Government Jobs 8 ಸರ್ಕಾರಿ ನೌಕರಿಗಳ ಸರದಾರ, ವಿಜಯಪುರದ ಮಾಜಿ ವೀರಯೋಧ..!
ವರದಿ- ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್ ವಿಜಯಪುರ
ಒಂದು ಸರಕಾರಿ ನೌಕರಿ (Govt job) ಪಡೆಯಲು ಅದೆಷ್ಟೋ ಜನ ಹರಸಾಹಸ ಪಡ್ತಾರೆ. ಒಂದೇ ಒಂದು ಸರ್ಕಾರಿ ನೌಕರಿಗಾಗಿ ಹಗಲು ರಾತ್ರಿ ಎನ್ನದೆ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಓದುತ್ತಾರೆ. ಇಷ್ಟೆಲ್ಲ ಮಾಡಿದ್ರು ಸರ್ಕಾರಿ ಕೆಲಸ ಅಂತಾ ಸಿಗೋದು ಗ್ಯಾರಂಟಿ ಇರೋದಿಲ್ಲ. ಅದೇನೋ ಅದೃಷ್ಟ ಇರಬೇಕು ಅಂತಾರಲ್ಲ ಹಾಗೇ. ಆದ್ರೆ ಗುಮ್ಮಟನಗರಿ ವಿಜಯಪುರದ (Vijayapur) ಈ ವ್ಯಕ್ತಿಗೆ ಅರಸಿ ಬಂದದ್ದು 8 ಸರ್ಕಾರಿ ನೌಕರಿಗಳು. ಅಚ್ಚರಿಯ ವಿಚಾರ ಅಂದ್ರೆ ಇಷ್ಟೇಲ್ಲ ಸರ್ಕಾರಿ ನೌಕರಿಗಳು ಹುಡುಕಿ ಬಂದಿದ್ದು ಕೇವಲ ಒಂದು ವರೆ ವರ್ಷದಲ್ಲಿ.. ನಿವೃತ್ತ ಸೈನಿಕನಾಗಿದ್ದವ (Soldier) ಈಗ ಪಿಎಸ್‌ಐ(PSI) ನೌಕರಿಗೆ ಸೇರಿದ್ದಾನೆ..
ಗುಮ್ಮಟನಗರಿ ವಿಜಯಪುರದ (Vijayapur) ಈ ವ್ಯಕ್ತಿಗೆ ಅರಸಿ ಬಂದದ್ದು 8 ಸರ್ಕಾರಿ ನೌಕರಿಗಳು. ಅಚ್ಚರಿಯ ವಿಚಾರ ಅಂದ್ರೆ ಇಷ್ಟೇಲ್ಲ ಸರ್ಕಾರಿ ನೌಕರಿಗಳು ಹುಡುಕಿ ಬಂದಿದ್ದು ಕೇವಲ ಒಂದು ವರೆ ವರ್ಷದಲ್ಲಿ.. ನಿವೃತ್ತ ಸೈನಿಕನಾಗಿದ್ದವ (Soldier) ಈಗ ಪಿಎಸ್‌ಐ(PSI) ನೌಕರಿಗೆ ಸೇರಿದ್ದಾನೆ..
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ದಾಶಾಳ್ಯ ಗ್ರಾಮದ ಕೃಷಿಕ ಕುಟುಂಬದಲ್ಲಿ (Farmer Family) ಜನಿಸಿರುವ ಮಹೇಶ ಸಂಖ್ ಎಂಬ ಪ್ರತಿಭಾನ್ವಿತ ಮಾಜಿ ಯೋಧ. ಇವರೆ ಈಗ 8 ಸರ್ಕಾರಿ ನೌಕರಿಗಳ ಸರದಾರ. ಭಾರತೀಯ ಸೈನ್ಯದಲ್ಲಿ 17 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
2019 ರಲ್ಲಿ ನಿವೃತ್ತಿ ಹೊಂದಿದ ಬಳಿಕ ಏನಾದರು ಸಾಧನೆ ಮಾಡಬೇಕು ಎನ್ನುವ ಹಠಕ್ಕೆ ಬಿದ್ದರು. ಹಿಡಿದ ಕಾರ್ಯ ಬಿಡದೆ ಕೇವಲ ಒಂದು ವರೆ ವರ್ಷದಲ್ಲಿ ಬರೊಬ್ಬರಿ 8 ನೌಕರಿಗಳನ್ನು ಪಡೆದಿದ್ದಾರೆ. ಎಫ್.ಡಿ.ಎ (FDA), ಎಸ್.ಡಿ.ಎ (SDA), ಜೈಲ್ ವಾರ್ಡರ್ (Jail Warden), ಸಿವಿಲ್ ಪೊಲೀಸ್ ಕಾನ್ಸಟೇಬಲ್ (Police Constable) , ಮೀಸಲು ಪಡೆ ಪೊಲೀಸ್ ಕಾನ್ಸಟೇಬಲ್ ಹೀಗೆ 7 ಸರಕಾರಿ ನೌಕರಿ (Government Job) ಗಿಟ್ಟಿಸಿಕೊಂಡರು ಕೂಡಾ ಅವುಗಳನ್ನು ತಿರಸ್ಕರಿಸಿ ಪಿ.ಎಸ್.ಐ. ಹುದ್ದೆ ಆಯ್ದುಕೊಂಡು ನೆರೆಯ ಜಿಲ್ಲೆ ಬಾಗಲಕೋಟ (Bagalakot) ಜಿಲ್ಲೆಯ ಮುಧೋಳದಲ್ಲಿ (Mudol Psi) ಒಂದು ವರೆ ವರ್ಷದಿಂದ ಪ್ರೋಬೆಷನರಿ ಪಿ.ಎಸ್.ಐ. ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆಗೆ (Kannada.suvarnanews.com) ಜೊತೆಗೆ ಮಾತನಾಡಿದ ಮಹೇಶ ಸಂಖ ಇಷ್ಟು ಸಾಧನೆ ಮಾಡಲು ತಮ್ಮ ತಂದೆಯವರೆ ಕಾರಣ ಎಂದಿದ್ದಾರೆ. ನನ್ನ ತಂದೆ ಯವರಿಗೆ ನಾನು ಡಾಕ್ಟರ್ ಆಗಬೇಕು ಎಂಬ ಕನಸಿತ್ತು. ಆದ್ರೆ ಸೈನಿಕನಾಗಿ ಭಾರಂತಾಂಬೆ ಸೇವೆಯಲ್ಲಿ ತೊಡಗಿದೆ. ಬಳಿಕ ಯಾವುದಾರು ಉನ್ನತ ಹುದ್ದೆಯಾದ್ರೂ ಪಡೆಯಲು ಎನ್ನುವ ಹಂಬಲ ತಂದೆಯವರದಾಗಿತ್ತು. ಅವರ ಕನಸು ನನಸು ಮಾಡಲು 8 ಸರ್ಕಾರಿ ನೌಕರಿಗಳಿಗೆ ಆಯ್ಕೆಯಾದೆ.. ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸಪೆಕ್ಟರ್ ಹುದ್ದೆ ಪಡೆಯುವಲ್ಲಿ ಯಶಸ್ವಿಯಾಗಿದ್ದೇನೆ ಎಂದಿದ್ದಾರೆ ಮಹೇಶ ಸಂಖ..
ಇನ್ನು ಸೇನೆಯಿಂದ ನಿವೃತ್ತರಾಗಿ ಬಂದ ಮಹೇಶ ಸಂಖ ಸುಮ್ಮನೆ ಕೂರಲಿಲ್ಲ. ತಂದೆಯ ಕನಸು ನನಸು ಮಾಡಲು ಬೆಂಗಳೂರಿನಲ್ಲಿ ತರಬೇತಿ ಪಡೆಯೋಕೆ ಶುರು ಮಾಡಿದ್ರು. ತರಬೇತಿಯ ಜೊತೆಗೆ ಒಂದೊಂದು ಪರೀಕ್ಷೆಗಳನ್ನ ಎದುರಿಸೋಕೆ ಆರಂಭಿಸಿದ್ರು. ಪರೀಕ್ಷೆ ಬರೆಯುತ್ತ ಹೋದಂತೆ ಸರ್ಕಾರಿ ನೌಕರಿಗಳ ನೇಮಕಾತಿ ಪತ್ರಗಳು ಮನೆ ಬಾಗಿಲಿಗೆ ಬರೋದಕ್ಕೆ ಶುರು ಮಾಡಿದ್ವು ಎನ್ತಾರೆ ಮಹೇಶ ಸಂಖ. ಓದಬೇಕು ಎನ್ನುವ ಹಂಬಲ ಇರುವ ವಿದ್ಯಾರ್ಥಿಗಳು ಮನಸ್ಸು ಮಾಡಿದ್ರೆ ಎನ್ ಬೇಕಾದ್ರೂ ಸಾಧಿಸಬಹುದು. ಇದಕ್ಕೆಲ್ಲ ಮನಸ್ಸಲ್ಲಿ ಛಲ, ನಿಷ್ಠೆಯು ಇರಬೇಕಾಗುತ್ತೆ ಅನ್ನೋದು ಮಹೇಶ ಅವರ ಮಾತು..
ಸಧ್ಯ ಪೊಲೀಸ್ ಸಬ್ ಇನ್ಸಪೆಕ್ಟರ್ (Sub Inspector) ಹುದ್ದೆ ಅಲಂಕರಿಸಿದ ಮಾಜಿ ಯೋಧ ಮಹೇಶ ಸಂಖರಿಗೆ ಎಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರ್ತಿದೆ.. 17 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಮಾಡಿ. ಈಗ 8 ಸರ್ಕಾರಿ ನೌಕರಿಗಳೆ ಮನೆಗೆ ಅರಸಿ ಬರುವಂತೆ ಸಾಧನೆ ಮಾಡಿದ ಮಹೇಶರನ್ನ ಸಂಖ ಗ್ರಾಮದ ಜನ ಕೊಂಡಾಡುತ್ತಿದ್ದಾರೆ. ತಮ್ಮೂರಿನ ಮಾಜಿ ಯೋಧ ಇಷ್ಟೆಲ್ಲ ಸಾಧನೆ ಮಾಡಿರುವುದಕ್ಕೆ ಗ್ರಾಮಸ್ಥರು ಹೆಮ್ಮೆ ಪಟ್ಟುಕೊಳ್ತಿದ್ದಾರೆ. ತಮ್ಮ ಊರಿನ ಪ್ರತಿಭಾನ್ವಿತ ವ್ಯಕ್ತಿ ಇನ್ನಷ್ಟು ಸಾಧನೆ ಮಾಡಲಿ ಎಂದು ಶುಭ ಹಾರೈಸುತ್ತಿದ್ದಾರೆ.
ದಾಸ್ಯಾಳ ಗ್ರಾಮದಲ್ಲೆ ಮಹೇಶ ಸಂಖ ಕುಟುಂಬ ಬಲು ಫೇಮಸ್. ಯಾಕಂದ್ರೆ ಇವ್ರದ್ದು ಕೂಡು ಕುಟುಂಬ. ಗ್ರಾಮದಲ್ಲಿ ಇವರದ್ದು ಅವಿಭಕ್ತ ಕುಟುಂಬ ಎನ್ನುವ ಹೆಗ್ಗಳಿಕೆಯು ಇದೆ. ಮಹೇಶ ಸೇರಿ 6 ಜನ ಸಹೋದರರಿದ್ದಾರೆ..
ಅಪ್ಪ-ಅಮ್ಮ, ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಒಟ್ಟು ಸೇರಿ ಒಂದೆ ಮನೆಯಲ್ಲಿ 24 ಜನ ಸದಸ್ಯರಿದ್ದಾರೆ. ಈ ಕೂಡು ಕುಟುಂಬದ ಮೂಲಕವು ಸಂಖ ಕುಟುಂಬ ಸಮಾಜಕ್ಕೆ ಬಾಂದವ್ಯದ ಸಂದೇಶವನ್ನ ಕೊಡ್ತಿದೆ..