ತಲಾ 4 ಲಕ್ಷ ರುಗಳಂತೆ ಬಿಎಂಟಿಸಿ 10 ಬಸ್ಸುಗಳನ್ನು ಖರೀದಿಸಿದ ಬಿಬಿಎಂಪಿ| ಬಿಎಂಟಿಸಿ ಕಾರ್ಯಾಗಾರದಲ್ಲಿ ಈ ಬಸ್‌ಗಳನ್ನು ಮೊಬೈಲ್‌ ಶಾಲೆಗಳಾಗಿ ಪರಿವರ್ತನೆ| ಮಕ್ಕಳು ಕುಳಿತುಕೊಳ್ಳಲು ಅನುಕೂಲವಾಗುವಂತೆ ವಿನೈಲ್‌ ಪ್ಲೋರಿಂಗ್‌ ಅಳವಡಿಕೆ| ಚಾಲಕನ ಹಿಂಬದಿಗೆ ಬೋರ್ಡ್‌, ಶಿಕ್ಷಕರು ಹಾಗೂ ಸಿಬ್ಬಂದಿ ಕುಳಿತುಕೊಳ್ಳಲು ಆಸನ ವ್ಯವಸ್ಥೆ| 

ಬೆಂಗಳೂರು(ಜ.23): ನಗರದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಯ ಶಾಲೆಗಳಿಗೆ ಕರೆತರುವ ಉದ್ದೇಶದಿಂದ ಬಿಬಿಎಂಪಿಯ ರೂಪಿಸಿರುವ ‘ಮನೆ ಬಾಗಿಲಿಗೆ ಶಾಲೆ’ ಯೋಜನೆಗಾಗಿ ಬಿಎಂಟಿಸಿಯ 10 ಹಳೆಯ ಬಸ್‌ಗಳನ್ನು ಮೊಬೈಲ್‌ ಶಾಲೆಗಳಾಗಿ ಪರಿವರ್ತಿಸಿದೆ.

ಬಿಬಿಎಂಪಿ ತಲಾ 4 ಲಕ್ಷ ರುಗಳಂತೆ ಬಿಎಂಟಿಸಿಯಿಂದ 10 ಬಸ್ಸುಗಳನ್ನು ಖರೀದಿಸಿದೆ. ಬಿಎಂಟಿಸಿ ಕಾರ್ಯಾಗಾರದಲ್ಲಿ ಈ ಬಸ್‌ಗಳನ್ನು ಮೊಬೈಲ್‌ ಶಾಲೆಗಳಾಗಿ ಪರಿವರ್ತಿಸಲಾಗಿದೆ. ಮಕ್ಕಳು ಕುಳಿತುಕೊಳ್ಳಲು ಅನುಕೂಲವಾಗುವಂತೆ ವಿನೈಲ್‌ ಪ್ಲೋರಿಂಗ್‌ ಅಳವಡಿಸಲಾಗಿದೆ. ಚಾಲಕನ ಹಿಂಬದಿಗೆ ಬೋರ್ಡ್‌ ಅಳವಡಿಸಲಾಗಿದೆ. ಶಿಕ್ಷಕರು ಹಾಗೂ ಸಿಬ್ಬಂದಿ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಬಸ್‌ಗೆ ಹಳದಿ ಬಣ್ಣ ಹಚ್ಚಿ ಶಾಲಾ ಬಸ್ಸಿನ ರೂಪ ನೀಡಲಾಗಿದೆ.

ನರೇಗಾ ಅಡಿ ಹಳ್ಳಿ ಶಾಲೆಗಳಿಗೆ ಮೂಲಸೌಕರ್ಯ: ಸುರೇಶ್‌ ಕುಮಾರ್‌

ಪಾಲಿಕೆಯ ಶಿಕ್ಷಕರು ಈ ಮೊಬೈಲ್‌ ಬಸ್‌ಗಳಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳಿರುವ ಪ್ರದೇಶಗಳಿಗೆ ತೆರಳಿ ಪಾಠ ಮಾಡಲಿದ್ದಾರೆ. ಈಗಾಗಲೇ ಬಿಎಂಟಿಸಿ 10 ಹಳೆಯ ಬಸ್‌ಗಳನ್ನು ಮೊಬೈಲ್‌ ಶಾಲೆಗಳಾಗಿ ಪರಿವರ್ತಿಸುವ ಕಾರ್ಯ ಪೂರ್ಣಗೊಳಿಸಿದ್ದು, ಈ ವಾರದೊಳಗೆ ಬಿಬಿಎಂಪಿಗೆ ಹಸ್ತಾಂತರಿಸಲಿದೆ.