ಸಂಕ್ರಾಂತಿ ಮರು ದಿನ ಪಕ್ಷ ಸಂಘಟನೆಗೆ ಚಾಲನೆ | ರಾಮನಗರದಿಂದಲೇ ಆರಂಭ: ಮಾಜಿ ಸಿಎಂ
ರಾಮನಗರ(ಜ.12): ರಾಜ್ಯದಲ್ಲಿ 2023ರಲ್ಲಿ ನಡೆಯುವ ವಿಧಾನಸಭಾ ಚುನಾವಣೆ ನನ್ನ ಜೀವನದ ಕೊನೆಯ ಹೋರಾಟ. ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬರುವಂತೆ ಪಕ್ಷ ಸಂಘಟಿಸಲು ಸಂಕ್ರಾಂತಿ ಮರುದಿನ ರಾಮನಗರ ಕ್ಷೇತ್ರದಿಂದಲೇ ಚಾಲನೆ ನೀಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ನಗರದ ವಿಶ್ವನಾಥ ಕಲ್ಯಾಣ ಮಂಟಪದಲ್ಲಿ ರಾಮನಗರ ಕ್ಷೇತ್ರ ವ್ಯಾಪ್ತಿಯ ಗ್ರಾಪಂ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಶ್ರೀರಂಗಪಟ್ಟಣದಲ್ಲಿ 1600 ಟನ್ ಲಿಥಿಯಂ ನಿಕ್ಷೇಪ!
ರಾಮನಗರ ನನಗೆ ರಾಜಕೀಯವಾಗಿ ಪುನರ್ ಜನ್ಮ ನೀಡಿದ ಕ್ಷೇತ್ರ. ಹೀಗಾಗಿ ಜಾಲಮಂಗಲದ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದಲ್ಲಿ ನನ್ನಿಂದಾಗಿರುವ ಅಪಚಾರ ಮನ್ನಿಸುವಂತೆ ಕುಟುಂಬ ಸಮೇತಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಹೊಸ ರಾಜಕೀಯ ಆರಂಭಿಸುತ್ತೇನೆ ಎಂದರು.
ಬದಲಾದ ರಾಜಕೀಯ ಸನ್ನಿವೇಶದಲ್ಲಿ ವಿಧಿಯಿಲ್ಲದೆ ಕಾಂಗ್ರೆಸ್ ಜತೆ ಕೈಜೋಡಿಸಿ ಮೈತ್ರಿ ಸರ್ಕಾರ ರಚಿಸಿದೆವು. ದೋಸ್ತಿ ಸರ್ಕಾರ ಅಧಿಕಾರಕ್ಕೆ ಬಂದ ಒಂದೇ ತಿಂಗಳಲ್ಲಿ ನಾನು ವೇದಿಕೆಯಲ್ಲಿ ಸಾರ್ವಜನಿಕವಾಗಿ ಕಣ್ಣೀರು ಹಾಕುವ ಸನ್ನಿವೇಶ ಬಂತು. ಬಹುಶಃ ರಾಜಕೀಯ ಇತಿಹಾಸದಲ್ಲಿ ಮುಖ್ಯಮಂತ್ರಿಯಾದ ಒಂದೇ ತಿಂಗಳಲ್ಲಿ ಕಣ್ಣೀರು ಹಾಕಿದವನು ನಾನೊಬ್ಬನೇ ಇರಬೇಕು. ಕಾಂಗ್ರೆಸ್ ಜತೆ ಕೈಜೋಡಿಸಿ ಮೈತ್ರಿ ಸರ್ಕಾರ ರಚಿಸಿದ್ದರಿಂದಾದ ತಪ್ಪಿನ ಅರಿವಾಗಿದೆ. ದೋಸ್ತಿ ಸರ್ಕಾರಕ್ಕೆ ಬಂಡೆ ರೀತಿ ಆಸರೆಯಾಗಿ ನಿಂತಿದ್ದೇವೆಂದು ಪರೋಪಕಾರ ಮಾಡಿದವರಂತೆ ಪ್ರಚಾರ ಪಡೆದವರೇ ನನ್ನ ಮೇಲೆ ಕಲ್ಲು ಚಪ್ಪಡಿ ಎಳೆದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು ಕುಮಾರಸ್ವಾಮಿ.
KR ಮಾರ್ಕೆಟ್ಗೆ ಸ್ಮಾರ್ಟ್ ಲುಕ್: ಪಾರ್ಕಿಂಗ್ ವ್ಯವಸ್ಥೆ, ಲಿಫ್ಟ್, ಎಸ್ಕಲೇಟರ್ ಅಳವಡಿಕೆ
ಜೆಡಿಎಸ್ ಬಲಿಷ್ಠವಾಗಿದ್ದ ಕ್ಷೇತ್ರಗಳಲ್ಲೇ ಮೈತ್ರಿ ಸರ್ಕಾರದ ಅವಧಿ ದುರುಪಯೋಗ ಪಡಿಸಿಕೊಂಡ ಕಾಂಗ್ರೆಸ್ ಪ್ರಾಬಲ್ಯ ಕಂಡುಕೊಳ್ಳಲು ವೇದಿಕೆ ಸಿದ್ಧಪಡಿಸಿಕೊಂಡಿತು. ಇದೇ ಕಾರಣಕ್ಕೆ ಪಕ್ಷಕ್ಕೆ ಚುನಾವಣೆಗಳಲ್ಲಿ ಹಿನ್ನಡೆಯಾಗುತ್ತಿದೆ. ನಾವು ಮಾಡಿದ ಲೋಪಗಳಿಗೆ ಪಕ್ಷದ ಮುಖಂಡರು, ಕಾರ್ಯಕರ್ತರು ದೋಷಿಗಳಿಲ್ಲ. ನನ್ನಿಂದಾಗಿರುವ ತಪ್ಪಿನ ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದೇನೆ ಎಂದರು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 12, 2021, 9:23 AM IST