ಗುರುವಾರ 4.60 ಕೋಟಿ ರು. ನಗದನ್ನು ಜಪ್ತಿ ಮಾಡಿವೆ. ಇದರೊಂದಿಗೆ ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ರಾಜ್ಯದಲ್ಲಿ ಒಟ್ಟು 100 ಕೋಟಿ ರು. ನಗದು ವಶಪಡಿಸಿಕೊಂಡಂತಾಗಿದೆ.
ಬೆಂಗಳೂರು(ಏ.28): ಚುನಾವಣಾ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ವಿವಿಧ ತನಿಖಾ ಸಂಸ್ಥೆಗಳು ಗುರುವಾರ 4.60 ಕೋಟಿ ರು. ನಗದನ್ನು ಜಪ್ತಿ ಮಾಡಿವೆ. ಇದರೊಂದಿಗೆ ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ರಾಜ್ಯದಲ್ಲಿ ಒಟ್ಟು 100 ಕೋಟಿ ರು. ನಗದು ವಶಪಡಿಸಿಕೊಂಡಂತಾಗಿದೆ.
ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದಲ್ಲಿ 1.91 ಕೋಟಿ ರು. ನಗದು ವಶಪಡಿಸಿಕೊಳ್ಳಲಾಗಿದೆ. ಇದೇ ಕ್ಷೇತ್ರದಲ್ಲಿ 85.80 ಲಕ್ಷ ರು. ಮೌಲ್ಯದ 1.4862 ಕೆ.ಜಿ. ಚಿನ್ನ ಮತ್ತು 3.49 ಲಕ್ಷ ರು. ಮೌಲ್ಯದ 5 ಕೆ.ಜಿ. ಬೆಳ್ಳಿ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗವು ಪ್ರಕಟಣೆಯಲ್ಲಿ ತಿಳಿಸಿದೆ.
ಕರ್ನಾಟಕದಲ್ಲಿ ಚುನಾವಣಾ ಅಕ್ರಮ: ಈವರೆಗೆ 245 ಕೋಟಿ ನಗದು, ವಸ್ತು ಜಪ್ತಿ
ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ಈವರೆಗೆ ಒಟ್ಟು 100.33 ಕೋಟಿ ರು. ನಗದು, 22.06 ಕೋಟಿ ರು. ಮೌಲ್ಯದ ಉಚಿತ ಕೊಡುಗೆಗಳನ್ನು ಜಪ್ತಿ ಮಾಡಲಾಗಿದೆ. 66.35 ಕೋಟಿ ರು. ಮೌಲ್ಯದ 17.28 ಲಕ್ಷ ಲೀಟರ್ ಮದ್ಯ, 16.98 ಕೋಟಿ ರು. ಮೌಲ್ಯದ 1,249 ಕೆ.ಜಿ. ಮಾದಕ ವಸ್ತುಗಳು, 76.01 ಕೋಟಿ ರು. ಮೌಲ್ಯದ 149.31 ಕೆ.ಜಿ. ಚಿನ್ನ, 4.43 ಕೋಟಿ ರು. ಮೌಲ್ಯದ 636.46 ಕೆ.ಜಿ. ಬೆಳ್ಳಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಒಟ್ಟು 80.44 ಕೋಟಿ ರು. ಮೌಲ್ಯದ ಚಿನ್ನ ಮತ್ತು ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ನಗದು, ಮದ್ಯ ಸೇರಿದಂತೆ ಒಟ್ಟು 286.17 ಕೋಟಿ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಚುನಾವಣಾ ಆಯೋಗ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ.
ಬಳ್ಳಾರಿ: ಅಕ್ರಮವಾಗಿ ಸಾಗಿಸುತ್ತಿದ್ದ ₹76 ಸಾವಿರ ಮೌಲ್ಯದ ಮದ್ಯ, ಕುಕ್ಕರ್ ವಶ
2,178 ಎಫ್‌ಐಆರ್, 69,801 ಶಸ್ತ್ರಾಸ್ತ್ರಗಳನ್ನು ಜಮೆ ಮಾಡಿಸಿಕೊಳ್ಳಲಾಗಿದೆ. 18 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 20 ಶಸ್ತ್ರಾಸ್ತ್ರಗಳ ಪರವಾನಗಿ ರದ್ದುಪಡಿಸಲಾಗಿದೆ. ಸಿಆರ್‌ಪಿಸಿ ಕಾಯ್ದೆಯಡಿ 5,240 ಪ್ರಕರಣಗಳನ್ನು ದಾಖಲಿಸಲಾಗಿದೆ. 9,262 ವ್ಯಕ್ತಿಗಳಿಂದ ಮುಚ್ಚಳಿಕೆ ಪತ್ರ ಪಡೆಯಲಾಗಿದೆ. 14,484 ಜಾಮೀನು ರಹಿತ ವಾರಂಟ್‌ಗಳನ್ನು ಜಾರಿಗೊಳಿಸಲಾಗಿದೆ ಎಂದಿದೆ. ರಾಜ್ಯದಲ್ಲಿ ಮಾ.29ರಂದು ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಗೆ ಬಂದಿತ್ತು.
ಈವರೆಗೆ ಏನೇನು ಜಪ್ತಿ?
149 ಕೇಜಿ ಚಿನ್ನ: .76 ಕೋಟಿ ಮೌಲ್ಯ
6 ಕ್ವಿಂಟಲ್ ಬೆಳ್ಳಿ: .4.4 ಕೋಟಿ ಬೆಲೆ
.22 ಕೋಟಿ ವಸ್ತು: ಗಿಫ್ಟ್ ವಸ್ತುಗಳು
17 ಲಕ್ಷ ಲೀ. ಮದ್ಯ: .66 ಕೋಟಿ ಮೌಲ್ಯ
12 ಕ್ವಿಂಟಲ್ ಡ್ರಗ್‌್ಸ: ಮೌಲ್ಯ .17 ಕೋಟಿ
