ದೇಶದ ಸರ್ವೋಚ್ಛ ನ್ಯಾಯಾಲಯದಲ್ಲಿ ಹಲವು ಹುದ್ದೆಗಳು ಖಾಲಿಯಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಸಂಬಂಧ ಸುಪ್ರೀಂಕೋರ್ಟ್ ಅಧಿಕೃತ ಪ್ರಕಟಣೆ ಕೂಡ ಹೊರಡಿಸಿದೆ.

ಆರಂಭಿಕ ಮೂಲ ವೇತನ 44,900 ರೂ. ಇರುವ ಪೇ ಮ್ಯಾಟ್ರಿಕ್ಸ್‌ನ 7 ನೇ ಹಂತದ ಕೋರ್ಟ್ ಅಸಿಸ್ಟೆಂಟ್ (ಜೂನಿಯರ್ ಟ್ರಾನ್ಸ್‌ಲೇಟರ್) ನ ಎಕ್ಸ್-ಕೇಡರ್ ಹುದ್ದೆಗಳಿಗೆ ಭರ್ತಿ ಮಾಡಲಾಗುವುದು. ಸುಪ್ರೀಂ ಕೋರ್ಟ್ ನೇಮಕಾತಿ 2021 ರ ಆನ್‌ಲೈನ್ ಅರ್ಜಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ಅರ್ಜಿ ಸಲ್ಲಿಸಲು ಮಾರ್ಚ್ 13 ಕೊನೆಯ ದಿನಾಂಕ ಆಗಿದೆ.

ಭಾರತೀಯ ವಾಯುಪಡೆ ಸೇರಲು ಅವಕಾಶ; ತಿಂಗಳಿಗೆ ಕನಿಷ್ಠ 18 ಸಾವಿರ ವೇತನ

ಕಿರಿಯ ಅನುವಾದಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 18 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು 27 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು. ಎಸ್‌ಸಿ / ಎಸ್‌ಟಿ / ಒಬಿಸಿ / ಪಿಎಚ್ / ಮಾಜಿ ಸೈನಿಕರು ಮತ್ತು ಸ್ವಾತಂತ್ರ್ಯ ಹೋರಾಟಗಾರ ವರ್ಗಕ್ಕೆ ಸೇರಿದವರಿಗೆ ಸರ್ಕಾರಿ ನಿಯಮಗಳ ಪ್ರಕಾರ ವಯಸ್ಸಿನಲ್ಲಿ ಸಾಮಾನ್ಯ ಸಡಿಲಿಕೆ  ಸ್ವೀಕಾರಾರ್ಹವಾಗಿರುತ್ತದೆ.

ಖಾಲಿ ಇರುವ ಒಟ್ಟು 31 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಇಂಗ್ಲಿಷ್‌ನಿಂದ ಆಯಾ ಭಾಷೆಗೆ ಅನುವಾದ ಮಾಡಿಕೊಳ್ಳುವ ತಲಾ ಇಬ್ಬರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಇಂಗ್ಲಿಷನ್‌ನಲ್ಲಿರುವ ತೀರ್ಪನ್ನು ಕನ್ನಡಕ್ಕೆ ಅನುವಾದ ಮಾಡಲು ಇಬ್ಬರು ಕಿರಿಯ ಅನುವಾದಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಅದೇ ರೀಕಿ, ತಮಿಳು, ಮಲಯಾಳಂ, ಅಸ್ಸಾಮಿ, ಬೆಂಗಾಳಿ, ತೆಲುಗು, ಮಣಿಪುರಿ, ಒಡಿಯಾ, ಪಂಜಾಬಿ, ಗುಜರಾತಿ, ಉರ್ದು ಮರಾಠಿ ಭಾಷೆಗೆ ತಲಾ ಇಬ್ಬರನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದರೆ ನೇಪಾಳಿ ಭಾಷೆಗೆ ಒಬ್ಬರು ಮತ್ತು ಹಿಂದಿ ಭಾಷೆಗೆ ಐವರು ಕಿರಿಯ ಅನುವಾದಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.

ಮೊದಲು ಅಭ್ಯರ್ಥಿಗಳನ್ನು ಆಬ್ಜೆಕ್ಟಿವ್ ಟೈಪ್ ಲಿಖಿತ ಪರೀಕ್ಷೆ ಮತ್ತು ಅನುವಾದ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಎರಡೂ ಪರೀಕ್ಷೆಗಳಿಗೆ ಅರ್ಹತೆ ಪಡೆದವರನ್ನು ಇಂಗ್ಲಿಷ್ ಮತ್ತು ಆಯಾ ಸ್ಥಳೀಯ ಭಾಷೆಗಳಲ್ಲಿ ಟೈಪಿಂಗ್ ವೇಗವನ್ನು ತಿಳಿಯಲು  ಕಂಪ್ಯೂಟರ್‌ನಲ್ಲಿ ಇಂಗ್ಲಿಷ್ ಮತ್ತು ಭಾಷಾ ಪ್ರಾವೀಣ್ಯತೆಯ ಪರೀಕ್ಷೆಗೆ ಕರೆಯಲಾಗುತ್ತದೆ.

ಮೊಮ್ಮಗಳ ಕನಸು ಈಡೇರಿಸಲು ಮನೆ ಮಾರಿ ಆಟೋದಲ್ಲಿ ಜೀವನ ನಡೆಸುತ್ತಿರುವ ಅಜ್ಜ!

ಎಲ್ಲಾ ಪರೀಕ್ಷೆಗಳಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ನಂತರ ಸಂದರ್ಶನಕ್ಕೆ (ವಿವಾ) ಕರೆಯಲಾಗುತ್ತದೆ. ಕನಿಷ್ಠ ಅರ್ಹತೆ ಅಥವಾ ಹೆಚ್ಚಿನ ಅಂಕಗಳನ್ನು ಗಳಿಸುವ ಮೂಲಕ ಸಂದರ್ಶನಕ್ಕೆ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಕಿರಿಯ ಭಾಷಾಂತರಕಾರರಾಗಿ ನೇಮಕ ಮಾಡಲು ಅರ್ಹತೆಯ ಕ್ರಮದಲ್ಲಿ ಪಟ್ಟಿ ಮಾಡಲಾಗುತ್ತದೆ.

ಕೋರ್ಟ್ ಅಸಿಸ್ಟೆಂಟ್ (ಜೂನಿಯರ್ ಟ್ರಾನ್ಸ್‌ಲೇಟರ್) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ನಿಗದಿತ ಅರ್ಹತಾ ಷರತ್ತುಗಳನ್ನು ಕೂಲಂಕಷವಾಗಿ ಗಮನಿಸಬೇಕು.

ಅಭ್ಯರ್ಥಿಯು ಅವನ / ಅವಳ ಭಾವಚಿತ್ರವನ್ನು 5 ಸೆಂ.ಮೀ ಎತ್ತರ ಮತ್ತು 3.8 ಸೆಂ.ಮೀ ಅಗಲ (50 ಕೆಬಿ ವರೆಗೆ) ಜೆಪಿಜಿ ಸ್ವರೂಪದಲ್ಲಿ ಸ್ಕ್ಯಾನ್ ಮಾಡಬೇಕಾಗುತ್ತದೆ. ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಸಂಬಂಧಿತ ಸ್ಥಳದಲ್ಲಿ ಜೆಪಿಜಿ ಸ್ವರೂಪದಲ್ಲಿ 2.5 ಸೆಂ.ಮೀ ಎತ್ತರ ಮತ್ತು 5 ಸೆಂ.ಮೀ ಅಗಲ (50 ಕೆಬಿ ವರೆಗೆ ಗಾತ್ರ) ಹೊಂದಿರುವ ಸಹಿ ಹಾಕಿ ಅಪ್‌ಲೋಡ್ ಮಾಡಬೇಕು.

ಭಾರತದ ಸುಪ್ರೀಂ ಕೋರ್ಟ್‌ನ ವೆಬ್‌ಸೈಟ್‌ನಲ್ಲಿ ಒದಗಿಸಬೇಕಾದ ಲಿಂಕ್‌ನಿಂದ ಪ್ರವೇಶ ಪತ್ರವನ್ನು ತಯಾರಿಸಲು ಮತ್ತು ನಿಗದಿತ ಪರೀಕ್ಷೆಗಳು / ಸಂದರ್ಶನಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಗಾಗಿ ಅಭ್ಯರ್ಥಿಯು ತನ್ನ ಅರ್ಜಿ ಸಂಖ್ಯೆಯನ್ನು ಎಚ್ಚರಿಕೆಯಿಂದ ಇಟ್ಟುಕೊಳ್ಳಬೇಕು.

ಕೋರ್ಟ್ ಅಸಿಸ್ಟೆಂಟ್ (ಜೂನಿಯರ್ ಟ್ರಾನ್ಸ್‌ಲೇಟರ್) ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಅಭ್ಯರ್ಥಿಗಳು ಸುಪ್ರೀಂಕೋರ್ಟ್‌ನ https://jobapply.in/Sc2020Translator
ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಇಲ್ಲವೇ ಇಲ್ಲಿ ಕ್ಲಿಕ್ ಮಾಡಿ.

ಬಿಟೆಕ್, ಡಿಪ್ಲೋಮಾ ಬಾಕಿ ಶುಲ್ಕ ಪಾವತಿಗೆ ನರೇಗಾದಲ್ಲಿ ಬೆವರು ಹರಿಸುತ್ತಿರುವ ಸೋದರಿಯರು