ಬೆಂಗಳೂರು(ನ.22): ರಾಜ್ಯದಲ್ಲಿ ಕೊರೋನಾ ಪರೀಕ್ಷೆಯ ಸಂಖ್ಯೆ ಒಂದು ಕೋಟಿ ದಾಟಿದೆ. ಶನಿವಾರ ದಾಖಲೆಯ 1.25 ಲಕ್ಷ ಕೊರೋನಾ ಪರೀಕ್ಷೆಗಳು ನಡೆದಿದ್ದು 1,781 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು 1,799 ಮಂದಿ ಗುಣಮುಖರಾಗಿದ್ದಾರೆ. 20 ಮಂದಿ ಮೃತರಾಗಿದ್ದಾರೆ.

ಕಳೆದ ಮೂರು ದಿನಗಳಿಂದ ಒಂದು ಲಕ್ಷಕ್ಕಿಂತ ಹೆಚ್ಚಾಗುತ್ತಿದ್ದು, ಶನಿವಾರ 1,25,337 ಪರೀಕ್ಷೆ ನಡೆದಿರುವುದು ಹೊಸ ದಾಖಲೆಯಾಗಿದೆ. ಇದರೊಂದಿಗೆ ಈವರೆಗಿನ ಕೊರೋನಾ ಪರೀಕ್ಷೆ ಬರೋಬ್ಬರಿ 1.01 ಕೋಟಿ ಮುಟ್ಟಿದೆ. ಇದರಲ್ಲಿ 69 ಲಕ್ಷ ಆರ್‌ಟಿಪಿಸಿಆರ್‌ ಪರೀಕ್ಷೆಯಾಗಿದೆ.

5 ದಿನದಲ್ಲಿ 117 ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು..!

ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 24,714ಕ್ಕೆ ಕುಸಿದಿದೆ. ಈ ಪೈಕಿ 494 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗಿನ ಸೋಂಕಿನ ಪ್ರಕರಣಗಳ ಸಂಖ್ಯೆ 8.71 ಲಕ್ಷಕ್ಕೇರಿದ್ದು ಇದರಲ್ಲಿ 8.34 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ಈವರೆಗೆ 11,641 ಮಂದಿ ಮರಣವನ್ನಪ್ಪಿದ್ದಾರೆ. 19 ಮಂದಿ ಸೋಂಕಿತರು ಅನ್ಯ ಕಾರಣದಿಂದ ಮೃತರಾಗಿದ್ದಾರೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ 10 ಮಂದಿ ಮೃತರಾಗಿದ್ದಾರೆ. ಉಳಿದಂತೆ ದಕ್ಷಿಣ ಕನ್ನಡ 3, ತುಮಕೂರು 2, ಬಳ್ಳಾರಿ, ಧಾರವಾಡ, ಹಾವೇರಿ, ಕೋಲಾರ ಮತ್ತು ಮೈಸೂರು ಜಿಲ್ಲೆಯಲ್ಲಿ ತಲಾ ಒಬ್ಬರು ಸೋಂಕಿನಿಂದ ಅಸುನೀಗಿದ್ದಾರೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ ಹೊಸದಾಗಿ 972 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಬಾಗಲಕೋಟೆ 10, ಬಳ್ಳಾರಿ 37, ಬೆಳಗಾವಿ 35, ಬೆಂಗಳೂರು ಗ್ರಾಮಾಂತರ 23, ಬೀದರ್‌ 12, ಚಾಮರಾಜ ನಗರ 19, ಚಿಕ್ಕಬಳ್ಳಾಪುರ 38, ಚಿಕ್ಕಮಗಳೂರು 14, ಚಿತ್ರದುರ್ಗ 34, ದಕ್ಷಿಣ ಕನ್ನಡ 46, ದಾವಣಗೆರೆ 28, ಧಾರವಾಡ 12, ಗದಗ 12, ಹಾಸನ 25, ಹಾವೇರಿ 8, ಕಲಬುರಗಿ 9, ಕೊಡಗು 12, ಕೋಲಾರ 25, ಕೊಪ್ಪಳ 5, ಮಂಡ್ಯ 37, ಮೈಸೂರು 126, ರಾಯಚೂರು 9, ರಾಮನಗರ 14, ಶಿವಮೊಗ್ಗ 13, ತುಮಕೂರು 92, ಉಡುಪಿ 19, ಉತ್ತರ ಕನ್ನಡ 21, ವಿಜಯಪುರ 63 ಹಾಗೂ ಯಾದಗಿರಿ ಜಿಲ್ಲೆಯಲ್ಲಿ 11ಜನರಲ್ಲಿ ಸೋಂಕು ಧೃಢಪಟ್ಟಿದೆ.