ಪಿಎಸ್‌ಐ ಆಕಾಂಕ್ಷಿಗಳಿಗೆ ಶಾಕಿಂಗ್ ಸುದ್ದಿ ಕೊಟ್ಟ ಸಚಿವ ಆರಗ
* 950 ಹುದ್ದೆಗಳಿಗೆ ಆದೇಶ ನೀಡುವ ಪ್ರಕ್ರಿಯೆ
* ಅದು ಮುಗಿದರೆ ಎಲ್ಲ ಎಸ್‌ಐ ಹುದ್ದೆ ಭರ್ತಿ
* ಸರ್ಕಾರದಲ್ಲಿ ನಿರಂತರವಾಗಿ ನಡೆಯುತ್ತಿರುವ ನೇಮಕಾತಿ
ಬೆಂಗಳೂರು(ಮಾ.23): ಪೊಲೀಸ್ ಸಬ್ ಇನ್ಸ್‌ಪೆಕ್ಟರ್(Police Sub Inspector) ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿರುವುದರಿಂದ ಕೆಲವೇ ತಿಂಗಳಲ್ಲಿ ರಾಜ್ಯದಲ್ಲಿ(Karnataka) ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆ ಖಾಲಿ ಇರುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra) ತಿಳಿಸಿದ್ದಾರೆ.
ಮಂಗಳವಾರ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್(Congress) ಸದಸ್ಯ ಟಿ.ವೆಂಕಟರಮಣಯ್ಯ ಪ್ರಶ್ನೆಗೆ ಉತ್ತರಿಸಿದ ಅವರು, ಪೊಲೀಸ್ ಇಲಾಖೆಯಲ್ಲಿ(Police Department) ವಿವಿಧ ಹಂತದ 35 ಸಾವಿರ ಹುದ್ದೆಗಳು ಖಾಲಿ ಇದ್ದವು. ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ(BS Yediyurappa) ಮತ್ತು ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರ ನೇತೃತ್ವದ ಸರ್ಕಾರದಲ್ಲಿ ನಿರಂತರವಾಗಿ ನೇಮಕಾತಿ(Recruitment) ಪ್ರಕ್ರಿಯೆಗಳು ನಡೆಯುತ್ತಿವೆ. ಪರಿಣಾಮ ಈಗ 12 ಸಾವಿರ ಹುದ್ದೆಗಳು ಖಾಲಿ ಇದ್ದು, ಅವುಗಳ ಭರ್ತಿಗೂ ಕ್ರಮ ಕೈಗೊಳ್ಳಲಾಗುತ್ತಿದೆ. 950 ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಹುದ್ದೆ ನೇಮಕಾತಿ ನಡೆಯುತ್ತಿದ್ದು, ಆದೇಶ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಇದು ಮುಕ್ತಾಯವಾದರೆ ರಾಜ್ಯದಲ್ಲಿ ಪಿಎಸ್‌ಐ(PSI) ಹುದ್ದೆಗಳು ಖಾಲಿ ಇರುವುದಿಲ್ಲ ಎಂದು ಹೇಳಿದರು.
Government Jobs 8 ಸರ್ಕಾರಿ ನೌಕರಿಗಳ ಸರದಾರ, ವಿಜಯಪುರದ ಮಾಜಿ ವೀರಯೋಧ..!
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದಲ್ಲಿ ಮೂರು ಪೊಲೀಸ್ ಠಾಣೆಗಳಿವೆ. ದೊಡ್ಡ ಬಳ್ಳಾಪುರ ನಗರ, ಗ್ರಾಮಾಂತರ, ಮಹಿಳಾ ಠಾಣೆ ಇದೆ. ಈ ಠಾಣೆಗಳಿಗೆ 147 ಸಿಬ್ಬಂದಿ ಮಂಜೂರು ಆಗಿದ್ದು, ಈ ಪೈಕಿ 123 ಹುದ್ದೆಗಳು ಭರ್ತಿಯಾಗಿವೆ. 24 ಹುದ್ದೆಗಳು ಖಾಲಿ ಇವೆ. ಹಂತ ಹಂತವಾಗಿ ಭರ್ತಿ ಮಾಡಲಾಗುವುದು ಎಂದು ಇದೇ ವೇಳೆ ಸಚಿವರು ಭರವಸೆ ನೀಡಿದರು.
ನೊಂದ ಅಭ್ಯರ್ಥಿಗಳಿಂದ ಕಾನೂನು ಸಮರಕ್ಕೆ ಸಿದ್ಧತೆ
ಯಾದಗಿರಿ: 545 ಪಿಎಸೈ ಪರೀಕ್ಷೆಯಲ್ಲಿ ಅಕ್ರಮಗಳ ಕುರಿತು ಆರೋಪಿಸಿದ್ದ ನೊಂದ ಅಭ್ಯರ್ಥಿಗಳು, ಗೃಹ ಸಚಿವರ ಹಾರಿಕೆಯ ಉತ್ತರಗಳಿಂದಾಗಿ ರೋಸಿ ಹೋಗಿದ್ದು, ಇದೀಗ ಕಾನೂನು ಸಮರಕ್ಕೆ ಸಿದ್ಧತೆ ನಡೆಸಿದ್ದಾರೆ.
ಕಲ್ಯಾಣ ಕರ್ನಾಟಕ(Kalyana Karnataka) ಮೀಸಲಾತಿ ಕಲಂ 371 (ಜೆ) ಸರಿಪಡಿಸಲು ಎಂಬ ಕಾರಣದಿಂದಾಗಿ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಸ್ಥಗಿತಗೊಳಿಸುವ ಗೃಹ ಇಲಾಖೆಯ ಈ ಸಮಜಾಯಿಷಿ, ಅಕ್ರಮದ ಕುರಿತು ಪ್ರಶ್ನಿಸುತ್ತಿರುವ ಅಭ್ಯರ್ಥಿಗಳಿಗೆ(Candidates) ಉತ್ತರ ನೀಡುವಲ್ಲಿ ಹಿಂದೇಟು ಹಾಕುತ್ತಿರುವುದು ಅನುಮಾನ ಮೂಡಿಸಿದೆ.
ವಿಜಯಪುರ(Vijayapura) ಹಾಗೂ ಬೆಳಗಾವಿ(Belagavi) ಸೇರಿದಂತೆ ಕೆಲವು ಜಿಲ್ಲೆಗಳ ಕೆಲ ಅಭ್ಯರ್ಥಿಗಳು ರಾಜ್ಯದ ಅಡ್ವೋಕೇಟ್ ಜನರಲ್ ನ್ಯಾ. ಪ್ರಭುಲಿಂಗ್ ನಾವದಗಿ, ಲೋಕಾಯುಕ್ತ ನ್ಯಾ. ವಿಶ್ವನಾಥ ಶೆಟ್ಟಿಹಾಗೂ ಭ್ರಷ್ಟಾಚಾರ ನಿಗ್ರಹ ದಳದ ಮುಖ್ಯಸ್ಥ ಸೀಮಾಂತಕುಮಾರ್ ಸಿಂಗ್, ಐಪಿಎಸ್ ಅವರಿಗೆ ದೂರು ನೀಡಿದ್ದಾರೆ. ಪಿಎಸೈ ಪರೀಕ್ಷೆಯಲ್ಲಿ ಅಕ್ರಮವಾಗಿದೆ ಎಂಬುದರ ಬಗ್ಗೆ ಒಂದಿಷ್ಟು ದಾಖಲೆಗಳು ಹಾಗೂ ಸೂಕ್ಷ್ಮ ಸುಳಿವುಗಳನ್ನು ದೂರುಪತ್ರದಲ್ಲಿ ಬರೆದಿರುವ ನೊಂದ ಅಭ್ಯರ್ಥಿಗಳು, ತನಿಖೆಗೆ ಆಗ್ರಹಿಸಿ, ನ್ಯಾಯಕ್ಕಾಗಿ ಮೊರೆ ಹೋಗಿದ್ದಾರೆ.
PSI Recruitment Scam: ಸದನದಲ್ಲಿ ಸುಳ್ಳು ಉತ್ತರ ನೀಡಿತೇ ಸರ್ಕಾರ..?
ಅಕ್ರಮದ ಅನುಮಾನವಿದ್ದರೆ ಉತ್ತರ ಪತ್ರಿಕೆ ಪಡೆದು ಮೇಲ್ಮನವಿ ಸಲ್ಲಿಸಬಹುದು ಎಂದು ಖುದ್ದು ಗೃಹ ಸಚಿವರೇ ಶಿವಮೊಗ್ಗದಲ್ಲಿ ಹೇಳಿದ್ದರು. ಅದರಂತೆ, ಅರ್ಜಿ ಸಲ್ಲಿಸಿದರೆ ಪ್ರತಿಗಳ ನೀಡಲಾಗುವುದಿಲ್ಲ ಎಂದು ಎಡಿಜಿಪಿ ಕಚೇರಿ ಉತ್ತರ ನೀಡಿದೆ. ಇಬ್ಬರ ಹೇಳಿಕೆಗಳನ್ನು ನೋಡಿದರೆ ಸಾಕಷ್ಟು ಶಂಕೆಗೆ ಕಾರಣವಾಗುತ್ತದೆ. ಹೀಗಾಗಿ, ಈಗ ಅಡ್ವೋಕೇಟ್ ಜನರಲ್, ಲೋಕಾಯುಕ್ತ ಹಾಗೂ ಎಸಿಬಿಗೆ ದಾಖಲೆಗಳ ಸಮೇತ ದೂರು ನೀಡಿದ್ದೇನೆ ಎಂದು ವಿಜಯಪುರ ಜಿಲ್ಲೆಯ ನೊಂದ ಅಭ್ಯರ್ಥಿಯೊಬ್ಬರು ‘ಕನ್ನಡಪ್ರಭ’ಕ್ಕೆ(Kannada Prabha) ತಿಳಿಸಿದ್ದರು.
ಈ ಮಧ್ಯೆ, ಪರಿಷತ್ ಸದಸ್ಯ ಶಶೀಲ್ ನಮೋಶಿ ಹಾಗೂ ಎಸ್.ರವಿ (ಸ್ಥಳೀಯ ಸಂಸ್ಥೆಗಳ) ಪಿಎಸೈ ಪರೀಕ್ಷೆ, ಮೀಸಲಾತಿ ಹಾಗೂ ಅಕ್ರಮದ ಕುರಿತು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಗೃಹ ಸಚಿವರ ಉತ್ತರ ಅಚ್ಚರಿ ಮೂಡಿಸಿದೆ. ಅಕ್ರಮದ ಬಗ್ಗೆ ಮಾಹಿತಿ ನೀಡುವಲ್ಲಿ ಗೃಹ ಇಲಾಖೆ(Home Department) ಹಿಂದೇಟು ಹಾಕಿದಂತಿದ್ದು, ಅರೆಬರೆ ಮಾಹಿತಿ ನೀಡಿದಂತಿದೆ.