Asianet Suvarna News Asianet Suvarna News

5 ದಿನದಲ್ಲಿ 117 ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು..!

ಬೆಂಗಳೂರಲ್ಲಿ ಇದುವರೆಗೂ 26000 ವಿದ್ಯಾರ್ಥಿಗಳಿಗೆ ಕೊರೋನಾ ಪರೀಕ್ಷೆ| 500ಕ್ಕೂ ಹೆಚ್ಚು ಕಾಲೇಜುಗಳಲ್ಲಿ ವಿದ್ಯಾರ್ಥಿ, ಸಿಬ್ಬಂದಿ ಸೇರಿ 168 ಕೇಸ್‌ ಪತ್ತೆ| ಶನಿವಾರ ನಗರದಲ್ಲಿ 10 ಸೋಂಕಿತರ ಸಾವು, ಮೃತರ ಸಂಖ್ಯೆ 4,058 ಏರಿಕೆ| 

Coronavirus Confirm to 117 Students in Bengaluru in Last 5 days grg
Author
Bengaluru, First Published Nov 22, 2020, 8:23 AM IST

ಬೆಂಗಳೂರು(ನ.22): ನಗರದಲ್ಲಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ನಡೆಸಿದ ಕೊರೋನಾ ಪರೀಕ್ಷೆಯಲ್ಲಿ ಮತ್ತೆ 79 ಜನರಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಕಳೆದ 5 ದಿನಗಳಲ್ಲಿ ಒಟ್ಟು 168 ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಸೋಂಕು ದೃಢಪಟ್ಟಂತಾಗಿದೆ.

"

79 ಜನರ ಪೈಕಿ 55 ವಿದ್ಯಾರ್ಥಿಗಳಾಗಿದ್ದು ಉಳಿದ 24 ಜನರು ಪ್ರಾಧ್ಯಾಪಕರು ಹಾಗೂ ಇತರೆ ಸಿಬ್ಬಂದಿಗಳಾಗಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬಿಬಿಎಂಪಿ ನೀಡಿರುವ ಮಾಹಿತಿ ಪ್ರಕಾರ ನ.17 ರಿಂದ 21ರ ವರೆಗೂ ನಗರದ ಸುಮಾರು 500ಕ್ಕೂ ಹೆಚ್ಚು ಕಾಲೇಜುಗಳಲ್ಲಿ 26,205 ವಿದ್ಯಾರ್ಥಿಗಳು, 5,378 ಉಪನ್ಯಾಸಕರು ಮತ್ತು 2,680 ಇತರೆ ಸಿಬ್ಬಂದಿ ಸೇರಿದಂತೆ ಈವರೆಗೆ ಒಟ್ಟು 38,653 ಜನರನ್ನು ಪರೀಕ್ಷೆ ಒಳಪಡಿಸಲಾಗಿದೆ.
ಈ ಪೈಕಿ ಶುಕ್ರವಾರದವರೆಗೆ ಬಂದ ವರದಿಯಲ್ಲಿ 89 ಜನರಿಗೆ ಸೋಂಕು ದೃಢಪಟ್ಟಿತ್ತು. ಈವರೆಗಿನ ಸೋಂಕು ದೃಢಪಟ್ಟ168 ಮಂದಿಯ ಪೈಕಿ 117 ಜನ ವಿದ್ಯಾರ್ಥಿಗಳು ಹಾಗೂ 51 ಮಂದಿ ಸಿಬ್ಬಂದಿಯಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

3 ಜಿಲ್ಲೆಗಳ 150 ವಿದ್ಯಾರ್ಥಿಗಳಿಗೆ ಸೋಂಕು: ಶಾಲೆ ಮುಚ್ಚಲು ಸೂಚನೆ!

2 ದಿನದ ಬಳಿಕ 1000ಕ್ಕಿಂತ ಕಮ್ಮಿ ಕೇಸ್‌

ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ 972 ಹೊಸ ಕೊರೋನಾ ಸೋಂಕು ಪ್ರಕರಣ ಪತ್ತೆಯಾಗುವ ಮೂಲಕ ಒಟ್ಟು ಸಂಖ್ಯೆ 3,62,626ಕ್ಕೆ ತಲುಪಿದೆ. ಕಳೆದ ಎರಡು ದಿನ ಒಂದು ಸಾವಿರಕ್ಕಿಂತ ಹೆಚ್ಚು ಪ್ರಕರಣ ಪತ್ತೆಯಾಗುವ ಮೂಲಕ ಆತಂಕ ಸೃಷ್ಟಿಯಾಗಿತ್ತು. ಇದೀಗ ಶನಿವಾರ ಸಾವಿರಕ್ಕಿಂತ ಕಡಿಮೆ ಪ್ರಕರಣ ಪತ್ತೆಯಾಗಿರುವುದರಿಂದ ನಾಗರೀಕರು ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ.

ಇನ್ನು ಶನಿವಾರ 813 ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಸಂಖ್ಯೆ 3,40,755 ಏರಿಕೆಯಾಗಿದೆ. ನಗರದಲ್ಲಿ 17,812 ಸಕ್ರಿಯ ಪ್ರಕರಣಗಳಿದ್ದು, 247 ಮಂದಿ ವಿವಿಧ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಶನಿವಾರ ನಗರದಲ್ಲಿ 10 ಸೋಂಕಿತರು ಮೃತಪಟ್ಟ ವರದಿಯಾಗಿದ್ದು, ಒಟ್ಟು ಮೃತರ ಸಂಖ್ಯೆ 4,058 ಏರಿಕೆಯಾಗಿದೆ.
 

Follow Us:
Download App:
  • android
  • ios