ಕರ್ನಾಟಕದಲ್ಲಿ ಕೊರೋನಾ ಮೂರನೇ ಅಲೆ ಭೀತಿ ಮಧ್ಯೆ ಗುಡ್‌ನ್ಯೂಸ್

* ಕರ್ನಾಟಕದಲ್ಲಿ ಕೊರೋನಾ ಮೂರನೇ ಅಲೆ ಭೀತಿ ಮಧ್ಯೆ ಗುಡ್‌ನ್ಯೂಸ್
* ಕರ್ನಾಟಕದಲ್ಲಿ ಮತ್ತೆ ಇಳಿಕೆ ಕಂಡ ಕೊರೋನಾ
* ಕಳೆದ ಎರಡ್ಮೂರು ದಿನ ಜನರಲ್ಲಿ ಭಯ ಹುಟ್ಟಿಸಿದ್ದ ಕೊರೋನಾ

1285 New Coronavirus Cases and 25 deaths In Karnataka August 2nd rbj

ಬೆಂಗಳೂರು, (ಅ.02): ರಾಜ್ಯದಲ್ಲಿ ಕಳೆದ ಎರಡ್ಮೂರು ದಿನಗಳ ಕೊರೋನಾ ಪಾಸಿಟಿವ್ ಕೇಸ್‌ಗಳನ್ನ ನೋಡಿದ್ರೆ, ಮೂರನೇ ಭೀತಿ ಶುರುವಾಯ್ತು ಎನ್ನಲಾಗಿತ್ತು. ಆದ್ರೆ, ಇದೀಗ ದಿಢೀರ್ ಕೊರೋನಾ ಇಳಿಮುಖವಾಗಿರುವುದು ಜನರು ನಿಟ್ಟುಸಿರು ಬಿಡುವಂತಾಗಿದೆ. 

ಹೌದು.. ರಾಜ್ಯದಲ್ಲಿ ಇಂದು (ಅ.02) 1,33,030 ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ 1,285 ಜನರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಹಾಗೇ 25 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕೊರೋನಾ ತಡೆಯಲು ರಣತಂತ್ರ: ಗಡಿಯಲ್ಲಿ ಕಠಿಣ ನಿಯಮ ಜಾರಿ

ಈ ಮೂಲಕ ಕರ್ನಾಟಕದಲ್ಲಿ ಒಟ್ಟು ಕೊರೋನಾ ಸಂಖ್ಯೆ 2908284ಕ್ಕೆ ಏರಿಕೆಯಾಗಿದ್ರೆ, 36612 ಜನರು ಮಹಾಮಾರಿಯಿಂದ ಸಾವನ್ನಪ್ಪಿದ್ದಾರೆ.

 ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 1,383 ಜನರು ಗುಣಮುಖರಾದ ಕಾರಣದಿಂದಾಗಿ, ಇದೀಗ ಸಕ್ರೀಯ ಸೋಂಕಿತರ ಸಂಖ್ಯೆ 24,021 ಆಗಿದೆ. ಇದರಿಂದ ಪಾಸಿಟಿವಿಟಿ ದರ 0.96ಕ್ಕೆ ಕುಸಿದಿದೆ. ಕಳೆದ ಎರಡ್ಮೂರು ದಿನಗಳ ಹಿಂದೆ ಪಾಸಿಟಿವಿಟಿ ದರ ಒಂದರ ಮೇಲೆ ಹೋಗಿತ್ತು.

ಇನ್ನು ಕೊರೋನಾ ಹಾಟ್‌ಸ್ಪಾಟ್ ಆಗಿದ್ದ ಬೆಂಗಳೂರು ನಗರದಲ್ಲಿ 290 ಜನರಿಗೆ ಕೊರೋನಾ ಕೇಸ್ ಪತ್ತೆಯಾಗಿದ್ದು, 5 ಸೋಂಕಿತರು ಸಾವನ್ನಪ್ಪಿದ್ದಾರೆ. 168 ಸೋಂಕಿತರು ಗುಣಮುಖರಾಗಿದ್ದಾರೆ.

Latest Videos
Follow Us:
Download App:
  • android
  • ios