ವಿಧಾನಸಭಾ ಚುನಾವಣೆ ಸಂಬಂಧ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಜಿಲ್ಲೆಯ ವಿವಿಧ ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಕೈಗೊಳ್ಳಲಾಗುತ್ತಿದ್ದು, ಶುಕ್ರವಾರ ಒಟ್ಟು .76,647 ಮೌಲ್ಯದ 120.23 ಲೀ. ಮದ್ಯ ವಶಪಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪವನ್‌ಕುಮಾರ್‌ ಮಾಲಪಾಟಿ ತಿಳಿಸಿದ್ದಾರೆ.

ಬಳ್ಳಾರಿ (ಏ.15) : ವಿಧಾನಸಭಾ ಚುನಾವಣೆ ಸಂಬಂಧ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಜಿಲ್ಲೆಯ ವಿವಿಧ ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಕೈಗೊಳ್ಳಲಾಗುತ್ತಿದ್ದು, ಶುಕ್ರವಾರ ಒಟ್ಟು .76,647 ಮೌಲ್ಯದ 120.23 ಲೀ. ಮದ್ಯ ವಶಪಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪವನ್‌ಕುಮಾರ್‌ ಮಾಲಪಾಟಿ ತಿಳಿಸಿದ್ದಾರೆ.

ಅಬಕಾರಿ ಇಲಾಖೆಯಿಂದ .68,883 ಮೌಲ್ಯದ 113.57 ಲೀ. ಮದ್ಯ ಮತ್ತು ಪೊಲೀಸ್‌ ಇಲಾಖೆಯಿಂದ .7,764 ಬೆಲೆಯ 6.66 ಲೀಟರ್‌ ಮದ್ಯ ಸೇರಿದಂತೆ ಒಟ್ಟು .76,647 ಮೌಲ್ಯದ 120.23 ಲೀ. ಮದ್ಯ ವಶಪಡಿಸಿಕೊಳ್ಳಲಾಗಿದೆ.

ವಿಧಾನಸಭಾ ಚುನಾವಣೆ ಹಿನ್ನೆಲೆ; ಒಳ ಮೀಸಲಾತಿ ಹೊಡೆತ ನೀಡಲು ಸಜ್ಜಾದ ಲಂಬಾಣಿ ಸಮುದಾಯ!

ಜಿಲ್ಲಾದ್ಯಂತ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಒಟ್ಟು 43 ಫ್ಲೆ ೖಯಿಂಗ್‌ ಸ್ಕಾ$್ವಡ್‌, 27 ಎಸ್‌ಎಸ್‌ಟಿ ತಂಡ ಹಾಗೂ 7 ಅಬಕಾರಿ ತಂಡಗಳು ಕಾರ್ಯಪ್ರವೃತ್ತವಾಗಿ ತಪಾಸಣೆ ನಡೆಸುತ್ತಿವೆ ಎಂದು ತಿಳಿಸಿದ್ದಾರೆ.

ಕುಕ್ಕರ್‌, 8 ಹಾಟ್‌ಬಾಕ್ಸ್‌ಗಳ ವಶ

ಕೊಟ್ಟೂರು: ಸೂಕ್ತ ದಾಖಲಾತಿಗಳಿಲ್ಲದೆ ಹರಪನಹಳ್ಳಿಯಿಂದ ಕೊಟ್ಟೂರು ಕಡೆಗೆ ಸಾಗಿಸುತ್ತಿದ್ದ 32 ಕುಕ್ಕರ್‌ಗಳು ಮತ್ತು 8 ಹಾಟ್‌ಬಾಕ್ಸ್‌ಗಳನ್ನು ತಾಲೂಕಿನ ಹರಾಳು ಚೆಕ್‌ಪೋಸ್ಟ್‌ನಲ್ಲಿನ ಸಿಬ್ಬಂದಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಾಜ್ಯದಲ್ಲಿ ಎಲೆಕ್ಷನ್ ಬೇಟೆ: ಬರೋಬ್ಬರಿ 12 ಕೋಟಿ ನಗದು, 16 ಕೋಟಿ ಮದ್ಯ, 6 ಕೋಟಿ ಮೌಲ್ಯದ ಚಿನ್ನ ವಶಕ್ಕೆ!

ಕಾರೊಂದರಲ್ಲಿ .40288 ಬೆಲೆಬಾಳುವ 32 ಕುಕ್ಕರ್‌ಗಳು ಮತ್ತು .5907 ಬೆಲೆಯ 8 ಹಾಟ್‌ಬಾಕ್ಸ್‌ಗಳನ್ನು ಕೊಟ್ಟೂರು ಕಡೆಗೆ ಸಾಗಿಸಲಾಗುತ್ತಿತ್ತು. ಕಾರನ್ನು ಹರಾಳು ಚೆಕ್‌ಪೋಸ್ಟ್‌ನಲ್ಲಿ ಪರಿಶೀಲಿಸಿದ ಸಿಬ್ಬಂದಿ ಸೂಕ್ತ ದಾಖಲಾತಿಗಳನ್ನು ಕೇಳಿದರು. ಇದಕ್ಕೆ ಸೂಕ್ತ ಉತ್ತರ ನೀಡಲು ಕಾರಿನ ಚಾಲಕ ಜಬಿಹುಲ್ಲಾ ಮತ್ತು ಸುಬಾನ್‌ ಅವರು ವಿಫಲರಾದ ಹಿನ್ನೆಲೆ ಕುಕ್ಕರ್‌ ಮತ್ತು ಹಾಟ್‌ಬಾಕ್ಸ್‌ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಹಸೀಲ್ದಾರ್‌ ಎಂ. ಕುಮಾರಸ್ವಾಮಿ ತಿಳಿಸಿದ್ದಾರೆ.