Covid Crisis: ರಾಜ್ಯದಲ್ಲಿ 1333 ಪ್ರಕರಣ, 46 ದಿನಗಳಲ್ಲೇ ಅತೀ ಕನಿಷ್ಠ ಕೇಸ್..!
* ಜ.3 ರಂದು 1,290 ಪ್ರಕರಣ ದಾಖಲಾದ ಬಳಿಕದ ಅತ್ಯಂತ ಕನಿಷ್ಠ ಪ್ರಕರಣ
* ಶೇ.1.59ರ ಪಾಸಿಟಿವಿಟಿ ದರ ದಾಖಲು
* ದೇಶದಲ್ಲಿ 25,920 ಹೊಸ ಕೋವಿಡ್ ಕೇಸ್
ಬೆಂಗಳೂರು(ಫೆ.19): ರಾಜ್ಯದಲ್ಲಿ(Karnataka) ದೈನಂದಿನ ಕೊರೋನಾ(Coronavirus) ಪ್ರಕರಣಗಳ ಇಳಿಕೆಯ ಜೊತೆ ಜೊತೆಗೆ ಸೋಂಕಿನಿಂದ ಮೃತಪಡುತ್ತಿರುವವರ ಸಂಖ್ಯೆಯಲ್ಲೂ ಕುಸಿತ ಕಂಡು ಬಂದಿದೆ. ಶುಕ್ರವಾರ 1,333 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು 19 ಮಂದಿ ಮೃತರಾಗಿದ್ದಾರೆ. 4,890 ಮಂದಿ ಚೇತರಿಸಿಕೊಂಡಿದ್ದಾರೆ.
ಜನವರಿ 3 ರಂದು 1,290 ಪ್ರಕರಣ ದಾಖಲಾದ ಬಳಿಕದ ಅತ್ಯಂತ ಕನಿಷ್ಠ ಪ್ರಕರಣ ವರದಿಯಾಗಿದೆ. 83,555 ಕೋವಿಡ್ ಪರೀಕ್ಷೆ ನಡೆದಿದ್ದು ಶೇ.1.59ರ ಪಾಸಿಟಿವಿಟಿ ದರ(Positivity Rate) ದಾಖಲಾಗಿದೆ. 26 ದಿನ (ಜನವರಿ 23)ರ ಬಳಿಕ ಮೊದಲ ಬಾರಿಗೆ ದೈನಂದಿನ ಕೋವಿಡ್(Covid-19) ಸಾವಿನ ಸಂಖ್ಯೆ 20ರೊಳಗೆ ಬಂದಿದೆ. ಮರಣ ದರ ಶೇ. 1.42 ದಾಖಲಾಗಿದೆ. ಬೆಂಗಳೂರು(Bengaluru) ನಗರದಲ್ಲಿ 9 ಸಾವು ಸಂಭವಿಸಿದ್ದು ಉಳಿದಂತೆ ಧಾರವಾಡದಲ್ಲಿ(Dharwad) ಎರಡು, ವಿಜಯಪುರ, ಉಡುಪಿ, ಮಂಡ್ಯ, ಕಲಬುರಗಿ, ಕೊಡಗು, ಬೆಳಗಾವಿ, ಬಳ್ಳಾರಿ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ(Death). ಬೆಂಗಳೂರು ನಗರದಲ್ಲಿ 705 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಬೀದರ್, ಚಿಕ್ಕಬಳ್ಳಾಪುರ, ದಾವಣಗೆರೆ, ಗದಗ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಯಲ್ಲಿ ದೈನಂದಿನ ಸೋಂಕಿನ ಪ್ರಕರಣ ಒಂದಂಕಿಗೆ ಇಳಿದಿದೆ. ಉಳಿದ ಜಿಲ್ಲೆಗಳಲ್ಲಿ ಎರಡಂಕಿಯಲ್ಲಿ ಪ್ರಕರಣ ವರದಿಯಾಗಿದೆ. ಬೀದರ್, ರಾಮನಗರ, ಯಾದಗಿರಿ, ಗದಗ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಸಹ ಎರಡಂಕಿಯ ಒಳಗೆ ಬಂದಿದೆ.
Covid Crisis: ಬೆಂಗ್ಳೂರಲ್ಲಿ ಕೋವಿಡ್ ಪರೀಕ್ಷೆ ಅರ್ಧದಷ್ಟು ಇಳಿಕೆ: 7 ಸಾವು
ರಾಜ್ಯದಲ್ಲಿ ಒಟ್ಟು 39.34 ಲಕ್ಷ ಮಂದಿಯಲ್ಲಿ ಕೋವಿಡ್ ದೃಢಪಟ್ಟಿದ್ದು 38.78 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. 16,184 ಸಕ್ರಿಯ ಪ್ರಕರಣಗಳಿವೆ. 39,757 ಮಂದಿ ಮರಣವನ್ನಪ್ಪಿದ್ದಾರೆ.
ಲಸಿಕೆ ಅಭಿಯಾನ:
ರಾಜ್ಯದಲ್ಲಿ ಶುಕ್ರವಾರ ಒಟ್ಟು 1.42 ಲಕ್ಷ ಮಂದಿ ಕೋವಿಡ್ ಲಸಿಕೆ(Vaccine) ಪಡೆದಿದ್ದಾರೆ. ತನ್ಮೂಲಕ ಒಟ್ಟು 9.94 ಕೋಟಿ ಲಸಿಕೆ ರಾಜ್ಯದಲ್ಲಿ ನೀಡಲಾಗಿದೆ. 5.20 ಕೋಟಿ ಮೊದಲ, 4.62 ಕೋಟಿ ಎರಡನೇ ಮತ್ತು 11.10 ಲಕ್ಷ ಮಂದಿ ಮುನ್ನೆಚ್ಚರಿಕೆ ಡೋಸ್ ಲಸಿಕೆ(Booster Dose) ಪಡೆದಿದ್ದಾರೆ.
25,920 ಹೊಸ ಕೋವಿಡ್ ಕೇಸು: 48 ದಿನದ ಕನಿಷ್ಠ
ನವದೆಹಲಿ: ಭಾರತದಲ್ಲಿ(India) ಶುಕ್ರವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ 25,920 ಹೊಸ ಕೊರೋನಾ ಪ್ರಕರಣಗಳು ದೃಢಪಟ್ಟಿವೆ. ಇದು ಈ ವರ್ಷದ ಜನವರಿ 1ರ ನಂತರದ (48 ದಿನದ) ಕನಿಷ್ಠ.
ಇದೇ ಅವಧಿಯಲ್ಲಿ 492 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಹೊಸ ಪ್ರಕರಣಗಳೂ ಸೇರಿ ಸಕ್ರಿಯ ಸೋಂಕಿನ ಪ್ರಮಾಣ 43 ದಿನಗಳ ಬಳಿಕ 2.92ಲಕ್ಷಕ್ಕೆ ತಗ್ಗಿದೆ. ಚೇತರಿಕೆ ಪ್ರಮಾಣ ಶೇ.98.12ರಷ್ಟಿದೆ. ದೈನಂದಿನ ಪಾಸಿಟಿವಿಟಿ ದರ ಶೇ.2.07ಕ್ಕೆ ಇಳಿಕೆಯಾಗಿದೆ.
Covid 19 Crisis: ಕೊರೋನಾ ನಿರ್ಬಂಧ ತೆರವು ಮಾಡಿ: ರಾಜ್ಯಗಳಿಗೆ ಕೇಂದ್ರ ಸೂಚನೆ!
ಹೊಸ ಪ್ರಕರಣಗಳೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 4.27 ಕೋಟಿಗೆ ಏರಿಕೆಯಾಗಿದೆ. ಒಟ್ಟು ಸಾವಿಗೀಡಾದವರ ಸಂಖ್ಯೆ 5.10 ಲಕ್ಷಕ್ಕೆ ತಲುಪಿದೆ. ಒಟ್ಟು ಸೋಂಕಿತರ ಪೈಕಿ 4.19 ಕೋಟಿ ಮಂದಿ ಗುಣಮುಖರಾಗಿದ್ದಾರೆ. ಈ ನಡುವೆ 174.6 ಕೋಟಿ ಡೋಸ್ ಲಸಿಕೆ ವಿತರಣೆ ಮಾಡಲಾಗಿದೆ.
ಒಮಿಕ್ರೋನ್ ಅಲೆ ಇಳಿಕೆ, ಆದರೆ ಬಿಎ.2 ಬಗ್ಗೆ ಎಚ್ಚರ: ಡಬ್ಲ್ಯುಎಚ್‌ಒ
ನ್ಯೂಯಾರ್ಕ್/ಟೋಕಿಯೋ: ವಿಶ್ವದಾದ್ಯಂತ(World) 3ನೇ ಅಲೆಗೆ ಕಾರಣವಾಗಿದ್ದ ರೂಪಾಂತರಿ ಕೊರೋನಾ ವೈರಸ್ ಒಮಿಕ್ರೋನ್‌ನ(Omicron) ಹಾವಳಿ ನಿಧಾನವಾಗಿ ಇಳಿಕೆಯಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ(World Health Organization) ಹೇಳಿದೆ. ಆದರೆ ಒಮಿಕ್ರೋನ್‌ನ ಹಲವು ಉಪ ತಳಿಗಳ ಪೈಕಿ ಒಂದಾದ ಬಿಎ.2 ನಿಧಾನವಾಗಿ ಎಲ್ಲೆಡೆ ವ್ಯಾಪಿಸುತ್ತಿರುವ ಕಾರಣ ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಅದು ಇದೇ ವೇಳೆ ಎಚ್ಚರಿಸಿದೆ.