ಮೋದಿ ಅಪ್ಪುಗೆ ಮಿಸ್ ಮಾಡಿಕೊಳ್ಳುತ್ತಿದ್ದೇನೆ; ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್
ಭಾರತ-ಆಸ್ಪ್ರೇಲಿಯಾ ನಡುವೆ ಗುರುವಾರ ಐತಿಹಾಸಿಕ ಸೇನಾ ಒಪ್ಪಂದ ಏರ್ಪಟ್ಟಿದೆ. ಆನ್‌ಲೈನ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಹಾಗೂ ಆಸ್ಟ್ರೇಲಿಯಾ ಪ್ರಧಾನಿ ಮನಬಿಚ್ಚಿ ಮಾತನಾಡಿದ್ದಾರೆ, ಅಲ್ಲದೇ ಮೋದಿ ಅಪ್ಪುಗೆ ಮಿಸ್ ಮಾಡಿಕೊಳ್ಳುತ್ತಿರುವುದಾಗಿಯೂ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಮೆಲ್ಬರ್ನ್(ಜೂ.05): ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜತೆಗಿನ ಆನ್‌ಲೈನ್ ಶೃಂಗಸಭೆ ಹಿನ್ನೆಲೆಯಲ್ಲಿ ಇತ್ತೀಚೆಗೆ ಮೋದಿ ಅವರಿಗಾಗಿ ಆಸ್ಪ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಅವರು ಭಾರತೀಯ ಖಾದ್ಯವಾದ ಸಮೋಸಾ ಹಾಗೂ ಮಾವಿನಕಾಯಿ ಚಟ್ನಿ ತಯಾರಿಸಿದ್ದರು.
ಇದರ ಮುಂದುವರಿದ ಭಾಗವಾಗಿ ಮಾರಿಸನ್ ಅವರು, ಗುರುವಾರ ನಡೆದ ಶೃಂಗದ ವೇಳೆ, ‘ನಾನು ನಿಮ್ಮನ್ನು ಖುದ್ದು ಭೇಟಿ ಮಾಡುವ ಮುನ್ನ ಗುಜರಾತಿ ಖಿಚಡಿ ತಯಾರಿಸುತ್ತೇನೆ’ ಎಂದು ಹಾಸ್ಯ ಶೈಲಿಯಲ್ಲಿ ಹೇಳಿದರು.
ಮೋದಿಗಾಗಿ ಸಮೋಸಾ, ಮಾವಿನ ಚಟ್ನಿ ತಯಾರಿಸಿದ ಆಸ್ಟ್ರೇಲಿಯಾ ಪ್ರಧಾನಿ!
ಕೊರೋನಾ ಕಾರಣ ಉಭಯ ನಾಯಕರು ಪ್ರತ್ಯಕ್ಷ ಭೇಟಿ ನಡೆಸದೇ ಆನ್‌ಲೈನ್‌ನಲ್ಲೇ ಶೃಂಗಸಭೆ ನಡೆಸಿದರು. ಈ ವೇಳೆ ಮಾತನಾಡಿದ ಮಾರಿಸನ್, ‘ನಾನು ಖುದ್ದಾಗಿ ದಿಲ್ಲಿಗೆ ಬರಬೇಕಿತ್ತು. ‘ಮೋದಿ ಅಪ್ಪುಗೆ’ಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಸಮೋಸಾ ಹಂಚಿಕೊಳ್ಳಬೇಕಿತ್ತು. ಆದರೆ ಮುಂದಿನ ಭೇಟಿಗೆ ಮುನ್ನ ಗುಜರಾತಿ ಖಚಡಿ ಮಾಡುವೆ’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಮೋದಿ, ‘ನಿಮ್ಮ ಸಮೋಸಾ ಭಾರತದಲ್ಲಿ ಜನಪ್ರಿಯ ಆಯಿತು. ಈಗ ಖಿಚಡಿ ಬಗ್ಗೆ ಹೇಳಿದ್ದು ಸಂತಸ ತಂದಿದೆ’ ಎಂದರು.
ಆನೆ ಕೊಂದ ದುರುಳರ ವಿರುದ್ಧ ಕೇರಳ MP ರಾಹುಲ್ ಮೌನ; ಕಿಡಿ ಕಾರಿದ ಮೇನಕಾ ಗಾಂಧಿ!
ಆಸೀಸ್ ಸೇನಾ ನೆಲೆ ಭಾರತದ ಬಳಕೆಗೆ:
ನವದೆಹಲಿ: ಭಾರತ-ಆಸ್ಪ್ರೇಲಿಯಾ ನಡುವೆ ಗುರುವಾರ ಐತಿಹಾಸಿಕ ಸೇನಾ ಒಪ್ಪಂದ ಏರ್ಪಟ್ಟಿದೆ. ಉಭಯ ದೇಶಗಳು ತಮ್ಮ ಸೇನಾ ನೆಲೆಗಳನ್ನು ಪರಸ್ಪರ ಬಳಸಿಕೊಳ್ಳುವ ಒಪ್ಪಂದ ಸೇರಿದಂತೆ 7 ಒಡಂಬಡಿಕೆಗಳಿಗೆ ಸಹಿ ಹಾಕಿವೆ.
ಭಾರತವು ಈಗಾಗಲೇ ಅಮೆರಿಕ, ಸಿಂಗಾಪುರ ಹಾಗೂ ಫ್ರಾನ್ಸ್ ಜತೆ ಇಂಥ ಒಪ್ಪಂದ ಹೊಂದಿದೆ. ಈಗ ಈ ಸಾಲಿಗೆ ಆಸ್ಪ್ರೇಲಿಯಾ ಕೂಡ ಸೇರಿದಂತಾಗಿದೆ. ಇನ್ನು ಇತರ ಒಪ್ಪಂದಗಳು ಗಣಿಗಾರಿಕೆ ಹಾಗೂ ಖನಿಜ, ಸೇನಾ ತಂತ್ರಜ್ಞಾನ, ಶಿಕ್ಷಣ, ಜಲಸಂಪನ್ಮೂಲ, ಸೈಬರ್ ತಂತ್ರಜ್ಞಾನಕ್ಕೆ ಸಂಬಂಧಿಸಿದ್ದಾಗಿವೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಪ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಅವರು ಕೊರೋನಾ ವೈರಸ್ ಕಾರಣ ನೇರವಾಗಿ ಭೇಟಿ ಮಾಡದೇ ಆನ್‌ಲೈನ್‌ನಲ್ಲೇ ಗುರುವಾರ ಶೃಂಗಸಭೆ ನಡೆಸಿದರು. ಭಾರತದ ನಾಯಕರೊಬ್ಬರು ವಿಡಿಯೋ ಶೃಂಗ ನಡೆಸಿದ್ದು ಇದೇ ಮೊದಲು. ಈ ವೇಳೆ ಸೇನಾ ಒಪ್ಪಂದ ಮಾಡಿಕೊಳ್ಳುವ ಒಮ್ಮತಕ್ಕೆ ಬರಲಾಯಿತು. ಸೇನಾ ಸಹಕಾರ ಒಪ್ಪಂದದ ಪ್ರಕಾರ, ಭಾರತ ಹಾಗೂ ಆಸ್ಪ್ರೇಲಿಯಾ ಪರಸ್ಪರರ ಸೇನಾ ನೆಲೆಗಳನ್ನು ರಿಪೇರಿ, ಸಲಕರಣೆಗಳ ಪೂರೈಕೆ- ಇತ್ಯಾದಿ ಕೆಲಸಗಳಿಗೆ ಬಳಸಿಕೊಳ್ಳಲಿವೆ.
ಇದೇ ವೇಳೆ, ಎರಡೂ ದೇಶಗಳು ಭಯೋತ್ಪಾದನೆಯು ಶಾಂತಿಗೆ ಹಾಗೂ ಪ್ರಾದೇಶಿಕ ಭದ್ರತೆಗೆ ಬೆದರಿಕೆ ಎಂದು ಪರಿಗಣಿಸಿ, ಉಗ್ರವಾದ ನಿಗ್ರಹಕ್ಕೆ ಜಂಟಿ ಹೇಳಿಕೆ ಬಿಡುಗಡೆ ಮಾಡಿವೆ.