ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್ ಆಗಿರುವ ಬ್ಯಾಂಕ್ ಆಫ್ ಬರೋಡ್ 511 ನಾನಾ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಬ್ಯಾಂಕ್ ಆಫ್ ಬರೋಡ ಸೀನಿಯರ್ ರಿಲೇಶನ್‌ಶಿಪ್ ಮ್ಯಾನೇಜರ್, ಇ-ರಿಲೇಶನ್‌ಶಿಪ್ ಮ್ಯಾನೇಜರ್, ಟೆರಿಟರಿ ಹೆಡ್, ಗ್ರೂಪ್ ಹೆಡ್, ಪ್ರೊಡಕ್ಟ್ ಹೆಡ್ - ಹೂಡಿಕೆ ಮತ್ತು ಸಂಶೋಧನೆ ಸಂಶೋಧನೆ ಸೇರಿದಂತೆ ಇತ್ಯಾದಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಏಪ್ರಿಲ್ 9 ರಿಂದ bankofbaroda.in ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು,

ಜೊತೆಗೆ ಈ ನೇಮಕತಾರಿ ಸಂಬಂಧ ಬ್ಯಾಂಕ್ ಹೊರಡಿಸಿರುವ ಜಾಹೀರಾತು ನೋಡಲು ಇಲ್ಲಿ ಕ್ಲಿಕ್ ಮಾಡಿ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 2021 ಏಪ್ರಿಲ್ 9ರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಹಾಗೆಯೇ 2021 ಏಪ್ರಿಲ್ 29 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ ಎಂಬುದನ್ನು ಅಭ್ಯರ್ಥಿಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

ದೂರದರ್ಶನದಲ್ಲಿ ಪತ್ರಕರ್ತರಾಗಲು ಅವಕಾಶ, ಏ.20ರೊಳಗೆ ಅರ್ಜಿ ಹಾಕಿ

ಬ್ಯಾಂಕ್ ಆಫ್ ಬರೋಡ ಒಟ್ಟು 511 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ.  ಸೀನಿಯರ್ ರಿಲೇಷನ್‌ಶಿಪ್ ಮ್ಯಾನೇಜರ್- 407, ಇ-ರಿಲೇಷನ್‌ಶಿಪ್ ಮ್ಯಾನೇಜರ್ – 50, ಟೆರಿಟರಿ ಹೆಡ್ಸ್- 44, ಗ್ರೂಪ್ ಹೆಡ್ಸ್-6, ಪ್ರಾಡಕ್ಟ್ ಹೆಡ್ ಇನ್‌ವೆಸ್ಟ್‌ಮೆಂಟ್ ಆಂಡ್ ರಿಸರ್ಚ್- 1, ಹೆಡ್ ಆಪರೇಷನ್ಸ್ ಆಂಡ್ ಟೆಕ್ನಾಲಜಿ-1, ಡಿಜಿಟಲ್ ಸೇಲ್ಸ್ ಮ್ಯಾನೇಜರ್- 1, ಐಟಿ ಫಂಕ್ಷನಲ್ ಅನಾಲಿಸ್ಟ್ ಮ್ಯಾನೇಜರ್ 1 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಸೀನಿಯರ್ ರಿಲೇಷನ್‌ಶಿಪ್ ಮ್ಯಾನೇಜರ್ಸ್ ಹುದ್ಗೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವವರು 24 ವರ್ಷದಿಂದ 35 ವರ್ಷ ವಯೋಮಾನದವರಾಗಿರಬೇಕು.  ಅದೇ ರೀತಿ,  ಇ-ರಿಲೇಷನ್‌ಶಿಪ್ ಮ್ಯಾನೇಜರ್ಸ್-23 ವರ್ಷದಿಂದ 35 ವರ್ಷ, ಟೆರಿಟರಿ ಹೆಡ್ಸ್- 27 ವರ್ಷದಿಂದ 40 ವರ್ಷಗಳು, ಗ್ರೂಪ್ ಹೆಡ್ಸ್- 31, ವರ್ಷಗಳಿಂದ 45 ವರ್ಷಗಳು, ಪ್ರಾಡಕ್ಟ್ ಹೆಡ್ ಇನ್‌ವೆಸ್ಟ್‌ಮೆಂಟ್ ಆಂಡ್ ರಿಸರ್ಚ್- 28 ವರ್ಷಗಳಿಂದ 45 ವರ್ಷಗಳು, ಹೆಡ್ ಆಪರೇಷನ್ಸ್ ಆಂಡ್ ಟೆಕ್ನಾಲಜಿ - 31 ವರ್ಷಗಳಿಂದ 45 ವರ್ಷಗಳು, ಡಿಜಿಟಲ್ ಸೇಲ್ಸ್ ಮ್ಯಾನೇಜರ್- 26 ವರ್ಷಗಳಿಂದ 40 ವರ್ಷಗಳು, ಐಟಿ ಫಂಕ್ಷನಲ್ ಅನಾಲಿಸ್ಟ್ ಮ್ಯಾನೇಜರ್- 26 ವರ್ಷಗಳಿಂದ 35 ವರ್ಷಗಳಾಗಿರಬೇಕು.

ಅರ್ಜಿ ಸಲ್ಲಿಸಿ ಅಭ್ಯರ್ಥಿಗಳು ಶಾರ್ಟ್‌ಲಿಸ್ಟ್ ಆದ ನಂತರದ ವೈಯಕ್ತಿಕ ಸಂದರ್ಶನಗಳು ಮತ್ತು / ಅಥವಾ ಗುಂಪು ಚರ್ಚೆ ಮತ್ತು / ಅಥವಾ ಇನ್ನಾವುದೇ ಆಯ್ಕೆ ವಿಧಾನದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಸೇನೆಯಿಂದ ಶೀಘ್ರ ಜೂನಿಯರ್ ಕಮಿಷನ್ಡ್ ಆಫೀಸರ್‌ ಹುದ್ದೆಗಳಿಗೆ ನೇಮಕಾತಿ?

ಯಾವುದೇ ಸಂಸ್ಥೆಯಲ್ಲಿ 6 ತಿಂಗಳಿಗಿಂತ ಕಡಿಮೆ ಅರ್ಹತೆ ಅನುಭವವನ್ನು ಪರಿಗಣಿಸಲಾಗುವುದಿಲ್ಲ. ಆಯ್ಕೆ ಪ್ರಕ್ರಿಯೆಗೆ (ಜಿಡಿ / ಪಿಐ / ಇನ್ನಾವುದೇ ಆಯ್ಕೆ ವಿಧಾನ) ಹೆಚ್ಚಿನ ಸೂಕ್ತ ಅಭ್ಯರ್ಥಿಗಳನ್ನು ಕರೆಯಲಾಗುತ್ತದೆ ಮತ್ತು ಕೇವಲ ಹುದ್ದೆಗೆ ಅರ್ಜಿ ಸಲ್ಲಿಸುವುದು / ಅರ್ಹತೆ ಪಡೆಯುವುದು ಅಭ್ಯರ್ಥಿಯನ್ನು ಆಯ್ಕೆ ಪ್ರಕ್ರಿಯೆಗೆ ಆಹ್ವಾನಿಸಲು ಅರ್ಹತೆ ನೀಡುವುದಿಲ್ಲ.

NTPCಯಲ್ಲಿ ನೇಮಕಾತಿ; ತಿಂಗಳಿಗೆ 71 ಸಾವಿರ ರೂಪಾಯಿ ಸಂಬಳ!

ಸಾಮಾನ್ಯ ಮತ್ತು ಒಬಿಸಿ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು 600 / - ಅರ್ಜಿ ಶುಲ್ಕ ಮತ್ತು ಎಸ್‌ಸಿ / ಎಸ್‌ಟಿ / ಪಿಡಬ್ಲ್ಯುಡಿ / ಮಹಿಳಾ ಅಭ್ಯರ್ಥಿಗಳಿಗೆ ₹ 100 ಅರ್ಜಿ ಶುಲ್ಕ ಪಾವತಿಸಬೇಕಾಗುತ್ತದೆ. ಪೆಮೇಂಟ್ ಗೇಟ್‌ವೇ ಲಭ್ಯವಿರುವ ಆಯಪ್ ಮೂಲಕವೂ ಆನ್‌ಲೈನ್‌ಶುಲ್ಕವನ್ನು ಪಾವತಿ ಮಾಡಬಹುದು. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಬ್ಯಾಂಕ್ ಆಫ್ ಬರೋಡದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.