Asianet Suvarna News Asianet Suvarna News

ಐಡಿಬಿಐ ಬ್ಯಾಂಕಿನಲ್ಲಿ ಆಫೀಸರ್ ಹುದ್ದೆ, ವಾರ್ಷಿಕ 60 ಲಕ್ಷ ರೂ.ವರೆಗೂ ಪ್ಯಾಕೇಜ್

ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್ ಆಗಿರುವ ಐಡಿಬಿಐ ಬ್ಯಾಂಕ್ ಗುತ್ತಿಗೆ ಆಧಾರಿತ ಆಫೀಸರ್ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳು ತುಂಬ ಕಡಿಮೆ ಸಂಖ್ಯೆಯಲ್ಲಿದ್ದು, ಅರ್ಜಿಸಲ್ಲಿಸಲು ಮೇ 3 ಕೊನೆಯ ದಿನವಾಗಿದೆ.

IDBI Bank is recruiting its various posts and check details
Author
Bengaluru, First Published Apr 22, 2021, 4:21 PM IST

ಸರ್ಕಾರಿ ಸ್ವಾಮ್ಯದ ಪ್ರತಿಷ್ಠಿತ ಬ್ಯಾಂಕ್ಗಳಲ್ಲೊಂದಾದ ಐಡಿಬಿಐ ಬ್ಯಾಂಕ್ ಖಾಲಿಯಿರುವ ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಚೀಫ್ ಡೇಟಾ ಆಫೀಸರ್ ಹಾಗೂ ಇನ್ನಿತರೆ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಐಡಿಬಿಐ ಅಧಿಕೃತ ವೆಬ್‌ಸೈಟ್  idbibank.in ಮೂಲಕ ಅರ್ಜಿ ಸಲ್ಲಿಸಬಹುದು.

ಬ್ಯಾಂಕ್ ಆಫ್‌ ಬರೋಡದಲ್ಲಿ 511 ಹುದ್ದೆಗಳಿಗೆ ನೇಮಕಾತಿ, ಅಪ್ಲೈ ಮಾಡಿ

ಏಪ್ರಿಲ್ 20ರಿಂದಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದ್ದು, ಅರ್ಜಿ ಸಲ್ಲಿಸಲು ಮೇ 3 ಕೊನೆಯ ದಿನಾಂಕವಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ.  

ಅರ್ಹತಾ ಮಾನದಂಡಗಳ ಪ್ರಕಾರ, ಅಭ್ಯರ್ಥಿಯು ಯಾವುದೇ ಒಂದು ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಬಹುದು. ಆಯ್ದ ಅಭ್ಯರ್ಥಿಗಳನ್ನು ಜಾಹೀರಾತಿನ ಹೊರತಾಗಿ ಬ್ಯಾಂಕಿನ ಯಾವುದೇ ಕ್ರಿಯಾತ್ಮಕ ಕ್ಷೇತ್ರಗಳಲ್ಲಿ ಆಯ್ಕೆ ಮಾಡುವ ಹಕ್ಕನ್ನು ಐಡಿಬಿಐ ಬ್ಯಾಂಕ್ ಹೊಂದಿದೆ.  ಈ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಸಂಬಂಧ ಐಡಿಬಿಐ ಬ್ಯಾಂಕ್ ಹೊರಡಿಸಿರುವ ಅಧಿಸೂಚನೆಯನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.

ಚೀಫ್ ಡೇಟಾ ಆಫೀಸರ್ 1 ಹುದ್ದೆ, ಪ್ರೊಗ್ರಾಂ ಮ್ಯಾನೇಜ್‌ಮೆಂಟ್ & ಇನ್ಫಾರ್ಮೇಷನ್ ಟೆಕ್ನಾಲಜಿ (ಐಟಿ) ಕಾಂಪ್ಲಿಯೆನ್ಸ್ ಹೆಡ್ 1 ಹುದ್ದೆ, ಡೆಪ್ಯೂಟಿ ಚೀಫ್ ಟೆಕ್ನಾಲಜಿ ಆಫೀಸರ್ ಒಂದು ಹುದ್ದೆ, ಡೆಪ್ಯೂಟಿ ಚೀಫ್ ಟೆಕ್ನಾಲಜಿ ಆಫೀಸರ್ (ಡಿಜಿಟಲ್) 1 ಹುದ್ದೆ, ಚೀಫ್ ಇನ್ಫಾರ್ಮೇಷನ್ ಸೆಕ್ಯೂರಿಟಿ ಆಫೀಸರ್ 1 ಹುದ್ದೆ, ಡಿಜಿಟಲ್ ಬ್ಯಾಂಕಿಂಗ್ 1 ಹುದ್ದೆಗೆ ಅರ್ಜಿಗಳನ್ನ ಆಹ್ವಾನಿಸಿದೆ. ಇಂಜಿನಿಯರಿಂಗ್ ಪದವಿ ಅಥವಾ ಸ್ನಾತಕೋತ್ತರ ಪದವಿ ಆಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು ತಮ್ಮೆಲ್ಲ ಶೈಕ್ಷಣಿಕ ದಾಖಲೆಗಳು ಸರಿಹೊಂದುತ್ತವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.

ಪ್ರಾಥಮಿಕ ತಪಾಸಣೆಯ ಆಧಾರದ ಮೇಲೆ ಅಭ್ಯರ್ಥಿಯ ಆಯ್ಕೆ ಮಾಡಲಾಗುತ್ತದೆ. ಅರ್ಜಿಯೊಂದಿಗೆ ಸಲ್ಲಿಸಲಾದ ಅರ್ಹತಾ ಮಾನದಂಡಗಳು, ಅಭ್ಯರ್ಥಿಯ ಅರ್ಹತೆಗಳು, ಸೂಕ್ತತೆ / ಅನುಭವ ಇತ್ಯಾದಿಗಳನ್ನು ಆಧರಿಸಿ ಶಾರ್ಟ್ ಲಿಸ್ಟ್ ಮಾಡಲಾಗುವುದು.ಬಳಿಕ ಶಾರ್ಟ್‌ಲಿಸ್ಟ್ ಆಗಿರುವ ಅಭ್ಯರ್ಥಿಗಳನ್ನು ಮಾತ್ರ ವೈಯಕ್ತಿಕ ಸಂದರ್ಶನಕ್ಕೆ ಕರೆಯಲಾಗುವುದು, ಆಯಾ ಹುದ್ದೆಯಡಿಯಲ್ಲಿ ಲಭ್ಯವಿರುವ ಖಾಲಿ ಹುದ್ದೆಗಳಿಗೆ ತಕ್ಕಂತೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಬ್ಯಾಂಕ್ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

NTPCಯಲ್ಲಿ ನೇಮಕಾತಿ; ತಿಂಗಳಿಗೆ 71 ಸಾವಿರ ರೂಪಾಯಿ ಸಂಬಳ!

ಸಂಬಳ ಎಷ್ಟು?
ಚೀಫ್ ಡೇಟಾ ಆಫೀಸರ್, ಪ್ರೊಗ್ರಾಂ ಮ್ಯಾನೇಜ್‌ಮೆಂಟ್ & ಇನ್ಫಾರ್ಮೇಷನ್ ಟೆಕ್ನಾಲಜಿ (ಐಟಿ) ಕಾಂಪ್ಲಿಯೆನ್ಸ್ ಹೆಡ್, ಡೆಪ್ಯೂಟಿ ಚೀಫ್ ಟೆಕ್ನಾಲಜಿ ಆಫೀಸರ್ ಹಾಗೂ ಡೆಪ್ಯೂಟಿ ಚೀಫ್ ಟೆಕ್ನಾಲಜಿ ಆಫೀಸರ್ (ಡಿಜಿಟಲ್) ಹುದ್ದೆಗಳಿಗೆ ವಾರ್ಷಿಕ ೪೦ ರಿಂದ ೪೫ ಲಕ್ಷ ರೂಪಾಯಿ ಪ್ಯಾಕೇಜ್ ಸಿಗಲಿದೆ.

ಇನ್ನು ಚೀಫ್ ಇನ್ಫಾರ್ಮೇಷನ್ ಸೆಕ್ಯೂರಿಟಿ ಆಫೀಸರ್ ಹಾಗೂ ಡಿಜಿಟಲ್ ಬ್ಯಾಂಕಿಂಗ್ ಹುದ್ದೆಗೆ ವಾರ್ಷಿಕ 50 ರಿಂದ 60 ಲಕ್ಷ ರೂಪಾಯಿ ವೇತನ ಇರುತ್ತದೆ.  ಈ ಎಲ್ಲ ಹುದ್ದೆಗಳಿಗೆ ಸಲ್ಲಿಸಬೇಕಾದ ಅರ್ಜಿಯ ಫಾರ್ಮ್ಯಾಟ್ ಬಗ್ಗೆ ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

ಈ ಎಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು  ಬಯಸುವ ಅಭ್ಯರ್ಥಿಗಳು ಐಟಿ ವಲಯ, ಅದರಲ್ಲೂ ಬ್ಯಾಂಕ್ ಕ್ಷೇತ್ರ ಸೇರಿದಂತೆ ಒಟ್ಟು 18 ರಿಂದ 20 ವರ್ಷ ಕೆಲಸ ಮಾಡಿದ ಅನುಭವ ಇರಬೇಕು. ಡಿಜಿಟಲ್ ಬ್ಯಾಂಕಿಂಗ್ ಹಾಗೂ ಸಿಐಎಸ್‌ಒ ಹುದ್ದೆಗೆ ಅರ್ಜಿ ಸಲ್ಲಿಸುವವರ ವಯೋಮಿತಿ ಕನಿಷ್ಟ 45 ವರ್ಷ ಹಾಗೂ ಗರಿಷ್ಠ 55 ವರ್ಷಗಳಾಗಿರಬೇಕು. ಉಳಿದ ಹುದ್ದೆಗಳಿಗೆ ಗರಿಷ್ಟ 45 ವರ್ಷಗಳಾಗಿರಬೇಕು. ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು recruitment@idbi.co.ino ಗೆ ಕಳುಹಿಸಬೇಕು. 

ಸೇನೆಯಿಂದ ಶೀಘ್ರ ಜೂನಿಯರ್ ಕಮಿಷನ್ಡ್ ಆಫೀಸರ್‌ ಹುದ್ದೆಗಳಿಗೆ ನೇಮಕಾತಿ?

Follow Us:
Download App:
  • android
  • ios