ಬೆಂಗಳೂರು(ಜ.12): ನಗರದ ಕೃಷ್ಣ​ರಾ​ಜೇಂದ್ರ ಮಾರು​ಕ​ಟ್ಟೆಯ ಪಾರಂಪರಿಕ ಕಟ್ಟ​ಡ​ವನ್ನು 34 ಕೋಟಿ ರು. ವೆಚ್ಚ​ದಲ್ಲಿ ಅಭಿ​ವೃ​ದ್ಧಿ​ಪ​ಡಿ​ಸಲು ಯೋಜನೆ ರೂಪಿ​ಸಿ​ಕೊ​ಳ್ಳ​ಲಾ​ಗಿದೆ ಎಂದು ಬಿಬಿ​ಎಂಪಿ ಆಡ​ಳಿ​ತಾ​ಧಿ​ಕಾರಿ ಗೌರವ್‌ ಗುಪ್ತಾ ತಿಳಿ​ಸಿ​ದರು.

ಸೋಮ​ವಾರ ಬೆಂಗಳೂರು ಸ್ಮಾಟ್‌ ಸಿಟಿ ಲಿಮಿಟೆಡ್‌ ಹಾಗೂ ಬಿಬಿ​ಎಂಪಿಯ ಅಧಿ​ಕಾ​ರಿ​ಗ​ಳೊಂದಿಗೆ ಕೆ.ಆರ್‌.ಮಾರು​ಕ​ಟ್ಟೆಗೆ ಭೇಟಿ ನೀಡಿ ಪರಿ​ಶೀ​ಲಿಸಿದ ನಂತರ ಸುದ್ದಿ​ಗಾ​ರ​ರೊಂದಿ​ಗೆ ಮಾತ​ನಾ​ಡಿದ ಅವರು, ಕೆ.ಆರ್‌. ಮಾರು​ಕ​ಟ್ಟೆಕಟ್ಟಡವನ್ನು ಸ್ಮಾರ್ಟ್‌ ಸಿಟಿ ಯೋಜನೆಯಡಿ 34 ಕೋಟಿ ರು. ವೆಚ್ಚದಲ್ಲಿ ನವೀಕರಣವಾಗ​ಲಿ​ದ್ದು, ನೀಲನಕ್ಷೆ ಸಿದ್ಧ​ವಾ​ಗಿ​ದೆ.

ಕಟ್ಟಡವನ್ನು ಸುಸಜ್ಜಿತ ಕಟ್ಟಡವನ್ನಾಗಿ ಪರಿವರ್ತಿಸಿ ಪಾರ್ಕಿಂಗ್‌ ವ್ಯವಸ್ಥೆ, ರಾರ‍ಯಂಪ್‌ ಹಾಗೂ ಲಿಫ್ಟ್‌ ವ್ಯವಸ್ಥೆ ಕಲ್ಪಿ​ಸ​ಲಾ​ಗು​ವು​ದು. ಇನ್ನು ಮಾಂಸ ಮಾರುಕಟ್ಟೆಯ ಸ್ಥಳದಲ್ಲಿರುವ ಮೂರು ಕಟ್ಟಡ (ಬ್ಲಾಕ್‌)ಗಳನ್ನು ತೆರವುಗೊಳಿಸಿ 14 ಕೋಟಿ ರು. ವೆಚ್ಚದಲ್ಲಿ ನೆಲ ಮಹಡಿಯಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಮಾಡ​ಲಾ​ಗು​ವು​ದು. 17 ಕೋಟಿ ರು. ವೆಚ್ಚದಲ್ಲಿ ಕೆ.ಆ​ರ್‌. ಮಾರುಕಟ್ಟೆಜಂಕ್ಷನ್‌ ಅಭಿವೃದ್ಧಿ, ಬಸ್‌ ಟರ್ಮಿನಲ…(ಬಸ್‌ ನಿಲುಗಡೆ ಸ್ಥಳ) ಹಾಗೂ ಸಬ್‌ ವೇ(ಪಾದಚಾರಿ ಸುರಂಗಮಾರ್ಗ) ಸೇರಿ​ದಂತೆ ವಿವಿಧ ಯೋಜ​ನೆ​ಗ​ಳನ್ನು ರೂಪಿ​ಸಿ​ಕೊ​ಳ್ಳ​ಲಾ​ಗಿ​ದೆ. ಒಂದು ವರ್ಷದಲ್ಲಿ ಕಾಮ​ಗಾರಿ ಮುಗಿಸಲು ಗಡುವು ನೀಡಲಾಗಿದೆ ಎಂದು ತಿಳಿಸಿದರು.

ನಗರದಲ್ಲಿ 760 ಕೋವಿಡ್‌ ಲಸಿಕಾ ಕೇಂದ್ರ ಸ್ಥಾಪನೆ

ಕಾರ್ಯಪಾಲಕ ಎಂಜಿ​ನಿ​ಯ​ರ್‌ ಚಂದ್ರಶೇಖರ್‌ ಮಾತನಾಡಿ, ಈಗಾಗಲೇ ಬಸ್‌ ಟರ್ಮಿನಲ…(ಬಸ್‌ ನಿಲುಗಡೆ ಸ್ಥಳ ಅಭಿವೃದ್ಧಿ) ಕಾಮಗಾರಿ ಪ್ರಾರಂಭ​ವಾ​ಗಿದೆ. ಒಂದು ಭಾಗದಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿ ಎರಡು ತಿಂಗಳಲ್ಲಿ ಪೂರ್ಣಗೊಳಿಸಿದ ನಂತರ ಮತ್ತೊಂದು ಭಾಗ​ದಲ್ಲಿ ಕಾಮ​ಗಾರಿ ಆರಂಭಿಸಲಾಗುವುದು. ಪಾದಚಾರಿ ಸುರಂಗಮಾರ್ಗದಲ್ಲಿ ಆರು ಮಾರ್ಗಗಳಿದ್ದು, ಮೊದಲಬಾರಿಗೆ ಎಸ್ಕಲೇಟರ್‌ ಇರ​ಲಿದೆ. ಪಾದಚಾರಿಗಳ ಅನು​ಕೂ​ಲ​ಕ್ಕಾ​ಗಿ ಎಲ…ಇಡಿ ದೀಪಗಳ ಅಳವಡಿಕೆ, ಕುಡಿಯುವ ನೀರಿನ ವ್ಯವಸ್ಥೆ ಮಾಡ​ಲಾ​ಗು​ತ್ತಿದೆ. ಅಲ್ಲ​ದೆ, ಸಂಚಾರ ದಟ್ಟಣೆ ಕಡಿಮೆ ಮಾಡುವ, ಪಾದಚಾರಿಗಳ ಸುಗಮ ಸಂಚಾರಕ್ಕೆ ಅಗ​ತ್ಯ​ವಿ​ರುವ ಮಾದ​ರಿ​ಯಲ್ಲಿ ಜಂಕ್ಷನ್‌ ಅಭಿವೃದ್ಧಿ ಪಡಿ​ಸಲು ಯೋಜನೆ ರೂಪಿ​ಸಿ​ಕೊ​ಳ್ಳ​ಲಾ​ಗಿ​ದೆ ಎಂದು ಮಾಹಿತಿ ನೀಡಿ​ದರು.

ಈ ವೇಳೆ ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್‌, ದಕ್ಷಿಣ ವಲಯ ವಿಶೇಷ ಆಯುಕ್ತ ಬಸವರಾಜು, ಪಶ್ಚಿಮ ವಲಯ ಜಂಟಿ ಆಯುಕ್ತ ಶಿವಸ್ವಾಮಿ ಹಾಗೂ ಸ್ಮಾರ್ಟ್‌ ಸಿಟಿ ಮುಖ್ಯ ಎಂಜಿ​ನಿ​ಯ​ರ್‌ ರಂಗನಾಥ ನಾಯ್‌್ಕ ಉಪಸ್ಥಿತರಿದ್ದರು.

ಸ್ಮಾರ್ಟ್‌ ಸಿಟಿ ಅಧಿಕಾರಿಗಳಿಗೆ ತರಾಟೆ

ಸ್ಮಾರ್ಟ್‌ ಸಿಟಿ ಯೋಜನೆಯಡಿ ಅಭಿವೃದ್ಧಿ ಪಡಿಸಲಾಗುತ್ತಿರುವ ರಸ್ತೆಗಳನ್ನು ಸೋಮವಾರ ಪರಿಶೀಲನೆ ನಡೆಸಿದ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್‌ ಗುಪ್ತಾ, ಈ ಹಿಂದೆ ನೀಡಲಾಗಿದ್ದ ನಿರ್ದೇಶನಗಳನ್ನು ಪಾಲನೆ ಮಾಡದ ಹಿನ್ನೆಲೆಯಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಜತೆಗೆ ಹೇಯ್ಸ… ರಸ್ತೆ, ಮೆಗ್ರಾತ್‌ ರಸ್ತೆ, ರೇಸ್‌ ಕೋರ್ಸ್‌ ರಸ್ತೆ, ವುಡ್‌ ಸ್ಟ್ರೀಟ್‌ ಹಾಗೂ ಟೇಟ್‌ಲೇನ್‌ ರಸ್ತೆಗಳನ್ನು ಜ.18ರ ಒಳ​ಗಾಗಿ ಮುಗಿ​ಸುವಂತೆ ತಾಕೀತು ಮಾಡಿ​ದರು.