Asianet Suvarna News Asianet Suvarna News

ಕರ್ನಾಟಕದಲ್ಲಿ ಪ್ರತಿ ಗರಡಿಮನೆ ನಿರ್ಮಾಣಕ್ಕೆ 10 ಲಕ್ಷ: ಸಚಿವ ನಾರಾಯಣಗೌಡ

ನಾಡಹಬ್ಬ ದಸರಾ ಪ್ರಯುಕ್ತ ಹಮ್ಮಿಕೊಂಡಿರುವ ನಾಡಕುಸ್ತಿ ಪಂದ್ಯಾವಳಿಗಳಿಗೆ ಕ್ರೀಡಾ ಸಚಿವ ಡಾ.ಕೆ.ಸಿ.ನಾರಾಯಣಗೌಡ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಸೋಮವಾರ ಚಾಲನೆ ನೀಡಿದರು. 

10 lakh grant for construction of garadi mane says minister narayana gowda gvd
Author
First Published Sep 27, 2022, 2:15 AM IST

ಮೈಸೂರು (ಸೆ.27): ನಾಡಹಬ್ಬ ದಸರಾ ಪ್ರಯುಕ್ತ ಹಮ್ಮಿಕೊಂಡಿರುವ ನಾಡಕುಸ್ತಿ ಪಂದ್ಯಾವಳಿಗಳಿಗೆ ಕ್ರೀಡಾ ಸಚಿವ ಡಾ.ಕೆ.ಸಿ.ನಾರಾಯಣಗೌಡ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಸೋಮವಾರ ಚಾಲನೆ ನೀಡಿದರು. ದೇವರಾಜ ಅರಸು ವಿವಿಧ್ದೋದೇಶ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಕುಸ್ತಿ ಪಂದ್ಯಾವಳಿಯಲ್ಲಿ ಪಾಲ್ಗೊಂಡು ಮಾತನಾಡಿದ ನಾರಾಯಣಗೌಡ, ‘ನಮ್ಮ ರಾಜ-ಮಹಾರಾಜರು ಹಿಂದಿನಿಂದಲೂ ನಾಡ ಕುಸ್ತಿಗೆ ವಿಶೇಷ ಪ್ರಾಧ್ಯಾನತೆ ನೀಡಿ, ಪ್ರೋತ್ಸಾಹಿಸಿ ಬೆಳೆಸಿದ್ದಾರೆ. 

ಜಿಮ್‌ಗಳ ಅಬ್ಬರ ಹೆಚ್ಚಾದರೂ ಗರಡಿ ಮನೆಗಳಿಗೆ ವಿಶೇಷ ಮಾನ್ಯತೆ ಇದ್ದೇ ಇದೆ. ಮೈಸೂರು ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಹಲವು ಗರಡಿ ಮನೆಗಳಲ್ಲಿ ಕುಸ್ತಿಪಟುಗಳನ್ನು ತಯಾರಿ ಮಾಡಿ, ಪಂದ್ಯಾವಳಿಗಳಿಗೆ ಕಳುಹಿಸುತ್ತಿದ್ದಾರೆ. ನಮ್ಮ ಸರ್ಕಾರ ಕೂಡ ಕುಸ್ತಿಪಟುಗಳಿಗೆ ವಿಶೇಷ ಪ್ರೋತ್ಸಾಹ ನೀಡುತ್ತಿದೆ. ಗರಡಿ ಮನೆಗಳ ನಿರ್ಮಾಣಕ್ಕೆ ನಮ್ಮ ಕ್ರೀಡಾ ಇಲಾಖೆಯಿಂದ 10 ಲಕ್ಷ ಅನುದಾನ ನೀಡುತ್ತಿದ್ದೇವೆ’ ಎಂದು ಹೇಳಿದರು. ಉದ್ಘಾಟನಾ ಪಂದ್ಯದಲ್ಲಿ ಶಾಸಕ ಎಲ್‌. ನಾಗೇಂದ್ರ ತೀರ್ಪುಗಾರರಾಗಿ ಇಡೀ ಕುಸ್ತಿಯನ್ನು ಕುತೂಹಲದಿಂದ ವೀಕ್ಷಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌, ಶಾಸಕ ಎಲ್‌. ನಾಗೇಂದ್ರ, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌ ಸೇರಿ ಹಲವರು ಇದ್ದರು.

Navratri 2022: ಇಂದಿನಿಂದ ರಾಜ್ಯದೆಲ್ಲೆಡೆ ನವರಾತ್ರಿ ಸಂಭ್ರಮ: ಕೊಲ್ಲೂರು, ಶೃಂಗೇರಿಗಳಲ್ಲಿ ಶರನ್ನವರಾತ್ರಿ

ನಾನು, ಕೆಸಿಎನ್‌ ಕುಸ್ತಿಗೆ ರೆಡಿ ಇದ್ವಿ: ಉದ್ಘಾಟನಾ ಸಮಾರಂಭದ ವೇಳೆ ಮಾತನಾಡಿದ ಸಚಿವ ಎಸ್‌.ಟಿ.ಸೋಮಶೇಖರ್‌ ‘ನಾನು ಒಂದು ಆಫರ್‌ ಕೊಟ್ಟಿದ್ದೆ. ನಾನು ಮತ್ತು ಕೆ.ಸಿ.ನಾರಾಯಣ್‌ಗೌಡ ಇಬ್ಬರು ಕುಸ್ತಿಗೆ ರೆಡಿ ಇದ್ವಿ. ಮೈಸೂರಾ ಅಥವ ಮಂಡ್ಯನಾ ಅಂತಾ ಗೋತ್ತಾಗೋದು. ಇಬ್ಬರೂ ಕುಸ್ತಿ ಮಾಡ್ತೀವಿ ಅಂತಾ ನಾನು ಕೇಳಿದ್ದೆ. ಆದ್ರೆ ಕುಸ್ತಿ ಉಪಸಮಿತಿ ಕಾರ್ಯಾದಕ್ಷೆ ನಂದಿನಿ ಒಪ್ಪಲಿಲ್ಲ’ ಎಂದು ತಮಾಷೆಯಾಗಿ ಹೇಳಿದರು.

ಅರಮನೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನ ಉದ್ಘಾಟನೆ: ದಸರಾ ಮಹೋತ್ಸವ ಅಂಗವಾಗಿ ಮೈಸೂರು ಅರಮನೆ ಮಂಡಳಿಯು ಅರಮನೆ ಆವರಣದಲ್ಲಿ ಆಯೋಜಿಸಿರುವ ದಸರಾ ಫಲಪುಷ್ಪ ಪ್ರದರ್ಶನವನ್ನು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಸೋಮವಾರ ಸಂಜೆ ಉದ್ಘಾಟಿಸಿದರು.

ಹೂವಿನಲ್ಲಿ ನಿರ್ಮಿಸಿರುವ ಕೆಂಪುಕೋಟೆ, ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ಏಕತಾ ಪ್ರತಿಮೆ, ಜಂಬೂಸವಾರಿ, ಸೆಲ್ಫಿ ಪಾಯಿಂಟ್‌ ಚಿತ್ರಗಳನ್ನು ಭಾರತದ ನಕ್ಷೆ, ಕರ್ನಾಟಕದ ನಕ್ಷೆ ಹಾಗೂ ಇತರೆ ಮಾದರಿಗಳು ಗಮನ ಸೆಳೆಯಿತು. ಈ ದಸರಾ ಫಲಪುಷ್ಪ ಪ್ರದರ್ಶನವನ್ನು ವೀಕ್ಷಿಸಲು ಬೆಳಗ್ಗೆ 10 ರಿಂದ ರಾತ್ರಿ 8.30 ರವರೆಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಶಾಸಕ ಎಸ್‌.ಎ. ರಾಮದಾಸ್‌, ಮೇಯರ್‌ ಶಿವಕುಮಾರ್‌, ಉಪ ಮೇಯರ್‌ ಡಾ.ಜಿ. ರೂಪ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ. ಶಿವಕುಮಾರ್‌, ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್‌. ಸುಬ್ರಹ್ಮಣ್ಯ ಮೊದಲಾದವರು ಇದ್ದರು.

ದಸರಾ ದೀಪಾಲಂಕಾರಕ್ಕೆ ಚಾಲನೆ: ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ದಸರಾ ವಿದ್ಯುತ್‌ ದೀಪಾಲಂಕಾರವನ್ನು ಇಂಧನ ಸಚಿವ ವಿ. ಸುನಿಲ್‌ ಕುಮಾರ್‌, ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಅವರು ನಗರದ ಸಯ್ಯಾಜಿರಾವ್‌ ರಸ್ತೆಯಲ್ಲಿರುವ ಹಸಿರು ಮಂಟಪದಲ್ಲಿ ಸೋಮವಾರ ಸಂಜೆ ಚಾಲನೆ ನೀಡಿದರು. ಗಾಂಧೀಜಿ, ಅಂಬೇಡ್ಕರ್‌ ಸೇರಿದಂತೆ ರಾಷ್ಟ್ರ ನಾಯಕರು, ವಿವೇಕಾನಂದ, ಬಸವಣ್ಣ ಸೇರಿದಂತೆ ಸಮಾಜ ಸುಧಾರಕರ ನಾನಾ ರೀತಿ ಚಿತ್ತಾರಗಳು ಬೆಳಕಿನಲ್ಲಿ ಮೂಡಿ ಬಂದಿದೆ.

Mysuru Dasara 2022: ಇಂದಿನಿಂದ ದಸರಾ ವೈಭವ: ಮೈಸೂರಿನಲ್ಲಿ 413ನೇ ನಾಡಹಬ್ಬ

ದಸರಾ ದೀಪಾಲಂಕಾರ ಉಪಸಮಿತಿ ಈ ಬಾರಿ 96 ವೃತ್ತಗಳು ಸೇರಿದಂತೆ ಸುಮಾರು 124 ಕಿ.ಮೀ. ಗಳಷ್ಟುದೂರ ಬೆಳಕಿನ ಚಿತ್ತಾರ ಮೂಡಿಸಿದ್ದು ಸಂಜೆ 7 ರಿಂದ ರಾತ್ರಿ 11 ರವರೆಗೂ ಈ ಬೆಳಕಿನ ವೈಭವ ಕಣ್ತುಂಬಿಕೊಳ್ಳಬಹುದು. ಶಾಸಕ ಎಲ್‌. ನಾಗೇಂದ್ರ, ಮೃಗಾಲಯ ಪ್ರಾಧಿಕಾರ ಅಧ್ಯಕ್ಷ ಎಂ. ಶಿವಕುಮಾರ್‌, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌, ಸೆಸ್ಕ್‌ ಎಂಡಿ ಜಯವಿಭವಸ್ವಾಮಿ ಮೊದಲಾದವರು ಇದ್ದರು.

Follow Us:
Download App:
  • android
  • ios