KSFC Recruitment 2023: ರಾಜ್ಯ ಹಣಕಾಸು ನಿಗಮದಲ್ಲಿ ಖಾಲಿ ಇರುವ 41 ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಹಣಕಾಸು ನಿಗಮವು 2023 ನೇ ವರ್ಷಕ್ಕೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಒಟ್ಟು  41 ಹುದ್ದೆಗಳು ಖಾಲಿ ಇದ್ದು, ಮಾರ್ಚ್ 18 ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

KSFC Recruitment 2023 Notification for 41 Deputy Manager Posts gow

ಬೆಂಗಳೂರು (ಮಾ. 4): ಕರ್ನಾಟಕ ರಾಜ್ಯ ಹಣಕಾಸು ನಿಗಮವು (KSFC) 2023 ನೇ ವರ್ಷಕ್ಕೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ, ತಾಂತ್ರಿಕ, ಕಾನೂನು, ಹಣಕಾಸು ಮತ್ತು ಖಾತೆಯಲ್ಲಿ 41 ಡೆಪ್ಯುಟಿ ಮ್ಯಾನೇಜರ್ ಹುದ್ದೆಗಳಿಗೆ ಡೈನಾಮಿಕ್ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆರ್ಥಿಕ ವಲಯದಲ್ಲಿ ಸವಾಲಿನ ವೃತ್ತಿಜೀವನವನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಾಗಿದೆ. ಆಸಕ್ತ ಅಭ್ಯರ್ಥಿಗಳು ವೇತನ, ಶೈಕ್ಷಣಿಕ ಅರ್ಹತೆಗಳು ಇತ್ಯಾದಿ ಮಾಹಿತಿಗಳನ್ನು ತಿಳಿಯಲು ಅಧಿಕೃತ ವೆಬ್‌ತಾಣ https://ksfc.karnataka.gov.in/ ಗೆ ಭೇಟಿ ನೀಡಬಹುದು.  ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು  ಮಾರ್ಚ್ 18ನೇ 2023 ಕೊನೆಯ ದಿನಾಂಕವಾಗಿದೆ.

ತಾಂತ್ರಿಕ ಉಪ ವ್ಯವಸ್ಥಾಪಕರು 11 ಹುದ್ದೆಗಳು
ಕಾನೂನು ಉಪ ವ್ಯವಸ್ಥಾಪಕರು 18 ಹುದ್ದೆಗಳು
ಹಣಕಾಸು ಮತ್ತು ಖಾತೆ ಉಪ ವ್ಯವಸ್ಥಾಪಕರು 12 ಹುದ್ದೆಗಳು

ಶೈಕ್ಷಣಿಕ ವಿದ್ಯಾಭ್ಯಾಸ:
ಕರ್ನಾಟಕ ರಾಜ್ಯ ಹಣಕಾಸು ನಿಗಮದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಹುದ್ದೆಗೆ ಅನುಸಾರವಾಗಿ  ಎಂಜಿನಿಯರಿಂಗ್, ಕಾನೂನು ( LLB), ಲೆಕ್ಕಪತ್ರ ನಿರ್ವಹಣೆ (ACA/ ICWA/ MBA/ M.Com), ಹಣಕಾಸು (CFA/ PGDMA) ಅಥವಾ ಸಂಬಂಧಿತ ಕ್ಷೇತ್ರಗಳಲ್ಲಿ ಪದವಿ ಪದವಿಯನ್ನು ಹೊಂದಿರಬೇಕು.

ವಯೋಮಿತಿ: ಕರ್ನಾಟಕ ರಾಜ್ಯ ಹಣಕಾಸು ನಿಗಮದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ವರ್ಗಾನುಸಾರ ವಯೋಮಿತಿ ಹೊಂದಿರಬೇಕು.
SC/ST ಮತ್ತು Cat-I ಅಭ್ಯರ್ಥಿಗಳು 25 ರಿಂದ 40 ವರ್ಷಗಳು
ಕ್ಯಾಟ್-2ಎ, ಕ್ಯಾಟ್-2ಬಿ, ಕ್ಯಾಟ್-3ಎ ಮತ್ತು ಕ್ಯಾಟ್-3ಬಿ ಅಭ್ಯರ್ಥಿಗಳಿಗೆ 25 ರಿಂದ 38 ವರ್ಷಗಳು
ಜನರಲ್ ಮೆರಿಟ್ ಅಭ್ಯರ್ಥಿಗಳಿಗೆ 25 ರಿಂದ 35 ವರ್ಷಗಳು

ವೇತನ ವಿವರ: ಕರ್ನಾಟಕ ರಾಜ್ಯ ಹಣಕಾಸು ನಿಗಮದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ  ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 52,650 ರೂ ರಿಂದ 97,100 ರೂ ವೇತನ ದೊರೆಯಲಿದೆ.

ಸಾಧನೆಗೆ ಯಾವುದೂ ಅಡ್ಡಿಯಲ್ಲ: 3 ಸರ್ಕಾರಿ ನೌಕರಿ ಪಡೆದ ಗುಳೇದಗುಡ್ಡದ ಅಂಧ ಯುವತಿ..!

ಅರ್ಜಿ ಶುಲ್ಕ: ಕರ್ನಾಟಕ ರಾಜ್ಯ ಹಣಕಾಸು ನಿಗಮದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾದ ಅಭ್ಯರ್ಥಿಗಳು ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಅರ್ಜಿ ಶುಲ್ಕ ಪಾವತಿಸಬೇಕು.
SC/ST ಅಭ್ಯರ್ಥಿಗಳು: ರೂ.1500/-
Cat-I/Cat-2A/Cat-2B/Cat-3A & Cat-3B ಅಭ್ಯರ್ಥಿಗಳು: ರೂ.2000/-

UAS Bengaluru Recruitment 2023: ಕೃಷಿ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ

ಅರ್ಜಿ ಸಲ್ಲಿಸಬೇಕಾದ ವಿಳಾಸ:
The Managing Director, KSFC Head Office,
KSFC Bhavana, No.1/1, Thimmaiah Road,
Bengaluru 560052
ಅರ್ಜಿ ಸಲ್ಲಿಸುವಾಗ ಸಹಾಯಕ್ಕಾಗಿ, ಅಭ್ಯರ್ಥಿಗಳು ಸಹಾಯವಾಣಿ ಸಂಖ್ಯೆ 080 22263322 (ext.870) ಅನ್ನು ಎಲ್ಲಾ ಕೆಲಸದ ದಿನಗಳಲ್ಲಿ ಕಚೇರಿ ಸಮಯದಲ್ಲಿ ಮಾತ್ರ ಸಂಪರ್ಕಿಸಬಹುದು.

Latest Videos
Follow Us:
Download App:
  • android
  • ios