Asianet Suvarna News Asianet Suvarna News

ರಾಜ್ಯದಲ್ಲಿ ರಸ್ತೆಗೆ ಇಳಿಯಲಿವೆ 300 ಹೊಸ ಮಾದರಿ ಬಸ್

ರಾಜ್ಯದಲ್ಲಿ ಶಿಘ್ರದಲ್ಲಿಯೇ  ಹೊಸ ಮಾದರಿಯ ಬಸ್‌ಗಳು ರಸ್ತೆಯಲ್ಲಿ ಸಂಚಾರ ಮಾಡಲಿವೆ. 300 ಹೊಸ ಬಸ್‌ಗಳು ರಸ್ತೆಗಿಳಿಯಲಿವೆ ಎಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಹೇಳಿದ್ದಾರೆ. 

300 electric buses to run in Karnataka soon Says Lakshman Savadi  snr
Author
Bengaluru, First Published Jan 25, 2021, 7:15 AM IST

ಗದಗ (ಜ.25): ರಾಜ್ಯ​ದಲ್ಲಿ 300 ಇಲೆ​ಕ್ಟ್ರಿಕ್‌ ಬಸ್‌​ಗಳನ್ನು ರಸ್ತೆ​ಗಿಳಿಸಲು ನಿರ್ಧ​ರಿ​ಸ​ಲಾ​ಗಿದ್ದು, ಶೀಘ್ರವೇ ಕಾರ್ಯಾ​ರಂಭ ಮಾಡ​ಲಿವೆ.

 ಮೊದಲ ಹಂತ​ದಲ್ಲಿ ಬೆಂಗ​ಳೂ​ರಿ​ನಲ್ಲಿ 50 ಬಸ್‌​ಗಳು ಹಾಗೂ ಹುಬ್ಬಳ್ಳಿ ವಿಭಾ​ಗಕ್ಕೆ 10 ಬಸ್‌​ಗ​ಳನ್ನು ನೀಡ​ಲಾ​ಗು​ತ್ತಿದ್ದು, ಮುಂಬ​ರುವ ದಿನ​ಗ​ಳಲ್ಲಿ ರಾಜ್ಯಾ​ದ್ಯಂತ ವಿಸ್ತ​ರಿ​ಸ​ಲಾ​ಗು​ವುದು ಎಂದು ಸಾರಿಗೆ ಸಚಿವ, ಉಪ​ಮು​ಖ್ಯ​ಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ. 

ಮೊಬೈಲ್‌ ಶಾಲೆಯಾದ ಬಿಎಂಟಿಸಿ ಹಳೆ ಬಸ್‌..! ..

ಭಾನು​ವಾರ ರಾತ್ರಿ ಇಲ್ಲಿ ಬಸ್‌ ನಿಲ್ದಾ​ಣದ ಲೋಕಾ​ರ್ಪಣೆ ಮಾಡಿ ಮಾತ​ನಾ​ಡಿ​ದ ಅವರು, ಸಾರಿಗೆ ಸಂಸ್ಥೆಯ ಚಾಲ​ಕ​ರಿಗೆ ಉತ್ತಮ ತರ​ಬೇತಿ ನೀಡುವ ನಿಟ್ಟಿ​ನಲ್ಲಿ ರಾಜ್ಯ​ದಲ್ಲಿ ಶೀಘ್ರವೇ 3 ವಿಶೇಷ ತರ​ಬೇತಿ ಕೇಂದ್ರ​ಗ​ಳನ್ನು ಪ್ರಾರಂಭಿ​ಸ​ಲಾ​ಗು​ತ್ತಿದೆ ಎಂದು ತಿಳಿಸಿದರು.

 ಇದೇವೇಳೆ ಸಾರಿಗೆ ಸಂಸ್ಥೆ​ಯಲ್ಲಿ ಹಿರಿಯ ಅಧಿ​ಕಾ​ರಿ​ಗಳು ಚಾಲ​ಕರು ಮತ್ತು ನಿರ್ವಾ​ಹ​ಕ​ರಿಗೆ ವಿಪ​ರೀತ ಕಿರು​ಕುಳ ನೀಡು​ವುದು ನನ್ನ ಗಮ​ನಕ್ಕೆ ಬಂದಿದ್ದು, ಕೂಡಲೇ ನಿಲ್ಲಿಸುವಂತೆ ಎಚ್ಚರಿಕೆ ನೀಡಿದ್ದಾರೆ.

Follow Us:
Download App:
  • android
  • ios