IBPS RRB ರಾಷ್ಟ್ರೀಕೃತ ಬ್ಯಾಂಕ್‌ ನೇಮಕಾತಿ ಪರೀಕ್ಷೆ ಅರ್ಜಿ ನಾಳೆಯಿಂದ ಲಭ್ಯ!

  • ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆಯಿಂದ RRB ನೋಟಿಫಿಕೇಶನ್
  • ಜೂನ್ 7 ರಿಂದ ಪ್ರವೇಶ ಪರೀಕ್ಷಾ ಅರ್ಜಿ ವೆಬ್‌ಸೈಟ್‌ನಲ್ಲಿ ಲಭ್ಯ
  • ಅರ್ಹತೆ, ಪಪರೀಕ್ಷೆ ಸೇರಿದಂತೆ ಎಲ್ಲಾ ವಿವರದ ಅಧಿಸೂಚನೆ ಪ್ರಕಟ
IBPS RRB 2022 Recruitment Notification  Online Application Process start from june 7th ckm

ನವದೆಹಲಿ(ಜೂ.06): ಪ್ರಾದೇಶಿಕ ಗ್ರಾಮಿಣ ಬ್ಯಾಂಕ್(RRB) ನೇಮಕಾತಿ ಪರೀಕ್ಷೆಗೆ  ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ಅಧಿಸೂಚನೆ ಹೊರಡಿಸಿದೆ. ಆಫೀಸರ್ಸ್ ಸ್ಕೇಲ್ IPO), ಆಫೀಸ್ ಅಸಿಸ್ಟೆಂಟ್, ಗುಮಾಸ್ತ ಹಾಗೂ ಆಫೀಸರ್ಸ್ ಸ್ಕೇಲ್ II ಮತ್ತು III ನೇಮಕಾತಿಗೆ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಜೂನ್ 7 ರಿಂದ ಅಧಿಕೃತ ವೆಬ್‌ಸೈಟ್‌ನಲ್ಲಿ ನೇಮಕಾತಿ ಪ್ರವೇಶ ಪರೀಕ್ಷೆಯ ಅರ್ಜಿ ಲಭ್ಯವಾಗಲಿದೆ. 

ಅಧಿಕೃತ ವೆಬ್‌ಸೈಟ್‌ನಲ್ಲಿ ಜೂನ್ 7 ರಿಂದ ಜೂನ್ 27ರ ವರೆಗ ಅರ್ಜಿ ಲಭ್ಯವಿದೆ. ಜೂನ್ 27ರೊಳಗೆ ಪರೀಕ್ಷೆ ಬರೆಯಲು ಇಚ್ಚಿಸುವವರು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.  IBPS ಕ್ಯಾಲೆಂಡರ್ ಪ್ರಕಾರ, IBPS RRB PO 2022 ಮತ್ತು IBPS RRB ಕ್ಲರ್ಕ್ 2022 ರ IBPS RRB ಪ್ರಿಲಿಮ್ಸ್ ಪರೀಕ್ಷೆ 07 ಆಗಸ್ಟ್ ನಿಂದ 21 ಆಗಸ್ಟ್ 2022 ರವರೆಗೆ ನಡೆಯಲಿದೆ. ಪರೀಕ್ಷೆ ನಿಗಿದಿತ ದಿನಾಂಕ ಇನ್ನಷ್ಟೇ ಬಹಿರಂಗವಾಗಬೇಕಿದೆ. 

NTPC Recruitment 2022: ವಿವಿಧ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ನೇಮಕಾತಿ

ಆಫೀಸರ್ ಸ್ಕೇಲ್ 2 ಮತ್ತು 3 ಪರೀಕ್ಷೆ ಸೆಪ್ಟೆಂಬರ್ 24 ರಂದು ನಡೆಯಲಿದೆ. IBPS RRB ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಪಾಸ್ ಆಗುವ  PO ಮತ್ತು ಕ್ಲರ್ಕ್ ಹುದ್ದೆಗೆ ಮುಖ್ಯ ಪರೀಕ್ಷೆಯನ್ನು ನಡೆಸಲಾಗುತ್ತದೆ. 

IBPS RRB PO ಕರ್ಕ್ 2022 ನೊಟಿಫಿಕೇಶನ್ ದಿನಾಂಕ , 06 ಜೂನ್ 2022
IBPS RRB PO ಕ್ಲರ್ಕ್ 2022 ಅರ್ಜಿ ಆರಂಭ ದಿನಾಂಕ,    07 ಜೂನ್ 2022
IBPS RRB PO ಕ್ಲರ್ಕ್ 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ, 27 June 2022
IBPS RRB ಪರೀಕ್ಷಾ ಪೂರ್ವ ತರಬೇತಿ(PET)ಜುಲೈ 18 ರಿಂದ ಜುಲೈ 23, 2002
IBPS RRB PO ಕ್ಲರ್ಕ್ ಪ್ರಿಲಿಮ್ಸ್ ಪರೀಕ್ಷೆ ದಿನಾಂಕ, ಆಗಸ್ಟ್ 2022
IBPS RRB PO ಕ್ಲರ್ತ್ ಪ್ರಿಲಿಮ್ಸ್ ಫಲಿತಾಂಶ ದಿನಾಂಕ, ಸೆಪ್ಟೆಂಬರ್ 2022 ನಿರೀಕ್ಷಿಸಲಾಗಿದೆ
IBPS RRB PO ಮುಖ್ಯ ಪರೀಕ್ಷೆ ದಿನಾಂಕ, ಸೆಪ್ಟೆಂಬರ್ 2022
IBPS RRB ಕ್ಲರ್ಕ್ ಮುಖ್ಯ ಪರೀಕ್ಷೆ ದಿನಾಂಕ , ಅಕ್ಟೋಬರ್ 2022
IBPS RRB ಆಫೀಸರ್ 2 ಮತ್ತು 3 ಪರೀಕ್ಷೆ ದಿನಾಂಕ, ಸೆಪ್ಟೆಂಬರ್ 2022

Latest Videos
Follow Us:
Download App:
  • android
  • ios