Asianet Suvarna News Asianet Suvarna News

Covid Crisis: ಬೆಂಗ್ಳೂರಲ್ಲಿ ಕೋವಿಡ್‌ ಪರೀಕ್ಷೆ ಅರ್ಧದಷ್ಟು ಇಳಿಕೆ: 7 ಸಾವು

*  ಗೋವಾ, ಕೇರಳದಿಂದ ಬರುವವರಿಗೆ ಕೋವಿಡ್‌ ಪರೀಕ್ಷೆಯಿಂದ ವಿನಾಯಿತಿ
*  ಪಾಸಿಟಿವಿಟಿ ದರ ಶೇ.2.28 ದಾಖಲು 
*  769 ಮಂದಿಯಲ್ಲಿ ಸೋಂಕು
 

Covid Test Reduced in Bengaluru grg
Author
Bengaluru, First Published Feb 18, 2022, 6:02 AM IST

ಬೆಂಗಳೂರು(ಫೆ.18): ನಗರದಲ್ಲಿ ಕೋವಿಡ್‌-19(Covid-19) ಹೊಸ ಪ್ರಕರಣಗಳು ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ದೈನಂದಿನ ಪರೀಕ್ಷೆಗಳ ಸಂಖ್ಯೆ 35 ಸಾವಿರಕ್ಕೆ ಕುಸಿದಿದೆ. 769 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಏಳು ಮಂದಿ (Death). 1,889 ಮಂದಿ ಚೇತರಿಸಿಕೊಂಡಿದ್ದಾರೆ.

ದಿನಕ್ಕೆ 60 ಸಾವಿರ ಮೀರಿ ನಡೆಯುತ್ತಿದ್ದ ಪರೀಕ್ಷೆ ಗುರುವಾರ 34,730ಕ್ಕೆ ಇಳಿದಿದೆ. ಪಾಸಿಟಿವಿಟಿ ದರ(Positivity Rate) ಶೇ.2.28 ದಾಖಲಾಗಿದೆ. 8,828 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ 454 ಮಂದಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. 19 ಮಂದಿ ವೆಂಟಿಲೇಟರ್‌ ಸಹಿತ ತೀವ್ರ ನಿಗಾ ವಿಭಾಗ, 131 ಮಂದಿ ತೀವ್ರ ನಿಗಾ ವಿಭಾಗ, 50 ಮಂದಿ ಎಚ್‌ಡಿಯು ಮತ್ತು 254 ಮಂದಿ ಜನರಲ್‌ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್‌ ಆರೈಕೆ ಕೇಂದ್ರದಲ್ಲಿ(Covid Care Center) ಇಬ್ಬರು ಮಾತ್ರ ದಾಖಲಾಗಿದ್ದಾರೆ.

Corona Crisis: 10 ಸಾವಿರಕ್ಕಿಂತ ಕಡಿಮೆಯಾದ ಸಕ್ರಿಯ ಕೇಸ್‌

ಒಟ್ಟು 15 ಕಂಟೈನ್ಮೆಂಟ್‌ ವಲಯಗಳಿವೆ. ಈ ಪೈಕಿ ಬೊಮ್ಮನಹಳ್ಳಿ ವಲಯ 7, ಬೆಂಗಳೂರು(Bengaluru) ದಕ್ಷಿಣ ಮತ್ತು ಯಲಹಂಕ ವಲಯದಲ್ಲಿ ತಲಾ ನಾಲ್ಕು ಕಂಟೈನ್ಮೆಂಟ್‌ ವಲಯಗಳಿವೆ. ಉಳಿದ ವಲಯಗಳಲ್ಲಿ ಕಂಟೈನ್ಮೆಂಟ್‌ ವಲಯಗಳಿಲ್ಲ. ಬೆಳ್ಳಂದೂರು, ವರ್ತೂರು, ದೊಡ್ಡ ನೆಕ್ಕುಂದಿ, ಹೊರಮಾವು, ಬೇಗೂರು, ಹಗದೂರು, ಎಚ್‌ಎಸ್‌ಆರ್‌ ಬಡಾವಣೆ, ಹೂಡಿ, ಕೋರಮಂಗಲ ಮತ್ತು ಹೊಸ ತಿಪ್ಪಸಂದ್ರದಲ್ಲಿ ಹೆಚ್ಚು ಪ್ರಕರಣಗಳಿವೆ. ಪಾದರಾಯನಪುರ, ಭಾರತಿ ನಗರ, ದೇವರ ಜೀವನಹಳ್ಳಿ, ಕುಶಾಲ ನಗರ, ಗಾಳಿ ಅಂಜನೇಯ ಸ್ವಾಮಿ ದೇವಾಲಯ, ಛಲವಾದಿ ಪಾಳ್ಯ, ರಾಯಪುರ, ಕೆಂಪಾಪುರ ಅಗ್ರಹಾರ, ನೀಲಸಂದ್ರ, ಲಕ್ಷ್ಮೇ ದೇವಿ ನಗರದಲ್ಲಿ ಒಂದು ವಾರದಿಂದ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ.

ಲಸಿಕೆ ಅಭಿಯಾನ: 

ನಗರದಲ್ಲಿ 2,590 ಮಂದಿ ಮೊದಲ, 41,207 ಮಂದಿ ಎರಡನೇ ಮತ್ತು 3,524 ಮಂದಿ ಮುನ್ನೆಚ್ಚರಿಕೆ ಡೋಸ್‌(Booster Dose) ಪಡೆದಿದ್ದಾರೆ. ಈವರೆಗೆ ಒಟ್ಟು 1.74 ಕೋಟಿ ಡೋಸ್‌ ಲಸಿಕೆ ರಾಜ್ಯದಲ್ಲಿ ನೀಡಲಾಗಿದೆ.

ಗೋವಾ, ಕೇರಳದಿಂದ ಬರುವವರಿಗೆ ಕೋವಿಡ್‌ ಪರೀಕ್ಷೆಯಿಂದ ವಿನಾಯಿತಿ

ರಾಜ್ಯದಲ್ಲಿ(Karnataka) ಕೋವಿಡ್‌-19 ಪ್ರಕರಣಗಳು ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ನೆರೆಯ ಕೇರಳ(Kerala) ಮತ್ತು ಗೋವಾ(Goa) ರಾಜ್ಯದಿಂದ ರಾಜ್ಯಕ್ಕೆ ಆಗಮಿಸುವವರಿಗೆ ಕೋವಿಡ್‌ ಪರೀಕ್ಷೆಯಿಂದ(Covid Test) ವಿನಾಯಿತಿ ನೀಡಲಾಗಿದೆ. ಆದರೆ ಕೋವಿಡ್‌ನ ಎರಡು ಡೋಸ್‌ ಲಸಿಕೆ ಪಡೆದಿರಬೇಕು ಎಂದು ಕಡ್ಡಾಯ ಮಾಡಲಾಗಿದೆ.

ಕೋವಿಡ್‌ ಪ್ರಕರಣಗಳು ಹೆಚ್ಚಿದ್ದ ಕೇರಳ, ಗೋವಾ ಮತ್ತು ಮಹಾರಾಷ್ಟ್ರದಿಂದ ರಾಜ್ಯಕ್ಕೆ ಆಗಮಿಸುವ ವ್ಯಕ್ತಿಗಳು 72 ಗಂಟೆಯೊಳಗಿನ ಕೋವಿಡ್‌ ನೆಗೆಟಿವ್‌ ವರದಿಯನ್ನು ಹೊಂದಿರುವುದನ್ನು ಸರ್ಕಾರ ಈ ಹಿಂದೆ ಕಡ್ಡಾಯ ಮಾಡಿತ್ತು. ಆದರೆ ಸದ್ಯ ನೆರೆಯ ರಾಜ್ಯಗಳಲ್ಲೂ ಕೋವಿಡ್‌ ಸಂಖ್ಯೆ ಕಡಿಮೆ ಇರುವುದರಿಂದ ಕೋವಿಡ್‌ ಪರೀಕ್ಷಾ ವರದಿಯಿಂದ ವಿನಾಯಿತಿ ನೀಡಲಾಗಿದೆ.

Covid Crisis: ಕೋವಿಡ್‌ ಮತ್ತಷ್ಟು ಇಳಿಕೆ: 34113 ಹೊಸ ಕೇಸ್‌!

ಕೇರಳ, ಗೋವಾದಿಂದ ವಿಮಾನ, ರೈಲು, ರಸ್ತೆ ಮಾರ್ಗಗಳ ಮೂಲಕ ರಾಜ್ಯ ಪ್ರವೇಶಿಸುವರ ಕೋವಿಡ್‌ ವರದಿ ಪರಿಶೀಲಿಸುವ ಕ್ರಮವನ್ನು ಕೈ ಬಿಡಲಾಗಿದೆ. ಆದರೆ ಎರಡು ಡೋಸ್‌ ಲಸಿಕೆ ಪಡೆದಿರುವ ಪ್ರಮಾಣ ಪತ್ರ ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಆರೋಗ್ಯ ಇಲಾಖೆ ತನ್ನ ಸುತ್ತೋಲೆಯಲ್ಲಿ ಸೂಚಿಸಿದೆ.

ಮಹಾರಾಷ್ಟ್ರದಿಂದ ಆಗಮಿಸುವವರಿಗೆ ಕಳೆದ ವಾರದಿಂದಲೇ ಕಡ್ಡಾಯ ಪರೀಕ್ಷಾ ವರದಿಯಿಂದ ವಿನಾಯಿತಿ ನೀಡಲಾಗಿತ್ತು. ಅಂತರ್‌ ರಾಜ್ಯಗಳಿಂದ ಆಗಮಿಸುವವರ ಕೋವಿಡ್‌ ಪರೀಕ್ಷೆಯನ್ನು ರದ್ದು ಪಡಿಸಬಹುದು ಎಂದು ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.
 

Follow Us:
Download App:
  • android
  • ios