ತುಮಕೂರು ಜಿಲ್ಲಾ ನ್ಯಾಯಾಲಯದಲ್ಲಿ  ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ.  ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜೂನ್​ 15 ಆಗಿದೆ.

ತುಮಕೂರು(ಜೂ.9): ತುಮಕೂರು ಜಿಲ್ಲಾ ನ್ಯಾಯಾಲಯದಲ್ಲಿ (Tumkur District Court)ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಖಾಲಿಯಿರುವ 4 ಬ್ಯಾಕ್​ಲಾಕ್​ ಮತ್ತು ಹೊಸದಾಗಿ 47 ಹುದ್ದೆಗಳ ಸೇರಿ ಒಟ್ಟು 51 ಹುದ್ದೆಗಳ ಭರ್ತಿಗೆ ಜಿಲ್ಲಾ ಇ ಕೋರ್ಟ್​ ಅರ್ಜಿ ಆಹ್ವಾನಿಸಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜೂನ್​ 15 ಆಗಿದೆ. ಹೆಚ್ಚಿನ ಮಾಹಿತಿ ಮತ್ತು ಅರ್ಜಿ ಸಲ್ಲಿಸಲು https://districts.ecourts.gov.in/ ಗೆ ಭೇಟಿ ನೀಡಿ. 

ಶೈಕ್ಷಣಿಕ ವಿದ್ಯಾರ್ಹತೆ: ತುಮಕೂರು ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಗಳು ಅಥವಾ ಸಂಸ್ಥೆಗಳಿಂದ SSLC ಪೂರ್ಣಗೊಳಿಸಿರಬೇಕು.

TCS MBA recruitment 2022: ಕೆಲಸಕ್ಕೆ ಅರ್ಜಿ ಹೇಗೆ ಸಲ್ಲಿಸಬೇಕು?, ಅರ್ಹತೆ ಏನು? ಮಾಹಿತಿ ಇಲ್ಲಿದೆ

ವಯೋಮಿತಿ: ತುಮಕೂರು ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು 18 ರಿಂದ 35 ವರ್ಷದ ಒಳಗಿರಬೇಕು. ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪ.ಜಾ. ಪ. ಪಂ, ಪ್ರವರ್ಗ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಆಯ್ಕೆ ಪ್ರಕ್ರಿಯೆ: ತುಮಕೂರು ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಮೆರಿಟ್​ ಲಿಸ್ಟ್ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. 

ಅರ್ಜಿ ಶುಲ್ಕ: ತುಮಕೂರು ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಸಾಮಾನ್ಯ, ಪ್ರವರ್ಗ 2 ಎ, 2 ಬಿ, 3 ಎ, 3 ಬಿ ಅಭ್ಯರ್ಥಿಗಳು 200 ರೂ ಮತ್ತು ಪ.ಜಾ. ಪ. ಪಂ, ಪ್ರವರ್ಗ ಹಾಗೂ ವಿಕಲಾಂಗ ಚೇತನ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇಲ್ಲ. 

IBPS RRB ರಾಷ್ಟ್ರೀಕೃತ ಬ್ಯಾಂಕ್‌ ನೇಮಕಾತಿ ಪರೀಕ್ಷೆ ಅರ್ಜಿ ನಾಳೆಯಿಂದ ಲಭ್ಯ!

BSF ಒಟ್ಟು 281 ಹುದ್ದೆಗಳಿಗೆ ನೇಮಕಾತಿ: ಭಾರತೀಯ ರಕ್ಷಣಾ ಇಲಾಖೆ 2022ನೇ ಸಾಲಿನ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರಿಸಿದ್ದು, ಗಡಿ ಭದ್ರತಾ ಪಡೆ( ಬಿಎಸ್‌ಎಫ್‌) ಇದೀಗ ನೇಮಕಾತಿ ಕುರಿತು ಅಧಿಸೂಚನೆ ಹೊರಡಿಸಿದೆ. ಇದರ ಅನ್ವಯ ಒಟ್ಟು 281 ಹುದ್ದೆಗಳು ಖಾಲಿ ಇದ್ದು,ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್‌ 28 ಎಂದು ಬಿಎಸ್‌ಎಫ್‌ ಹೇಳಿದೆ. ಅಭ್ಯರ್ಥಿಗಳು ಕೊನೆಯ ದಿನಾಂಕವರೆಗೆ ಕಾಯದೇ ಶೀಘ್ರವೇ ಸೂಕ್ತ ದಾಖಲೆಗಳ ಸಹಿತ ಭರ್ತಿಗೊಳಿಸಿದ ಅರ್ಜಿಗಳನ್ನು ಸಲ್ಲಿಸಬೇಕಿದೆ. ಈ ಕುರಿತು ಹೆಚ್ಚಿನ ಮಾಹಿತಿಗಳನ್ನು ಕೆಳಗಡೆ ನೀಡಲಾಗಿದೆ.

ಹುದ್ದೆಗಳ ವಿವರ ಇಲ್ಲಿದೆ: ಬಾರ್ಡರ್‌ ಸೆಕ್ಯೂರಿಟಿ ಫೋರ್ಸ್‌(ಬಿಎಸ್‌ಎಫ್‌) ಹೊರಡಿಸಿರುವ ನೇಮಕಾತಿ ಅಧಿಸೂಚನೆಯಲ್ಲಿ ಗ್ರೂಪ್‌ ಬಿ ವಿಭಾಗದಲ್ಲಿ ಒಟ್ಟು 281 ಹುದ್ದೆಗಳು ಖಾಲಿ ಇದೆ. ಅಭ್ಯರ್ಥಿಗಳು ಭಾರತಾದ್ಯಂತ ಕರ್ತವ್ಯ ನಿರ್ವಹಸಲು ಸಿದ್ಧರಿರಬೇಕಿದೆ. ಸಬ್‌ಇನ್‌ಸ್ಪೆಕ್ಟರ್‌( ಮಾಸ್ಟರ್‌) 08 ಹುದ್ದೆ, ಸಬ್‌ಇನ್‌ಸ್ಪೆಕ್ಟರ್‌(ಎಂಜಿನ್‌ ಚಾಲಕ) 06 ಹುದ್ದೆ),ಸಬ್‌ಇನ್‌ಸ್ಪೆಕ್ಟರ್‌(ಕಾರ್ಯಾಗಾರ) 02 ಹುದ್ದೆ, ಹೆಡ್‌ಕಾನ್‌ಸ್ಟೇಬಲ್‌(ಮಾಸ್ಟರ್‌)52 ಹುದ್ದೆಗಳು, ಹೆಡ್‌ಕಾನ್‌ಸ್ಟೇಬಲ್‌(ಎಂಜಿನ್‌ ಡ್ರೈವರ್‌) 64 ಹುದ್ದೆ, ಹೆಡ್‌ಕಾನ್‌ಸ್ಟೇಬಲ್‌(ಕಾರ್ಯಾಗಾರ) 19 ಹುದ್ದೆ ಹಾಗೂ ಕಾನ್‌ಸ್ಟೇಬಲ್‌(ಸಿಬ್ಬಂದಿ) 130 ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತಿದೆ ಎಂದು ಬಿಎಸ್‌ಎಫ್‌ ಹೇಳಿದೆ.

ವಿದ್ಯಾರ್ಹತೆ ಏನು ಇರಬೇಕು?: ಅರ್ಜಿ ಸಲ್ಲಿಸುವ ಪ್ರತಿಯೊಬ್ಬ ಅಭ್ಯರ್ಥಿಯು ಕನಿಷ್ಠ ಎಸ್‌ಎಸ್‌ಎಲ್‌ಸಿ, ಅಥವಾ ಪಿಯುಸಿ ತೇರ್ಗಡೆಯಾಗಿರಬೇಕು. ಅದರ ಜೊತೆಗೆ ಅಭ್ಯರ್ಥಿಗಳು ಡಿಪ್ಲೊಮಾ (ಮೆಕ್ಯಾನಿಕಲ್‌ ಇಂಜಿನಿಯರಿಂಗ್‌) ಅಥವಾ ತತ್ಸಮಾನ ಪದವಿ ಪಡೆದಿರಬೇಕು. ಇಲ್ಲವಾದಲ್ಲಿ ಇವುಗಳಿಗೆ ಸಮಾನವಾದ ಪದವಿಯನ್ನು ಪಡೆದರೂ ಮಾನ್ಯತೆ ಇದೆ ಎಂದು ಬಿಎಸ್‌ಎಫ್‌ ಹೇಳಿದೆ.