ಕೊಪ್ಪಳದಲ್ಲಿ ವಾಂತಿ ಭೇದಿಗೆ 3 ಜನ ಬಲಿ: ವರದಿ ಕೇಳಿದ ಸಿಎಂ ಸಿದ್ದರಾಮಯ್ಯ
ಕಲುಷಿತ ನೀರು ಸೇವಿಸಿ ಜಿಲ್ಲೆಯಲ್ಲಿ ಮೂವರು ಬಲಿಯಾಗಿರುವ ಕುರಿತಂತೆ ವಿಸ್ತ್ರತವಾದ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಅವರಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಶಿವರಾಜ ತಂಗಡಗಿ ಸೂಚಿಸಿದ್ದಾರೆ.
ಕನಕಗಿರಿ (ಜೂ.11): ಕಲುಷಿತ ನೀರು ಸೇವಿಸಿ ಜಿಲ್ಲೆಯಲ್ಲಿ ಮೂವರು ಬಲಿಯಾಗಿರುವ ಕುರಿತಂತೆ ವಿಸ್ತ್ರತವಾದ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಅವರಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಶಿವರಾಜ ತಂಗಡಗಿ ಸೂಚಿಸಿದ್ದಾರೆ. ಮೇ 30ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ತಾಲೂಕಿನ ಬಸರಿಹಾಳ ಗ್ರಾಮದ ಹೊನ್ನಮ್ಮ ನಟೆಗುಡ್ಡ (55) ವಾಂತಿ ಭೇದಿಗೆ ತುತ್ತಾಗಿ ನಿತ್ರಾಣದಿಂದ ಬಳಲಿ ಮೇ 31 ರಂದು ಕೊನೆಯುಸಿರೆಳೆದಿದ್ದಾಳೆ. ಇದೇ ಗ್ರಾಮದ ಒಂದೂವರೆ ವರ್ಷದ ಶೃತಿ ಎನ್ನುವ ಮಗು ಕುಷ್ಟಗಿ ತಾಲೂಕಿನ ತಾವರಗೇರಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದೆ.
ಇನ್ನು ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಮದ 10 ವರ್ಷದ ಬಾಲಕಿಯೊರ್ವಳು ಈ ಸೋಂಕಿಗೆ ಬಲಿಯಾಗಿದ್ದು, ತಕ್ಷಣ ದೃಢೀಕೃತ ವರದಿ ಸಲ್ಲಿಸಿ, ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕೆಂದು ಜಿಲ್ಲಾಡಳಿತಕ್ಕೆ ಸರ್ಕಾರ ಖಡಕ್ ಸೂಚನೆ ನೀಡಲಾಗಿದೆ. ಬಸರಿಹಾಳ ಗ್ರಾಮದ ವಾಂತಿಭೇದಿ ಪ್ರಕರಣದ ವಿಚಾರ ಮುಖ್ಯಮಂತ್ರಿಗಳ ಗಮನಕ್ಕೆ ಹೋಗುತ್ತಿದ್ದಂತೆ ಜಿಲ್ಲಾಡಳಿತ ಮತ್ತು ತಾಲೂಕು ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ವಿವಿಧ ತಾಲೂಕಿನಲ್ಲಿ ಆರೋಗ್ಯ ಜಾಗೃತಿ ಮೂಡಿಸುತ್ತಿದ್ದಾರೆ. ಗ್ರಾಮಗಳಲ್ಲಿನ ಹೊಲಸು, ತ್ಯಾಜ್ಯಗಳ ವಿಲೇವಾರಿಗೆ ಆಯಾ ಗ್ರಾಮ ಪಂಚಾಯಿತಿಗಳು ಮುಂದಾಗಿವೆ.
ನಮಗೇ ನೀರಿಲ್ಲ, ತಮಿಳ್ನಾಡಿಗೆ ಹೇಗೆ ಕೊಡುವುದು: ಸಿಎಂ ಸಿದ್ದರಾಮಯ್ಯ
ಬಸರಿಹಾಳದಲ್ಲಿ ವಾಂತಿ ಭೇದಿ ಸೋಂಕು ಕಾಣಿಸಿಕೊಂಡ ಬೆನ್ನಲ್ಲೆ ಗ್ರಾಮದ ಶಾಲಾ ಕಟ್ಟಡದಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರ ಆರಂಭಿಸಿ ಚಿಕಿತ್ಸೆ ನೀಡುತ್ತಿದ್ದು,ಇಲ್ಲಿಯವರೆಗೆ 40 ರೋಗಿಗಳ ಪೈಕಿ 36 ಜನ ಗುಣಮುಖರಾಗಿದ್ದಾರೆ. ಈ ಮೊದಲು ವಾಂತಿ ಭೇದಿಗೆ ತುತ್ತಾಗಿದ್ದವರಿಗೂ ಕೂಡಾ ಮತ್ತೆ ವೈರಸ್ ಕಾಣಿಸಿಕೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಗಂಗಾವತಿ ಖಾಸಗಿ ಆಸ್ಪತ್ರೆ ಹಾಗೂ ಕನಕಗಿರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದಾರೆ. ಕಳೆದ ಐದಾರು ದಿನಗಳಿಂದಲೂ ಗ್ರಾಮದ 5 ರಿಂದ 6 ರೋಗಿಗಳು ತಾತ್ಕಾಲಿಕ ಆರೋಗ್ಯ ಕೇಂದ್ರಕ್ಕೆ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಡಿಸಿ ಸುಂದರೇಶಬಾಬು, ಸಿಇಒ ರಾಹುಲ್ ರತ್ನಂ ಪಾಂಡೆ, ಡಿಎಚ್‌ಒ ಅಲಕಾನಂದ ಮಳಗಿ, ನೀರು ಮತ್ತು ನೈರ್ಮಲ್ಯ ಇಲಾಖೆಯ ಎಎಇ ಸತೀಶ, ತಹಸೀಲ್ದಾರ ಸಂಜಯ್ ಕಾಂಬಳೆ, ತಾಪಂ ಇಒ ಚಂದ್ರಶೇಖರ, ಗ್ರಾಪಂ ಪಿಡಿಒ ರವೀಂದ್ರ ಕುಲಕರ್ಣಿ ಸೇರಿ ಹಲವು ಅಧಿಕಾರಿಗಳಯ ಗ್ರಾಮಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದು, ಗ್ರಾಮದಲ್ಲಿ ಸ್ವಚ್ಛತೆ ಇಲ್ಲದಿರುವುದು, ಊರ ಹೊರಗಿನ ನೈರ್ಮಲ್ಯ ಪ್ರದೇಶವಾಗಿರುವುದು, ಪೈಪ್‌ಲೈನ್‌ನಲ್ಲಿ ಕಲುಷಿತ ನೀರು ಪೂರೈಕೆಯಾಗಿದ್ದೇ ಗ್ರಾಮದ ಜನ ವಾಂತಿಭೇದಿಗೆ ತುತ್ತಾಗಲು ಕಾರಣವಾಗಿದೆ. ಆದರೆ, ಈ ಬಗ್ಗೆ ನಿರ್ಲಕ್ಷ ತಾಳಿದ ಅಧಿಕಾರಿಗಳ ಮೇಲೆ ಜಿಲ್ಲಾಡಳಿತ ಕ್ರಮ ಕೈಗೊಳ್ಳದಿರುವುದು ಅನುಮಾನಗಳು ಮೂಡಿದೆ.
ಬಿಜೆಪಿಗೆ ಮೋದಿ ಇದ್ದಂತೆ ಕಾಂಗ್ರೆಸ್ ಪಕ್ಷಕ್ಕೆ ಸಿದ್ದರಾಮಯ್ಯ: ಎಂಟಿಬಿ ನಾಗರಾಜ್ ಹೊಗಳಿಕೆ!
ಬಸರಿಹಾಳ ಗ್ರಾಮದಲ್ಲಿ ವಾಂತಿ ಭೇದಿ ಪ್ರಕರಣದ ವರದಿ ಮೇಲಾಧಿಕಾರಿಗಳಿಗೆ ಕಳುಹಿಸಿದೆ. ಜಿಲ್ಲಾಧಿಕಾರಿ, ಜಿ.ಪಂ ಸಿಇಒ ಆದೇಶದ ಮೇರೆಗೆ ಕನಕಗಿರಿ ತಾಲೂಕಿನ 11ಗ್ರಾಪಂ ವ್ಯಾಪ್ತಿಯಲ್ಲಿ ಸ್ವಚ್ಛತೆ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಕೆಲಸ ಮಾಡಲಾಗುತ್ತಿದೆ. ಈ ಕಾರ್ಯಕ್ಕೆ ಪಿಡಿಒ, ಸಿಬ್ಬಂದಿಗಳು ತೊಡಗಿಸಿಕೊಂಡಿದ್ದಾರೆ.
-ಚಂದ್ರಶೇಖರ ಕಂದಕೂರು, ತಾ.ಪಂ ಇಒ.