ಬೆಂಗಳೂರು(ಜೂ.05): ರಾಜ್ಯದಲ್ಲಿ ಗುರುವಾರ ಮತ್ತೆ 257 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ 4320ಕ್ಕೆ ಏರಿಕೆಯಾಗಿದೆ. ಅಲ್ಲದೆ ಮೊದಲ ಬಾರಿಗೆ ಒಂದೇ ದಿನ ನಾಲ್ವರು ಸೋಂಕಿತರು ಸಾವಿಗೀಡಾಗಿದ ವರದಿಯಾಗಿದೆ.

257 ಪ್ರಕರಣಗಳ ಪೈಕಿ 155 ಮಂದಿ ಅಂತರ್‌ರಾಜ್ಯ ಹಾಗೂ ಒಬ್ಬರು ವಿದೇಶಿ ಪ್ರಯಾಣಿಕರಾಗಿದ್ದು, ಉಳಿದಂತೆ 105 ಮಂದಿಗೆ ಸ್ಥಳೀಯವಾಗಿ ಸೋಂಕು ಹರಡಿದೆ. 155 ಮಂದಿ ಅಂತರ್‌ರಾಜ್ಯ ಪ್ರಯಾಣಿಕರ ಪೈಕಿ 147 ಮಂದಿ ಮಹಾರಾಷ್ಟ್ರದಿಂದ ವಾಪಸಾದವರೇ ಆಗಿದ್ದಾರೆ.

ಉಡುಪಿಯಲ್ಲಿ 92 ಪ್ರಕರಣ ವರದಿಯಾಗಿದ್ದು ಸೋಂಕಿತರ ಸಂಖ್ಯೆ 564ಕ್ಕೆ ಏರಿಕೆಯಾಗಿದೆ. ಕಲಬುರಗಿಯಲ್ಲಿ ಸೋಂಕಿತರ ಸಂಖ್ಯೆ 510 ತಲುಪುವ ಮೂಲಕ ಎರಡನೇ ಸ್ಥಾನದಲ್ಲಿದೆ. ರಾಯಚೂರಿನಲ್ಲಿ 88 ಪ್ರಕರಣ ವರದಿಯಾಗಿದ್ದು 76 ಮಂದಿಗೆ ಸೋಂಕಿತರ ಸಂಪರ್ಕದಿಂದ ಕೊರೋನಾ ಹರಡಿದೆ. ರಾಯಚೂರಿನಲ್ಲಿ ಸೋಂಕಿತರ ಸಂಖ್ಯೆ356ಕ್ಕೆ ತಲುಪಿದೆ.

ಮೋದಿ ಅಪ್ಪುಗೆ ಮಿಸ್ ಮಾಡಿಕೊಳ್ಳುತ್ತಿದ್ದೇನೆ; ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸನ್‌

ಉಳಿದಂತೆ ಮಂಡ್ಯ, ಹಾಸನ ತಲಾ 15, ದಾವಣಗೆರೆ 13, ಬೆಳಗಾವಿ 12, ಬೆಂಗಳೂರು ನಗರ 9, ದಕ್ಷಿಣ ಕನ್ನಡ 4, ಚಿಕ್ಕಬಳ್ಳಾಪುರ, ಗದಗದಲ್ಲಿ ತಲಾ ಎರಡು, ಬಳ್ಳಾರಿ, ತುಮಕೂರು, ಹಾವೇರಿ, ಮೈಸೂರು, ವಿಜಯಪುರದಲ್ಲಿ ತಲಾ ಒಂದೊಂದು ಪ್ರಕರಣ ವರದಿಯಾಗಿದೆ. ಗುರುವಾರ 4 ಕೊರೋನಾ ಸೋಂಕಿತರ ಸಾವು ವರದಿಯಾಗಿದ್ದು, ಬೆಂಗಳೂರು 2, ಗದಗ ಹಾಗೂ ದಾವಣಗೆರೆಯಲ್ಲಿ ತಲಾ ಒಂದೊಂದು ಕೊರೋನಾ ಸೋಂಕಿತರ ಸಾವು ದೃಢಪಟ್ಟಿದೆ. ಹೀಗಾಗಿ ಒಟ್ಟು ಸಾವಿನ ಸಂಖ್ಯೆ 59ಕ್ಕೆ ಏರಿಕೆಯಾಗಿದೆ. ಸಮಾಧಾನಸ ವಿಷಯವೆಂದರೆ 4,320 ಮಂದಿ ಸೋಂಕಿತರಲ್ಲಿ ಗುರುವಾರ ಗುಣಮುಖರಾದ 106 ಸೇರಿ 1,610 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ 2,651 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇವರಲ್ಲಿ 13 ಮಂದಿ ಐಸಿಯುನಲ್ಲಿದ್ದಾರೆ.

ಸೋಂಕಿನ ಮೂಲ:

ಉಡುಪಿಯ 92 ಸೋಂಕು ಮಹಾರಾಷ್ಟ್ರದಿಂದ ಆಗಮಿಸಿದವರಲ್ಲೇ ವರದಿಯಾಗಿದೆ. ಉಳಿದಂತೆ ಹಾಸನ (15), ಮಂಡ್ಯ (15), ಚಿಕ್ಕಬಳ್ಳಾಪುರ (2) ಮಹಾರಾಷ್ಟ್ರ ಹಿನ್ನೆಲೆಯಿಂದಲೇ ವರದಿಯಾಗಿದೆ. ಉಳಿದಂತೆ ರಾಯಚೂರಿನ 88 ರಲ್ಲಿ ಸೋಂಕಿತರ ಸಂಪರ್ಕದಿಂದ 76, ಮಹಾರಾಷ್ಟ್ರದಿಂದ 9, ತೆಲಂಗಾಣದಿಂದ 1 ಹಾಗೂ 2 ಪ್ರಕರಣದಲ್ಲಿ ಸಂಪರ್ಕ ಪತ್ತೆಯಾಗಿಲ್ಲ. ಬೆಳಗಾವಿಯ 12 ರಲ್ಲಿ ಮಹಾರಾಷ್ಟ್ರದಿಂದ 11, ಅಂತರ್‌ ಜಿಲ್ಲೆ ಹಿನ್ನೆಲೆಯಿಂದ 1, ದಾವಣಗೆರೆಯ 13 ಸೋಂಕಿತರಲ್ಲಿ ಸಂಪರ್ಕದಿಂದ 11 ಸೋಂಕು ವರದಿಯಾಗಿದೆ. ಬೆಂಗಳೂರಿನ 9ರಲ್ಲಿ ಇಬ್ಬರು ಉಸಿರಾಟ ಸಮಸ್ಯೆ, 1 ಮಹಾರಾಷ್ಟ್ರ, 2 ತಮಿಳುನಾಡು, 1 ಆಂಧ್ರಪ್ರದೇಶ, 1 ಸಂಪರ್ಕದಿಂದ ವರದಿಯಾಗಿದ್ದು, ಇಬ್ಬರ ಸಂಪರ್ಕ ಪತ್ತೆ ಕಾರ್ಯ ನಡೆಯುತ್ತಿದೆ.

ಸೌಧಕ್ಕೆ ಹೊರಟ ಸುರೇಶ್ ಕುಮಾರ್ ತಡೆದು ನಿಲ್ಲಿಸಿದ ಯಂಗ್ ಫ್ರೆಂಡ್!

ದಾಖಲೆಯ 4 ಸಾವು:

ಗದಗದಲ್ಲಿ 44 ವರ್ಷದ 4082 ಸೋಂಕಿತ ವ್ಯಕ್ತಿ ಐಎಲ್‌ಐ, ಮಧುಮೇಹ ಹಿನ್ನೆಲೆಯಲ್ಲಿ ಜೂ. 2 ರಂದು ಆಸ್ಪತ್ರೆಗೆ ದಾಖಲಿಸಿದ್ದು ಅಂದೇ ಮೃತಪಟ್ಟಿದ್ದಾರೆ. ಉಳಿದಂತೆ ದಾವಣಗೆರೆಯಲ್ಲಿ 83 ವರ್ಷದ ಮಹಿಳೆ ಎದೆ ನೋವಿನಿಂದ ಮೇ 31 ರಂದು ದಾವಣಗೆರೆ ಆಸ್ಪತ್ರೆಗೆ ದಾಖಲಾಗಿದ್ದು, ಅದೇ ದಿನ ಕಿಡ್ನಿ ವೈಫಲ್ಯದಿಂದ ಮೃತಪಟ್ಟಿದ್ದಾರೆ.

ಬೆಂಗಳೂರು ನಗರದಲ್ಲಿ 65 ವರ್ಷದ ಮಹಿಳೆ ಹಾಗೂ 60 ವರ್ಷದ ಮಹಿಳೆ ತೀವ್ರ ಉಸಿರಾಟ ತೊಂದರೆ, ಜ್ವರ ಕೆಮ್ಮಿನಿಂದ ಜೂ.3 ರಂದು ಆಸ್ಪತ್ರೆಗೆ ದಾಖಲಾಗಿದ್ದು, ತೀವ್ರ ಉಸಿರಾಟ ಸಮಸ್ಯೆಯಿಂದ ಮೃತಪಟ್ಟಿದ್ದಾರೆ. ಮೇ 31ರಿಂದ ಜೂ.3ರವರೆಗೆ ಮೃತಪಟ್ಟಿರುವ ನಾಲ್ಕು ಮಂದಿಗೆ ಸೋಂಕು ಇದ್ದದ್ದು ಗುರುವಾರ ದೃಢಪಟ್ಟಿದೆ.

44 ಚಿಣ್ಣರಿಗೆ ಸೋಂಕು:

257 ಪ್ರಕರಣಗಳ ಪೈಕಿ ದಾವಣಗೆರೆ ಹಾಗೂ ರಾಯಚೂರಿನಲ್ಲಿ 1 ವರ್ಷದ ಮಕ್ಕಳಿಗೆ ಸೋಂಕು ಉಂಟಾಗಿದೆ. ಉಳಿದಂತೆ 14 ವರ್ಷದೊಳಗಿನ ಒಟ್ಟು 44 ಮಂದಿ ಮಕ್ಕಳಿಗೆ ಸೋಂಕು ಉಂಟಾಗಿದೆ.