನಿಯಪ್ಪಗೋ ಅಥವಾ ಪುತ್ರ, ಅಳಿಯ

ದೇಶದ ಜನತೆಗೆ ಆಹಾರ ಭದ್ರತೆ: ದೇಶದ ೧೪೦ ಕೋಟಿ ಜನಕ್ಕೆ ಆಹಾರದ ಭದ್ರತೆ ಯೋಜನೆಯಲ್ಲಿ ಪ್ರತಿಯೊಬ್ಬರಿಗೂ ಉಚಿತ ಅಕ್ಕಿ ವಿತರಣೆ, ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆ ಉಚಿತವಾಗಿ ೨ ಬಾರಿ ಜೊತೆಗೆ ಬೂಸ್ಟರ್ ಡೋಸ್ ನೀಡಲಾಗಿದೆ, ರಾಜ್ಯದಲ್ಲಿ ಕೋಲಾರ ಜಿಲ್ಲೆಯೇ ಅತಿಹೆಚ್ಚು ಲಸಿಕೆಗಳನ್ನು ನೀಡಿದೆ, ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಪ್ರತಿಯೊಬ್ಬರಿಗೂ ೫ ಲಕ್ಷದವರೆಗೆ ಉಚಿತ ಚಿಕಿತ್ಸೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯಬಹುದಾಗಿದೆ, ಕೋವಿಡ್ ಸಂದರ್ಭದಲ್ಲಿ ಆರ್.ಎಲ್ ಆಸ್ಪತ್ರೆಗೆ ೧೨ ಕೋಟಿ ರು. ನೀಡಿದೆ, ದೇಶದ ಎಲ್ಲೆಡೆ ಜನೌಷಧಿ ಕೇಂದ್ರಗಳನ್ನು ತೆರೆದು ಅತ್ಯಂತ ಕಡಿಮೆ ದರದಲ್ಲಿ ಔಷಧಿಗಳನ್ನು ವಿತರಿಸಲಾಗುತ್ತಿದೆ ಎಂದು ಹೇಳಿದರು.

ನಗರದ ಅಭಿವೃದ್ಧಿಗಳಿಗೆ ೧೫೦ ಕೋಟಿ ರು. ಕೇಂದ್ರದಿಂದ ವಿತರಿಸಲಾಗಿದ್ದು, ಜನತೆಯ ಮೂಲಭೂತ ಸೌಲಭ್ಯ ಕಲ್ಪಿಸಲಾಗುತ್ತಿದೆ, ನೀರಾವರಿ ಯೋಜನೆಗೆ ೧೮೮ಂ ಕೋಟಿ ರು.ಗಳನ್ನು ವಿತರಿಸಿದೆ, ಕೋಲಾರಮ್ಮ ಕೆರೆಯ ಸ್ವಚ್ಛತೆಗಾಗಿ ೫೦ ಜೆಸಿಬಿಗಳ ಮೂಲಕ ಒಂದೂವರೆ ತಿಂಗಳ ಕಾಲ ಸ್ವಚ್ಛಗೊಳಿಸಿದೆ, ಬ್ಯಾಂಕ್‌ಗಳಲ್ಲಿ ಶೂನ್ಯ ಠೇವಣಿಗಳ ಮೂಲಕ ಬಡವರ ಖಾತೆಗಳನ್ನು ಪ್ರಾರಂಭಿಸಿ ಜನಧನ್, ಪ್ರಧಾನಿ ಸ್ವಧನ್ ಮುಂತಾದ ಯೋಜನೆಗಳಲ್ಲಿ ಯಾವುದೇ ಭದ್ರತೆ ಇಲ್ಲದೆ ೧೦ ಸಾವಿರದಿಂದ ೧೦ ಕೋಟಿವರೆಗೂ ಸಾಲ ಸೌಲಭ್ಯ ವಿತರಿಸುವ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಸಾಲ ವಿತರಿಸಲಾಗಿದೆ ಎಂದು ತಿಳಿಸಿದರು.

170 ಕಿಮೀ ರಸ್ತೆ ನಿರ್ಮಾಣ: ಜಿಲ್ಲೆಯಲ್ಲಿ ಕೇಂದ್ರ ನೆರವಿನಲ್ಲಿ ೧೭೦ ಕಿ.ಮೀ ರಸ್ತೆ ನಿರ್ಮಿಸಲಾಯಿತು, ನಗರದಲ್ಲಿ ತ್ಯಾಜ್ಯ ವಿಲೇವಾರಿಗೆ ಹಲವು ವರ್ಷದಿಂದ ಸಾಧ್ಯವಾಗದ ಜಾಗ ಕಲ್ಪಿಸಿದೆ, ವಿಶ್ವಕರ್ಮ ಯೋಜನೆಯಡಿ ೪-೫ ಸಾವಿರ ಮಂದಿಗೆ ವಿವಿಧ ತರಭೇತಿಗಳನ್ನು ನೀಡಿ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಬೀದಿ ಬದಿ ವ್ಯಾಪಾರಿಗಳಿಗೆ ಯಾವುದೇ ಭದ್ರತೆ ಇಲ್ಲದೆ ಬಡವರ ಸ್ವಾವಲಂಬಿ ಜೀವನಕ್ಕೆ ೧೩ ಸಾವಿರ ಕೋಟಿ ರು. ಸಾಲ ಸೌಲಭ್ಯ ನೀಡಿದೆ, ಈ ಕುರಿತು ಸೌಲಭ್ಯಗಳ ಕುರಿತು ಅರಿವು ಮೂಡಿಸಲು ಈ ವಿಕಸಿತ ಭಾರತದ ರಥಯಾತ್ರೆಯಾಗಿದೆ ಎಂದು ವಿವರಿಸಿದರು.

ಹಾನಗಲ್‌ ರೇಪ್‌ ಕೇಸಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ: ಸಿಎಂ ಸಿದ್ದರಾಮಯ್ಯ

ಮನೆಯಲ್ಲಿ ಜ್ಯೋತಿ ಬೆಳಗಿಸಿ: ಸರ್ಕಾರಿ ಅಧಿಕಾರಿಗಳು ಸರ್ಕಾರದ ಸೌಲಭ್ಯಗಳನ್ನು ಯಾವುದೇ ಆಮಿಷಗಳಿಗೆ ಬಲಿಯಾಗದೆ ಪ್ರಾಮಾಣಿಕವಾಗಿ ಬಡವರಿಗೆ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ತಮ್ಮ ಕರ್ತವ್ಯದಲ್ಲಿ ದೇವರ ಸೇವೆ ಕಾಣುವಂತಾಗಬೇಕು, ಜ.೨೨ ರಂದು ಅಯೋಧ್ಯೆಯಲ್ಲಿ ಶ್ರೀರಾಮಲಲ್ಲ ಪ್ರಾಣಪ್ರತಿಷ್ಠಾಪನೆ ದಿನವನ್ನು ಹಬ್ಬದ ವಾತಾವರಣ ನಿರ್ಮಿಸುವಂತಾಗ ಬೇಕು ಅಂದು ಸಂಜೆ ಪ್ರತಿ ಮನೆಯಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಸಂಭ್ರಮಿಸಬೇಕೆಂದು ಮನವಿ ಮಾಡಿದರು. ಡಿಎಚ್‌ಒ ಡಾ.ಜಗದೀಶ್, ನಗರಸಭೆ ಪೌರಾಯುಕ್ತ ಶಿವಾನಂದ, ಯೋಜನಾಧಿಕಾರಿ ರಾಜೇಶ್ವರಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್. ದಿಶಾ ಸಮಿತಿ ಸದಸ್ಯ ಅಪ್ಪಿನಾರಾಯಣಸ್ವಾಮಿ, ಮುಖಂಡರಾದ ಸಾ.ಮಾ.ಬಾಬು, ಶ್ರೀನಾಥ್, ಕೆಂಬೋಡಿ ನಾರಾಯಣಸ್ವಾಮಿ, ರಾಜೇಶ್ ಸಿಂಗ್, ಓಹಿಲೇಶ್ ಇದ್ದರು.

Follow Us:
Download App:
  • android
  • ios