Asianet Suvarna News Asianet Suvarna News

ಕೇರಳ ಲೋಕಸೇವಾ ಆಯೋಗದ ಪರೀಕ್ಷೆಯನ್ನು ಒಟ್ಟಿಗೆ ಪಾಸಾದ ತಾಯಿ - ಮಗ

ಲೋಕಸೇವಾ ಆಯೋಗದ ಪರೀಕ್ಷೆಯೊಂದರಲ್ಲಿ ತಾಯಿ ಮತ್ತು ಮಗ ಇಬ್ಬರೂ ಒಟ್ಟಿಗೆ ಪಾಸಾಗಿದ್ದಾರೆ. ಕೇರಳದ ಮಲಪ್ಪುರಂನಲ್ಲಿ ಈ ಅಪರೂಪದ ಘಟನೆ ವರದಿಯಾಗಿದೆ. 

mother and son clears public service commission exam together ash
Author
Bangalore, First Published Aug 10, 2022, 5:30 PM IST

ಯುಪಿಎಸ್‌ಸಿ, ರಾಜ್ಯ ಲೋಕಸೇವಾ ಆಯೋಗದ ಪರೀಕ್ಷೆಗಳು ಸಾಮಾನ್ಯವಾಗಿ ಕಠಿಣವಾಗಿರುತ್ತವೆ. ಲಕ್ಷಾಂತರ ಮಂದಿ ಪ್ರತಿ ವರ್ಷ ಪರೀಕ್ಷೆಗಳನ್ನು ಬರೆದರೂ ತೇರ್ಗಡೆ ಹೊಂದುವವರ ಸಂಖ್ಯೆ ತುಂಬಾ ಕಮ್ಮಿ. ಅಂತದ್ದರಲ್ಲಿ ಒಂದೇ ಮನೆಯಿಂದ ಇಬ್ಬರು ಅದರಲ್ಲೂ ಒಟ್ಟಿಗೆ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುತ್ತಾರೆ ಅಂದರೆ ನಂಬ್ತೀರಾ.. ಹೌದು, 
ಕೇರಳದ ಅಮ್ಮ ಮತ್ತು ಮಗ ಇಬ್ಬರೂ ಸಹ ಸ್ಥಳೀಯ ಲೋಕಸೇವಾ ಆಯೋಗದ (Public Service Commission) (ಪಿಎಸ್‌ಸಿ) ಪರೀಕ್ಷೆಯಲ್ಲಿ ಒಟ್ಟಿಗೆ ಉತ್ತೀರ್ಣರಾಗಿದ್ದಾರೆ.

ನಮ್ಮ ನೆರೆಯ ರಾಜ್ಯ ಕೇರಳದ ಮಲಪ್ಪುರಂನ 42 ವರ್ಷದ ಮಹಿಳೆ (ತಾಯಿ) ಹಾಗೂ 24 ವರ್ಷದ ಮಗ ಇಬ್ಬರೂ ಒಟ್ಟಿಗೆ ಕೇರಳದ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಒಟ್ಟಿಗೆ ತೇರ್ಗಡೆ ಹೊಂದಿದ್ದಾರೆ ಎಂದು ಸ್ಥಳೀಯ ಸಂಸ್ಥೆ ಎಎನ್‌ಐ ವರದಿ ಮಾಡಿದೆ.  ಈ ಸಂಬಂಧ ಮಾಹಿತಿ ನೀಡಿದ ಪುತ್ರ ವಿವೇಕ್‌, "ನಾವು ಒಟ್ಟಿಗೆ ಕೋಚಿಂಗ್ ಕ್ಲಾಸ್‌ಗೆ ಹೋಗಿದ್ದೆವು. ನನ್ನ ತಾಯಿ ನನ್ನನ್ನು ಈ ಕ್ಷೇತ್ರಕ್ಕೆ ಕರೆತಂದರು ಮತ್ತು ನನ್ನ ತಂದೆ ನಮಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಿದರು. ನಮಗೆ ನಮ್ಮ ಶಿಕ್ಷಕರಿಂದ ಸಾಕಷ್ಟು ಪ್ರೇರಣೆ ಸಿಕ್ಕಿತು. ನಾವಿಬ್ಬರೂ ಒಟ್ಟಿಗೆ ಓದಿದ್ದೇವೆ. ಆದರೆ ನಾವು ಒಟ್ಟಿಗೆ ಅರ್ಹತೆ ಪಡೆಯುತ್ತೇವೆ ಎಂದು ಎಂದಿಗೂ ಯೋಚಿಸಿರಲಿಲ್ಲ. ನಾವಿಬ್ಬರೂ ತುಂಬಾ ಸಂತೋಷದಿಂದಿದ್ದೇವೆ” ಎಂದು ಮಗ ವಿವೇಕ್ ಹೇಳಿಕೊಂಡಿದ್ದಾರೆ.

Teachers Recruitment; ಮಾಸಾಂತ್ಯಕ್ಕೆ 15000 ಶಿಕ್ಷಕರ ಪರೀಕ್ಷೆ ರಿಸಲ್ಟ್‌

ತನ್ನ ಮಗ 10 ನೇ ತರಗತಿಯಲ್ಲಿದ್ದಾಗ, ಬಿಂದು ಅವನನ್ನು ಪ್ರೋತ್ಸಾಹಿಸಲು ಪುಸ್ತಕಗಳನ್ನು ಓದಲು ಪ್ರಾರಂಭಿಸಿದರು, ಆದರೆ ಪುಸ್ತಕ ಓದುತ್ತಾ, ಕೇರಳ PSC ಪರೀಕ್ಷೆಗಳಿಗೆ ತಯಾರಾಗಲು ತಾಯಿಯನ್ನು ಪ್ರೇರೇಪಿಸಿತು. ಆ ಘಟನೆಯ ನಂತರ 9 ವರ್ಷಗಳು ಕಳೆದಿದ್ದು, ಈಗ ತಾಯಿ ಮತ್ತು ಮಗ ಒಟ್ಟಿಗೆ ಸರ್ಕಾರಿ ಕೆಲಸವನ್ನು ತೆಗೆದುಕೊಳ್ಳಲು ಸಿದ್ಧರಾಗಿದ್ದಾರೆ.

ಬಿಂದು ಲೋವರ್ ಡಿವಿಜನಲ್ ಕ್ಲರ್ಕ್ (Lower Division Clerk) (LDC) ಪರೀಕ್ಷೆಯಲ್ಲಿ 38ನೇ ಶ್ರೇಣಿಯೊಂದಿಗೆ ಉತ್ತೀರ್ಣರಾದರು. ಆದರೆ ಅವರ ಮಗ 92ನೇ ಶ್ರೇಣಿಯೊಂದಿಗೆ ಕೊನೆಯ ದರ್ಜೆಯ ಸೇವಕರ (LGS) ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಮೂರು ಪ್ರಯತ್ನಗಳ ನಂತರ - LGS ಪರೀಕ್ಷೆಗೆ ಎರಡು ಮತ್ತು LDC ಗೆ ಒಂದು - ಬಿಂದು ಅವರ ನಾಲ್ಕನೇ ಪ್ರಯತ್ನ ಯಶಸ್ವಿಯಾಯಿತು ಎಂದು ತಿಳಿದುಬಂದಿದೆ.

ಕಳೆದ 10 ವರ್ಷಗಳಿಂದ ಅಂಗನವಾಡಿ ಕೇಂದ್ರದಲ್ಲಿ ತಾಯಿ ಪಾಠ ಮಾಡುತ್ತಿದ್ದರು. ತನ್ನ ಸ್ನೇಹಿತರು, ಆಕೆಯ ಮಗ ಮತ್ತು ತನ್ನ ಕೋಚಿಂಗ್ ಸೆಂಟರ್‌ನಲ್ಲಿರುವ ಶಿಕ್ಷಕರು ಪ್ರಯಾಣದ ಸಮಯದಲ್ಲಿ ಸ್ಫೂರ್ತಿ ಮತ್ತು ಬೆಂಬಲದ ನಿರಂತರ ಮೂಲವಾಗಿದ್ದರು ಎಂದು ಅವರು ಹೇಳಿದರು.

ಲೋಕಸೇವಾ ಆಯೋಗದ (ಪಿಎಸ್‌ಸಿ) ಅಭ್ಯರ್ಥಿ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದಕ್ಕೆ ತಾನು ಪರಿಪೂರ್ಣ ಉದಾಹರಣೆ ಎಂದು ತಾಯಿ ಹೇಳಿಕೊಂಡಿದ್ದಾರೆ. ಆ ಮೂಲಕ ತಾನು ನಿರಂತರವಾಗಿ ಓದುತ್ತಿರಲಿಲ್ಲ ಎಂದು ತಿಳಿಸಿದ್ದಾರೆ. ಪರೀಕ್ಷೆಯ ದಿನಾಂಕಕ್ಕೆ ಆರು ತಿಂಗಳ ಮೊದಲು, ಅಧ್ಯಯನ ಮಾಡಲು ಪ್ರಾರಂಭಿಸುತ್ತಿದ್ದರು. ಅದರ ನಂತರ, ಮುಂದಿನ ಸುತ್ತಿನ ಪರೀಕ್ಷೆಗಳ ಘೋಷಣೆಯಾಗುವವರೆಗೆ ವಿರಾಮ ತೆಗೆದುಕೊಳ್ಳುತ್ತಿದ್ದರು ಎಂದೂ ತಾಯಿ ಹೇಳಿದರು.

ಯುಜಿಸಿ ನೆಟ್‌ ಫೇಸ್‌ 2 ಪರೀಕ್ಷೆ ಮುಂದೂಡಿಕೆ: ಪರಿಷ್ಕೃತ ಪರೀಕ್ಷಾ ದಿನಾಂಕ ಪ್ರಕಟ

ಈ ವಿರಾಮಗಳಿಂದಲೇ ಅವರು ಈ ಹಿಂದೆ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ವಿಫಲವಾಗಲು ಕಾರಣ ಎಂದು ಬಿಂದು ಹೇಳಿದರು. ಪರಿಶ್ರಮವು ಅಂತಿಮವಾಗಿ ಹೇಗೆ ಫಲ ನೀಡುತ್ತದೆ ಎಂಬುದಕ್ಕೆ ತಾನು ಪರಿಪೂರ್ಣ ಉದಾಹರಣೆ ಎಂದು ಸಹ ಅವರು ಹೇಳಿದರು.

ಕೇರಳದಲ್ಲಿ ಸ್ಟ್ರೀಮ್-2 ಹುದ್ದೆಗಳಿಗೆ ವಯಸ್ಸಿನ ಮಿತಿ 40 ಆಗಿದೆ. ಆದರೆ ನಿರ್ದಿಷ್ಟ ವರ್ಗಗಳಿಗೆ ಕೆಲವು ವಿನಾಯಿತಿಗಳಿವೆ. ಇತರೆ ಹಿಂದುಳಿದ ವರ್ಗಗಳ ಗುಂಪಿಗೆ 3 ವರ್ಷಗಳವರೆಗೆ ಸಡಿಲಿಕೆ ಇರುತ್ತದೆ. ಅಲ್ಲದೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ವಿಧವೆಯರಿಗೆ 5 ವರ್ಷಗಳವರೆಗೆ ಸಡಿಲಿಕೆ ಇರುತ್ತದೆ ಎಂದು ತಿಳಿದುಬಂದಿದೆ. ಹಾಗೂ, ಮಾತು, ಶ್ರವಣದೋಷ ಮತ್ತು ದೃಷ್ಟಿ ದೋಷವುಳ್ಳವರಿಗೆ ಸಡಿಲಿಕೆ ಅವಧಿಯು 15 ವರ್ಷಗಳು, ಆದರೆ ಆರ್ಥೋಪೆಡಿಕ್‌ ಅಂಗವಿಕಲರಿಗೆ 10 ವರ್ಷಗಳ ಸಡಿಲಿಕೆ ಎಂಬ ನಿಯಮಗಳು ಸಹ ಇವೆ.

Follow Us:
Download App:
  • android
  • ios