ನಮಗೇ ನೀರಿಲ್ಲ, ತಮಿಳ್ನಾಡಿಗೆ ಹೇಗೆ ಕೊಡುವುದು: ಸಿಎಂ ಸಿದ್ದರಾಮಯ್ಯ
ಕುಡಿಯಲು ನಮಗೇ ನೀರಿಲ್ಲದಿರುವಾಗ ತಮಿಳುನಾಡಿಗೆ ಎಲ್ಲಿಂದ ಕೊಡುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಮೈಸೂರು (ಜೂ.11): ಕುಡಿಯಲು ನಮಗೇ ನೀರಿಲ್ಲದಿರುವಾಗ ತಮಿಳುನಾಡಿಗೆ ಎಲ್ಲಿಂದ ಕೊಡುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮೊದಲು ನಮಗೆ ಕುಡಿಯುವ ನೀರು, ನಮ್ಮ ಬೆಳೆಗಳಿಗೆ ನೀರು ಕೊಡುವುದು ಮುಖ್ಯ. ನಮಗೇ ನೀರಿಲ್ಲದಿದ್ದರೆ ತಮಿಳುನಾಡಿಗೆ ಕೊಡುವ ಪ್ರಶ್ನೆಯೇ ಇಲ್ಲ. ನಮಗೆ ನೀರಿಲ್ಲ. ನಮ್ಮ ಬೆಳೆಗಳಿಗೂ ನೀರಿಲ್ಲ. ಹಾಗಾಗಿ, ನೀರು ಬಿಡುವ ಮಾತಿಲ್ಲ. ಹಾಗಂತ ತಮಿಳುನಾಡಿಗೆ ನೀರು ಕೊಡಬಾರದು ಅಂತೇನು ಇಲ್ಲ. ಸದ್ಯಕ್ಕೆ ನಮ್ಮಲ್ಲಿ ನೀರು ಇಲ್ಲ ಎಂದರು.
ಜನ ಕೇಳಿದರೆ ವರುಣ ತಾಲೂಕು ಮಾಡುತ್ತೇವೆ: ಜನ ಕೇಳಿದರೆ ಮಾತ್ರ ವರುಣವನ್ನು ತಾಲೂಕು ಕೇಂದ್ರವಾಗಿ ಮಾಡುತ್ತೇವೆ. ಬೊಮ್ಮಾಯಿ ಕೇಳಿದ್ದಕ್ಕೆಲ್ಲ ಮಾಡಲಾಗದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ವರುಣ ಕ್ಷೇತ್ರಕ್ಕೆ ಆಗಮಿಸಿದ ಅವರು ಸುತ್ತೂರು ಹ್ಯಾಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಹುಬ್ಬಳ್ಳಿ ಏರ್ಪೋರ್ಟ್ ವಿಸ್ತರಣೆಗೆ ಕೇಂದ್ರದಿಂದ 273 ಕೋಟಿ: ಪ್ರಲ್ಹಾದ್ ಜೋಶಿ
ಕಳೆದ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ ನಂಜನಗೂಡಲ್ಲಿ ಮಾತನಾಡಿದ್ದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯನವರು ಇಷ್ಟುವರ್ಷ ವರುಣವನ್ನು ಪ್ರತಿನಿಧಿಸಿದ್ದಾರೆ. ಆದರೆ, ಈವರೆಗೂ ವರುಣವನ್ನು ತಾಲೂಕು ಮಾಡಲು ಅವರಿಂದ ಆಗಲಿಲ್ಲ ಎಂದು ಟೀಕಿಸಿದ್ದರು. ಶನಿವಾರ ಈ ವಿಷಯ ಪ್ರಸ್ತಾಪಿಸಿದ ಸಿದ್ದರಾಮಯ್ಯ, ‘ನಾನು ಚುನಾವಣಾ ಪ್ರಚಾರಕ್ಕೆ ಹೋದಾಗ ಜನ ಯಾರೂ ಕೂಡ ವರುಣವನ್ನು ತಾಲೂಕು ಕೇಂದ್ರ ಮಾಡಿ ಎಂದು ಕೇಳಲಿಲ್ಲ. ಇದನ್ನು ಬಿಜೆಪಿಯ ಬೊಮ್ಮಾಯಿ ಹೇಳಿದ್ದು. ಜನ ಕೇಳಿದರೆ ಮಾಡುತ್ತೇವೆ. ಬೊಮ್ಮಾಯಿ ಹೇಳಿದರೆ ಕೇಳುವುದಿಲ್ಲ’ ಎಂದರು.
ಒಳ ಒಪ್ಪಂದ ಕುರಿತ ಸಿ.ಟಿ.ರವಿ ಹೇಳಿಕೆ ಬಗ್ಗೆ ತನಿಖೆ ಆಗುತ್ತಾ?: ಎಚ್.ಡಿ.ಕುಮಾರಸ್ವಾಮಿ
ಸಿದ್ದುಗೆ ರುದ್ರಾಕ್ಷಿ ಮಾಲೆ ಹಾಕಿ ಶ್ರೀಗಳ ಆಶೀರ್ವಾದ: ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ಬಳಿಕ ಸ್ವಕ್ಷೇತ್ರ ವರುಣಕ್ಕೆ ಶನಿವಾರ ಮೊದಲ ಬಾರಿಗೆ ಆಗಮಿಸಿದ ಸಿದ್ದರಾಮಯ್ಯ ಅವರು ಸುತ್ತೂರು ಮಠಕ್ಕೆ ಭೇಟಿ ನೀಡಿ, ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳ ಆಶೀರ್ವಾದ ಪಡೆದರು. ಹಾರ, ತುರಾಯಿ, ಹೂಗುಚ್ಚ ನೀಡದಂತೆ ಸಿದ್ದರಾಮಯ್ಯ ಅವರು ಹೇಳಿದ್ದ ಹಿನ್ನೆಲೆಯಲ್ಲಿ ಸುತ್ತೂರು ಮಠಕ್ಕೆ ಭೇಟಿ ನೀಡಿದ ಸಿಎಂಗೆ ಸ್ವಾಮೀಜಿಯವರು ರುದ್ರಾಕ್ಷಿ ಮಾಲೆ ಹಾಕಿ, ಆಶೀರ್ವದಿಸಿದರು. ಅಲ್ಲದೆ, ವೃಷಭೇಂದ್ರ ವಿಳಾಸ ಪುಸ್ತಕವನ್ನು ಮುಖ್ಯಮಂತ್ರಿಗೆ ನೀಡಿದರು. ಸಿದ್ದರಾಮಯ್ಯ ಅವರೊಂದಿಗೆ ಆಗಮಿಸಿದ್ದ ಸಚಿವರು, ಶಾಸಕರಿಗೂ ಹೂವಿನ ಹಾರದ ಬದಲು ರುದ್ರಾಕ್ಷಿ ಮಾಲೆಗಳನ್ನು ಹಾಕಿ ಶ್ರೀಗಳು ಆಶೀರ್ವದಿಸಿದರು.