ಕರ್ನಾಟಕದಲ್ಲಿ 2000 ಸನಿಹಕ್ಕೆ ಕೋವಿಡ್ ಸೋಂಕು ಏರಿಕೆ: 3 ಸಾವು
ರಾಜ್ಯದಲ್ಲಿ ಕೊರೋನಾ ಹೊಸ ಪ್ರಕರಣಗಳು 2 ಸಾವಿರದ ಸನಿಹಕ್ಕೆ ಧಾವಿಸಿದ್ದು, ಗುರುವಾರ 1889 ಪ್ರಕರಣ ಪತ್ತೆಯಾಗಿದೆ. 1587 ಮಂದಿ ಗುಣಮುಖರಾಗಿದ್ದಾರೆ. ಮೂವರು ಸೋಂಕಿತರು ಸಾವಿಗೀಡಾಗಿದ್ದಾರೆ.
ಬೆಂಗಳೂರು (ಜು.29): ರಾಜ್ಯದಲ್ಲಿ ಕೊರೋನಾ ಹೊಸ ಪ್ರಕರಣಗಳು 2 ಸಾವಿರದ ಸನಿಹಕ್ಕೆ ಧಾವಿಸಿದ್ದು, ಗುರುವಾರ 1889 ಪ್ರಕರಣ ಪತ್ತೆಯಾಗಿದೆ. 1587 ಮಂದಿ ಗುಣಮುಖರಾಗಿದ್ದಾರೆ. ಮೂವರು ಸೋಂಕಿತರು ಸಾವಿಗೀಡಾಗಿದ್ದಾರೆ. ಸದ್ಯ 9135 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. 31 ಸಾವಿರ ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ.5.9 ರಷ್ಟು ದಾಖಲಾಗಿದೆ. ಬುಧವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು 2 ಸಾವಿರ ಕಡಿಮೆಯಾಗಿವೆ. ಆದರೂ, ಹೊಸ ಪ್ರಕರಣಗಳು 265 ಹೆಚ್ಚಳವಾಗಿವೆ.
(ಬುಧವಾರ 1624 ಕೇಸ್, ಸಾವು ಎರಡು) ದಕ್ಷಿಣ ಕನ್ನಡದಲ್ಲಿ 15 ವರ್ಷದ ಬಾಲಕ, ದಾವಣಗೆರೆಯಲ್ಲಿ 87 ವರ್ಷದ ವೃದ್ಧೆ, ಬೆಳಗಾವಿಯಲ್ಲಿ 89 ವರ್ಷದ ವೃದ್ಧ ಸಾವಿಗೀಡಾಗಿದ್ದಾರೆ. ಕಳೆದ ಫೆ.17 ರಂದು 1830 ಹೊಸ ಪ್ರಕರಣಗಳು ಪತ್ತೆಯಾಗಿದ್ದವು. 160 ದಿನಗಳ ಬಳಿಕ ಅಧಿಕ ಪ್ರಕರಣಗಳು ಪತ್ತೆಯಾಗಿವೆ. ಸಕ್ರಿಯ ಸೋಂಕಿತರ ಪೈಕಿ 85 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 10 ಮಂದಿ ಐಸಿಯು, 9 ಮಂದಿ ಆಕ್ಸಿಜನ್, 66 ಮಂದಿ ಸಾಮಾನ್ಯ ಹಾಸಿಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 9069 ಮಂದಿ ಮನೆಯಲ್ಲಿ ಆರೈಕೆಯಲ್ಲಿದ್ದಾರೆ.
ಕರ್ನಾಟಕದಲ್ಲಿ 1624 ಮಂದಿಗೆ ಕೋವಿಡ್, 2 ಸಾವು: ಶೇ.4.8 ಪಾಸಿಟಿವಿಟಿ
ಬೆಂಗಳೂರಿನಲ್ಲಿ 1500ರ ಗಡಿಗೆ ತಲುಪಿದ ಕೊರೋನಾ: ಬೆಂಗಳೂರಿನಲ್ಲಿ ಗುರುವಾರ 1,475 ಕೊರೋನಾ ಪ್ರಕರಣ ಪತ್ತೆಯಾಗಿದ್ದು, ಪಾಸಿಟಿವಿಟಿ ದರ ಶೇ.7.06 ರಷ್ಟಿದೆ. 1,288 ಮಂದಿ ಗುಣಮುಖರಾಗಿದ್ದಾರೆ. ಸೋಂಕಿನಿಂದ ಮೃತಪಟ್ಟವರದಿಯಾಗಿಲ್ಲ. ನಗರದಲ್ಲಿ ಸದ್ಯ 7,486 ಸಕ್ರಿಯ ಸೋಂಕು ಪ್ರಕರಣಗಳಿದ್ದು, ಈ ಪೈಕಿ 23 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 21,013 ಮಂದಿ ಕೋವಿಡ್ ವಿರುದ್ಧ ಲಸಿಕೆ ಪಡೆದುಕೊಂಡಿದ್ದಾರೆ.
1114 ಮಂದಿ ಮೊದಲ ಡೋಸ್, 7155 ಮಂದಿ ಎರಡನೇ ಡೋಸ್ ಮತ್ತು 12744 ಮಂದಿ ಮೂರನೇ ಡೋಸ್ ಲಸಿಕೆ ಪಡೆದಿದ್ದಾರೆ. ನಗರದಲ್ಲಿ 18,088 ಮಂದಿಗೆ ಕೊರೋನಾ ಸೋಂಕು ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ 14569 ಆರ್‌ಟಿಪಿಸಿಆರ್ ಹಾಗೂ 3,519 ಮಂದಿಗೆ ರಾರಯಪಿಡ್ ಆ್ಯಂಟಿಜನ್ ಪರೀಕ್ಷೆ ನಡೆಸಲಾಗಿದೆ. ಗುರುವಾರ ಮಹದೇವಪುರ ವಲಯದಲ್ಲಿ ಹೊಸದಾಗಿ ಮೂರು ಕಂಟೈನ್ಮೆಂಟ್ ಪ್ರದೇಶ ಸೃಷ್ಟಿಯಾಗಿವೆ. ನಗರದಲ್ಲಿ ಒಟ್ಟು 24 ಸಕ್ರಿಯ ಕಂಟೈನ್ಮೆಂಟ್ ಪ್ರದೇಶಗಳಿವೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.
ಉಡುಪಿಯಲ್ಲಿ 8 ಮಂದಿಗೆ ಕೋವಿಡ್: ಜಿಲ್ಲೆಯಲ್ಲಿ ಗುರುವಾರ 402 ಮಂದಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದ್ದು, ಅವರಲ್ಲಿ ಉಡುಪಿ ತಾಲೂಕಿನ 7 ಮತ್ತು ಕಾರ್ಕಳ ತಾಲೂಕಿನ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಈದಿನ 10 ಸೋಂಕಿತರು ಗುಣಮುಖರಾಗಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ 24 ಮಂದಿ ಸಕ್ರಿಯ ಸೋಂಕಿತರಿದ್ದಾರೆ. ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 540 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ.
ಮಂಕಿಪಾಕ್ಸ್ ಎಚ್ಚರಿಕೆಯ ಗಂಟೆ, ಸಾಂಕ್ರಾಮಿಕವಾಗಿ ಹರಡುವ ಭೀತಿ; WHO ವಿಜ್ಞಾನಿ
ದ.ಕ.ದಲ್ಲಿ 20 ಮಂದಿಗೆ ಕೊರೋನಾ: ದ.ಕ. ಜಿಲ್ಲೆಯಲ್ಲಿ ಗುರುವಾರ 20 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. 16 ಮಂದಿ ಗುಣಮುಖರಾಗಿದ್ದಾರೆ. ಒಬ್ಬರು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 80ಕ್ಕೆ ಏರಿದೆ. ಜಿಲ್ಲೆಯಲ್ಲಿ ಇದುವರೆಗೆ 1,36,197 ಮಂದಿ ಸೋಂಕಿತರಾಗಿದ್ದು, ಅವರಲ್ಲಿ 1,34,263 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 1854 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಬುಲೆಟಿನ್ ತಿಳಿಸಿದೆ.