ಕೇಂದ್ರ ಪರಮಾಣು ಖನಿಜ ನಿರ್ದೇಶನಾಲಯ ಪರಿಶೋಧನಾ ಇಲಾಖೆಯ ಪ್ರಾಥಮಿಕ ಸಮೀಕ್ಷೆಯಿಂದ ಮೇಲ್ನೋಟಕ್ಕೆ ಖಚಿತ
ಶ್ರೀರಂಗಪಟ್ಟಣ(ಜ.12): ತಾಲೂಕಿನ ಕರೀಘಟ್ಟಬೆಟ್ಟಹಿಂಭಾಗದ ತಪ್ಪಲಿನಲ್ಲಿ ಕೇಂದ್ರ ಪರಮಾಣು ಖನಿಜ ನಿರ್ದೇಶನಾಲಯ ಪರಿಶೋಧನಾ ಇಲಾಖೆಯ ಪ್ರಾಥಮಿಕ ಸಮೀಕ್ಷೆಯ ಪ್ರಕಾರ 1600 ಟನ್ ನಷ್ಟುಲಿಥಿಯಂ ನಿಕ್ಷೇಪವಿರುವುದು ಮೇಲ್ನೋಟಕ್ಕೆ ಖಚಿತವಾಗಿರುವುದರಿಂದ ದೇಶದ ಆರ್ಥಿಕತೆ ಮತ್ತು ಸುರಕ್ಷತೆಗೆ ಜಿಲ್ಲೆಯ ಕೊಡುಗೆ ಅಪಾರವಾಗುವ ಸಾಧ್ಯತೆ ಹೆಚ್ಚಾಗಲಿದೆ.
ತಾಲೂಕಿನ ಕರೀಘಟ್ಟಬೆಟ್ಟಹಿಂಭಾಗದ ಅಲ್ಲಾಪಟ್ಟಣ ಗ್ರಾಮದ 150 ಎಕರೆ ಪ್ರದೇಶದಲ್ಲಿರುವ ಈ ಲೀಥಿಯಂ ನಿಕ್ಷೇಪದ ಶೋಧವನ್ನು ಪ್ರಧಾನ ಮಂತ್ರಿ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸ್ತುತ್ತಿರುವ ಕೇಂದ್ರ ಅಣುಶಕ್ತಿ ನಿರ್ದೇಶನಾಲಯ (ಅಟಾಮಿಕ್ ಮಿನರಲ್ಸ್ ಡೈರೆಕ್ಟಸರ್) ವಿಜ್ಞಾನಿಗಳ ತಂಡ ಪರಿಶೀಲನೆಯಲ್ಲಿ ತೊಡಗಿದೆ.
ಸ್ಯಾನ್‌ಫ್ರಾನ್ಸಿಸ್ಕೋದಿಂದ 16 ತಾಸಲ್ಲಿ ಪ್ರಯಾಣಿಕರ ಹೊತ್ತು ತಂದು ಏರ್ ಇಂಡಿಯಾ ಲೇಡಿ ಪೈಲಟ್‌ಗಳು
ವಿದ್ಯುತ್ ಚಾಲಿತ ಕಾರು ಮತ್ತು ಬೈಕ್ ಮತ್ತು ಗೃಹೋಪಯೋಗಿ ವಸ್ತುಗಳಾದ ಲ್ಯಾಪ್‌ಟಾಪ್‌ಗಳ ಬ್ಯಾಟರಿಗೆ ಅವಶಕ್ಯವಾಗಿರೋ ಈ ಲೀಥಿಯಂ ಸಂಪತ್ತು ಭಾರತದಲ್ಲೇ ಮಂಡ್ಯದಲ್ಲಿ ಪತ್ತೆಯಾಗಿರುವ ಅಪರೂಪದ ಖನಿಜ ನಿಕ್ಷೇಪವಾಗಿದೆ. ಈ ಬಗ್ಗೆ ಒಂದಿಷ್ಟೂಮಾಹಿತಿ ಬಿಟ್ಟುಕೊಡದ ವಿಜ್ಞಾನಿಗಳ ತಂಡ ಲೀಥಿಯಂ, ಕಾಗೆ ಬಂಡಾರ ಸೇರಿದಂತೆ ಹಲವು ಖನಿಜಗಳ ನಿಕ್ಷೇಪವನ್ನು ಈ ಪ್ರದೇಶದಲ್ಲಿ ಹೊಂದಿರುವುದು ಖಾತ್ರಿಯಾಗಿದೆ ಎಂದು ಹೇಳಲಾಗುತ್ತಿದೆ.
ಪರಮಾಣು ಇಂಧನ ತಯಾರಿಕೆ ಸೇರಿದಂತೆ ವಿವಿಧ ಪ್ರಕ್ರಿಯೆಗಳ ಪರಿಕರಗಳಾಗಿ ಉಪಯೋಗಿಸಲ್ಪಡುವ ಕೋಲಂಬೈಚ್ ಟ್ಯಾಂಟ್ ಲೈಟ್ ನಿಯೋಮಿಯಂ ಟ್ಯಾಂಟಲೈಟ್ ಅಂಶಗಳಿರುವ ಖನಿಜ ಅಗ್ನೀಶಿಲೆಯ ಪ್ರಕಾರವಾದ ಪ್ಮೆಗಟೈಟ್ ಇಲ್ಲಿನ ಶಿಲೆಯಲ್ಲಿ ದೊರೆಯುತ್ತಿದೆ. ದೇಶದ ಛತ್ತೀಸ್ ಗಡ ಬಿಟ್ಟರೆ ತಾಲೂಕಿನ ಅಲ್ಲಾಪಟ್ಟಣ ಮತ್ತು ಮರಳಗಾಲ ಗ್ರಾಮಗಳಲ್ಲಿ ಈ ನಿಕ್ಷೇಪ ಅಧಿಕೃತಗೊಂಡಿದೆ ಎಂದು ತಿಳಿದುಬಂದಿದೆ.
KR ಮಾರ್ಕೆಟ್‌ಗೆ ಸ್ಮಾರ್ಟ್ ಲುಕ್: ಪಾರ್ಕಿಂಗ್ ವ್ಯವಸ್ಥೆ, ಲಿಫ್ಟ್, ಎಸ್ಕಲೇಟರ್ ಅಳವಡಿಕೆ
ವಿಜ್ಞಾನಿಗಳ ಪ್ರಕಾರ ಈ ಭಾಗದ ಭೂಮಿಯನ್ನು ಶಿಸ್ವ್ ಬೆಲ್ಟೆ$್ಗ ಸೇರಿದ ಅಗ್ನಿಶಿಲಾ ಪದರಗಳಲ್ಲಿ ರೇರ್ ಅರ್ಥ ಮಿನರಲ… ಗಳಾದ ಕೊಲಂಬೈಚ್ ಟ್ಯಾಂಟಲೈಚ್, ನಿಯೋಮಿಯಂ ಟ್ಯಾಂಟಲಮ… ಖನಿಜಗಳು ದೊರೆಯುತ್ತದೆ ಎನ್ನಬಹುದಾಗಿದೆ.
40 ವರ್ಷಗಳ ಹಿಂದೆಯೇ ಖನಿಜದ ಧೃಡ
ಇಲ್ಲಿನ ಪ್ರದೇಶದಲ್ಲಿ 40 ವರ್ಷಗಳ ಹಿಂದೆಯೇ ಪರಮಾಣುವಿಗೆ ಸಂಬಂಧಿಸಿದ ಖನಿಜ ಸಂಪತ್ತನ್ನು ಧೃಢಪಡಿಸಿಕೊಂಡಿದ್ದ ಕೇಂದ್ರ ಸರ್ಕಾರ ತಜ್ಞ ಅಧಿಕಾರಿಗಳು ಹಾಗೂ ವಿಜ್ಞಾನಿಗಳ ತಂಡದಿಂದ 1998ರ ವರೆಗೆ 15 ವರ್ಷಗಳ ಕಾಲ ಖನಿಜ ಹೊರತೆಗೆಯುವ ಕಾರ್ಯ ನಡೆಸಿದ್ದರು. ಇದೀಗ ಮತ್ತೊಮ್ಮೆ ಪರಿಶೀಲನೆ ಹಾಗೂ ಇತರೆ ಪರೀಕ್ಷೆಗಳ ಮೂಲಕ ಖನಿಜ ಪರಿಶೋಧನೆ (ಮಿನರಲ… ಎಕ್ಸೋ ಪ್ಲೇರೇಷನ…) ಮೂಲಕ ಭೂಮಿಯ ಆಳದಲ್ಲಿ ಎಷ್ಟುಅಡಿವರೆಗೆ ಖನಿಜ ಸಂಪತ್ತು ಲಭ್ಯವಾಗಲಿದೆ ಎಂಬುದನ್ನು ಯಂತ್ರಗಳ ಸಹಾಯದಿಂದ ಮಣ್ಣಿನ ರಾಶಿಯನ್ನು ನೀರಿನಲ್ಲಿ ಜರಡಿಯಾಡಿ ನಿಯೋಮಿಯಂ ಟ್ಯಾಂಟಲಂನನ್ನು ಹೆಕ್ಕೆ ತೆಗೆದು ಅದರ ಲಭ್ಯತೆಯ ಪ್ರಮಾಣವನ್ನು ಪತ್ತೆಮಾಡುವ ಕ್ರಮವನ್ನು ಕೈಗೊಂಡಿದ್ದರು.
ಸ್ಥಳಿಯ ರೈತರ ವಿರೋಧ
ಲಿಥಿಯಂ ಪತ್ತೆಯಾಗಿರುವ ಜಮೀನಿನಲ್ಲಿ ಕೇಂದ್ರ ಸರ್ಕಾರದ ಉದ್ದೇಶಿತ ಖನಿಜ ಗಣಿಗಾರಿಕೆಗೆ ಸ್ಥಳಿಯ ರೈತರು ಆಕ್ಷೇಪ ವ್ಯಕ್ತಪಡಿಸಿ ವಿರೋಧಿಸಿದ್ದಾರೆ. ಸರ್ಕಾರ ಇಲ್ಲಿನ ಬಡರೈತರಿಗೆ ನೀಡಿರುವ ದರ್ಖಾಸ್ತು ಭೂಮಿಯಲ್ಲಿ ಸಾಗುವಳಿ ನಡೆಸುತ್ತಿದ್ದಾರೆ. ಇದೀಗ ಈ ಭೂಮಿಯನ್ನು ಕಿತ್ತುಕೊಳ್ಳಲು ಕೇಂದ್ರ ಯತ್ನಿಸುತ್ತಿದ್ದಾರೆ. ರೈತರ ಅನುಮತಿಯಿಲ್ಲದೆ ಇಲ್ಲಿ ಗಣಿಗಾರಿಕೆ ನಡೆಸುತ್ತಿದ್ದಾರೆ. ಇದಕ್ಕೆ ಸರಿಯಾದ ಪರಿಹಾರ ವಿತರಿಸಿ ಮುಂದಿನ ನಡೆ ಕೈಗೊಳ್ಳಲಿ ಎಂದು ಆಗ್ರಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
