Asianet Suvarna News Asianet Suvarna News

Corona Update: ಒಮಿಕ್ರಾನ್ ಭೀತಿ ಮಧ್ಯೆ ಕರ್ನಾಟಕದಲ್ಲಿ ಕೊರೋನಾ ಎಷ್ಟಿದೆ? ಇಲ್ಲಿದೆ ಅಂಕಿ-ಸಂಖ್ಯೆ

* ರೂಪಾಂತರಿ ಒಮಿಕ್ರಾನ್ ವೈರಸ್​ ಭೀತಿ ಮಧ್ಯೆ ಕೊರೋನಾ
* ಕರ್ನಾಟಕದಲ್ಲಿ ಕೊರೋನಾ ಅಂಕಿ-ಸಂಖ್ಯೆ
* ಮಾಹಿತಿ ನೀಡಿದ ರಾಜ್ಯ ಆರೋಗ್ಯ ಇಲಾಖೆ

299 New Coronavirus and 6 deaths In Karnataka On December 7th rbj
Author
Bengaluru, First Published Dec 7, 2021, 8:35 PM IST

ಬೆಂಗಳೂರು, (ಡಿ.07): ವಿಶ್ವಾದ್ಯಂತ ಕೊರೋನಾ (Coronavirus) ರೂಪಾಂತರಿ ಒಮಿಕ್ರಾನ್ ವೈರಸ್​ (Omicron Virus) ವ್ಯಾಪಿಸುತ್ತಿದ್ದು, ಮತ್ತೊಮ್ಮೆ ಪ್ರಾಣಭೀತಿ ಎದುರಾಗಿದೆ. ಈಗಾಗಲೇ ಕರ್ನಾಟಕದಲ್ಲಿ ಎರಡು ಪ್ರಕರಣಗಳು ಪತ್ತೆಯಾಗಿದ್ದು, ಆತಂಕ ಮೂಡಿಸಿದೆ.

ಇನ್ನು ಕರ್ನಾಟಕದಲ್ಲಿ (Karnataka) ಇಂದು (ಡಿ. 7) ಹೊಸದಾಗಿ 299 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದ್ದು. ಸೋಂಕಿನಿಂದ 6 ಮಂದಿ ಮೃತಪಟ್ಟಿದ್ದಾರೆ.

Omicron Threat: ಬೆಂಗ್ಳೂರಿಗರೇ ಎಚ್ಚರ: ಕೊರೋನಾ ಸೋಂಕು ಮತ್ತೆ ಏರಿಕೆ..!

ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 29,98,699 ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 29,53,327 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ಕೊರೊನಾದಿಂದ 38,243 ಜನ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ 7,100  ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

 ಬೆಂಗಳೂರಿನಲ್ಲಿ ಇಂದು(ಮಂಗಳವಾರ) ಒಂದೇ ದಿನ 215 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದ್ದು,  3 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ, ಬೆಂಗಳೂರಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 12,57,875 ಕ್ಕೆ ಏರಿಕೆಯಾಗಿದೆ. 12,57,875 ಸೋಂಕಿತರ ಪೈಕಿ 12,36,229 ಜನರು ಗುಣಮುಖರಾಗಿದ್ದಾರೆ. ನಗರದಲ್ಲಿ ಕೊರೊನಾದಿಂದ ಈವರೆಗೆ 16,351 ಜನರು ಬಲಿಯಾಗಿದ್ದಾರೆ. ಸದ್ಯ ಬೆಂಗಳೂರಲ್ಲಿ 5,294 ಸಕ್ರಿಯ ಪ್ರಕರಣಗಳಿವೆ. 

ಜಿಲ್ಲಾವಾರು ಕೊರೋನಾ ಪ್ರಕರಣಗಳ ವಿವರ
ಬಾಗಲಕೋಟೆ 0, ಬಳ್ಳಾರಿ 3, ಬೆಳಗಾವಿ 1, ಬೆಂಗಳೂರು ಗ್ರಾಮಾಂತರ 3, ಬೆಂಗಳೂರು ನಗರ 215, ಬೀದರ್ 0, ಚಾಮರಾಜನಗರ 0, ಚಿಕ್ಕಬಳ್ಳಾಪುರ 1, ಚಿಕ್ಕಮಗಳೂರು 4, ಚಿತ್ರದುರ್ಗ 0, ದಕ್ಷಿಣ ಕನ್ನಡ 14, ದಾವಣಗೆರೆ 0, ಧಾರವಾಡ 6, ಗದಗ 0, ಹಾಸನ 6, ಹಾವೇರಿ 0, ಕಲಬುರಗಿ 1, ಕೊಡಗು 12, ಕೋಲಾರ 2, ಕೊಪ್ಪಳ 0, ಮಂಡ್ಯ 2, ಮೈಸೂರು 11, ರಾಯಚೂರು 0, ರಾಮನಗರ 0, ಶಿವಮೊಗ್ಗ 4, ತುಮಕೂರು 4, ಉಡುಪಿ 3, ಉತ್ತರ ಕನ್ನಡ 5, ವಿಜಯಪುರ 2, ಯಾದಗಿರಿ ಜಿಲ್ಲೆಯಲ್ಲಿ 0.

ಒಮಿಕ್ರಾನ್ ವೈರಸ್​ ಭೀತಿ
ವಿಶ್ವಾದ್ಯಂತ ಕೊರೊನಾ (Coronavirus) ರೂಪಾಂತರಿಯಾದ ಒಮಿಕ್ರಾನ್ ವೈರಸ್​ (Omicron Virus) ವ್ಯಾಪಿಸುತ್ತಿದ್ದು, ಮತ್ತೊಮ್ಮೆ ಪ್ರಾಣಭೀತಿ ಎದುರಾಗಿದೆ. ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಒಮಿಕ್ರಾನ್ ವೈರಸ್ ಕಾಣಿಸಿಕೊಂಡಿದೆ. ಈಗಾಗಲೇ ಕೊರೊನಾವೈರಸ್​ನ ಅನೇಕ ರೂಪಾಂತರಿ ವೈರಸ್​ಗಳು ಕಾಣಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಕಾಣಿಸಿಕೊಳ್ಳುವ ಸಾಂಕ್ರಾಮಿಕ ರೋಗಗಳು ಈಗಿನ ಕೊವಿಡ್ ಬಿಕ್ಕಟ್ಟಿಗಿಂತ ಮಾನವಕುಲಕ್ಕೆ ಹೆಚ್ಚು ಮಾರಕವಾಗಬಹುದು ಎಂದು ಆಕ್ಸ್‌ಫರ್ಡ್ ವಿಜ್ಞಾನಿ (Oxford Scientist) ಅಭಿಪ್ರಾಯಪಟ್ಟಿದ್ದಾರೆ.

Follow Us:
Download App:
  • android
  • ios