Asianet Suvarna News Asianet Suvarna News

KSCA Recruitment 2022: ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿನ ವಿವಿಧ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ  ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಜನವರಿ 12ರೊಳಗೆ ಅರ್ಜಿ ಸಲ್ಲಿಸಿ

karnataka state cricket association recruitment notification apply before January 12th gow
Author
Bengaluru, First Published Jan 7, 2022, 9:38 PM IST

ಬೆಂಗಳೂರು(ಜ.7): ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ( Karnataka State Cricket Association- KSCA) ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (Chief Executive Officer),ಜನರಲ್ ಮ್ಯಾನೇಜರ್ (ಯೋಜನೆಗಳು ಮತ್ತು ಮೂಲಸೌಕರ್ಯ) ಸಹಾಯಕ ವ್ಯವಸ್ಥಾಪಕ (Assistant Manager)-ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ಸಹಾಯಕ ವ್ಯವಸ್ಥಾಪಕ (ಖಾತೆಗಳು ಮತ್ತು ಕ್ರೀಡಾ ಕೇಂದ್ರ), ವೈಯಕ್ತಿಕ ಕಾರ್ಯದರ್ಶಿ (Personal Secretary), ಹಿರಿಯ ಅಧಿಕಾರಿ (Senior Officer)-ಕನ್ನಡ ಈ ಮೇಲಿನ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ https://www.ksca.cricket/ ಗೆ ಭೇಟಿ ನೀಡಲು ಕೋರಲಾಗಿದೆ. 

ಶೈಕ್ಷಣಿಕ ವಿದ್ಯಾರ್ಹತೆ: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ನೇಮಕಾತಿಯ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಪದವಿ ಮತ್ತು ಸಿಎ ಇಂಟರ್ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್/ವಿಶ್ವವಿದ್ಯಾಲಯ/ಸಂಸ್ಥೆಯಿಂದ ಪಡೆದಿರಬೇಕು.

ವಯೋಮಿತಿ:  ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ  ನೇಮಕಾತಿಯ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು  ಕನಿಷ್ಟ 25 ರಿಂದ 40 ವರ್ಷ ವಯೋಮಿತಿಯೊಳಗಿರಬೇಕು. ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.

NCDIR RECRUITMENT 2022: ಭಾರತೀಯ ವೈದ್ಯ ಸಂಶೋಧನಾ ಮಂಡಳಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಆಯ್ಕೆ ಪ್ರಕ್ರಿಯೆ ಮತ್ತು ವೇತನ: KSCA ನೇಮಕಾತಿಯ ಚೀಫ್ ಎಕ್ಸಿಕ್ಯುಟಿವ್ ಅಧಿಕಾರಿ, ಜನರಲ್ ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್, ಪರ್ಸೆನಲ್ ಸೆಕ್ರೆಟರಿ ಮತ್ತು ಸೀನಿಯರ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.  ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವೇತನ ನಿಗದಿಪಡಿಸಲಾಗಿದೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ನೇಮಕಾತಿಯ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಸಂಸ್ಥೆಯ  ಅರ್ಜಿ ಶುಲ್ಕ ಇನ್ನಿತರ ಯಾವುದೇ ವಿಚಾರಣೆಗೆ ಅಧಿಕೃತ ವೆಬ್‌ತಾಣಕ್ಕೆ ಭೇಟಿ ನೀಡಿ. ಇಲ್ಲವೇ Mr.ನಿತಿನ್ ಭಾಸ್ಕರ್ ಅವರ ಈ ನಂಬರ್ ಗೆ ಕರೆ ಮಾಡಿ 9036151410 ಇಲ್ಲವೇ ಅವರ ಈ ಮೇಲೆ ಐಡಿ  nitin@mindparkour.in ಗೆ ಮೇಲ್ ಕಳುಹಿಸಿ , hrd@ksca.co.in ಗೂ ನಿಮ್ಮ ಮೇಲ್ ಕಾಫಿಯನ್ನು ಕಳುಹಿಸಿ. ಅಧಿಸೂಚನೆ ಓದಲು ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸಬೇಕಾದ ವಿಧಾನ: ಇಲಾಖೆಯ ಅಧಿಕೃತ ವೆಬ್ ತಾಣಕ್ಕೆ ಭೇಟಿ ನೀಡಿ ಉದ್ಯೋಗ ನೋಟಿಫಿಕೇಶನ್ ನಲ್ಲಿರುವ ಅಧಿಸೂಚನೆಯನ್ನು ಓದಿ ಅರ್ಜಿಯನ್ನು  ಡೌನ್ಲೋಡ್ ಮಾಡಿಕೊಂಡು. ಕೇಳಲಾಗಿರುವ ಮಾಹಿತಿಯನ್ನು ತುಂಬಿ. ಜೊತೆಗೆ  ಈ ಕೆಳಗೆ ನೀಡಲಾಗಿರುವ ಅಗತ್ಯ ದಾಖಲೆಗಳನ್ನು ಹೊಂದಿಸಿ, ನೀವು ಅರ್ಜಿ ಸಲ್ಲಿಸುತ್ತಿರುವ ಹುದ್ದೆಯನ್ನು ನಮೂದಿಸಿ  hrd@ksca.co.in ಗೆ ಜನವರಿ 12,2022ರ ಸಂಜೆ 5 ಗಂಟೆಯೊಳಗೆ ಮೇಲ್ ಕಳುಹಿಸಿ.
ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ - 2
ಎರಡು references
ಸರಕಾರದಿಂದ ಮಾನ್ಯ ಮಾಡಿರುವ  ಫೋಟೋ ಐಡಿ / ವಿಳಾಸ ಪುರಾವೆ (ಆಧಾರ್,ಪಾನ್ ಇತ್ಯಾದಿ)
ಶೈಕ್ಷಣಿಕ ಅರ್ಹತೆಯ ಪ್ರಮಾಣಪತ್ರಗಳು
ಕೆಲಸದ ಅನುಭವದ ಪ್ರಮಾಣಪತ್ರಗಳು(Work experience )
ಕೊನೆಯದಾಗಿ ನೀವು ಪಡೆದ ಸಂಬಳದ ಪ್ರಮಾಣಪತ್ರ ಸಲ್ಲಿಸಿ.

KFD FG Exam Result Announced: ಫಾರೆಸ್ಟ್‌ ಗಾರ್ಡ್‌ ಹುದ್ದೆ ಲಿಖಿತ ಪರೀಕ್ಷೆಯ ಫಲಿತಾಂಶ ಬಿಡುಗಡೆ

ಈ  ಭಾರತದ ಕ್ರಿಕೆಟ್‌ ನಿಯಂತ್ರಣ ಮಂಡಳಿ ಅಧೀನದಲ್ಲಿ ಬರುವ KSCA ಕರ್ನಾಟಕ ರಾಜ್ಯದಲ್ಲಿನ ಕ್ರಿಕೆಟ್‌‌ನ ಆಡಳಿತ ಮಂಡಳಿಯಾಗಿದೆ. 1933ರಲ್ಲಿ ಈ ಸಂಸ್ಥೆಯು ಸಂಸ್ಥಾಪಿಸಲ್ಪಟ್ಟಿತು. ಈ ಸಂಸ್ಥೆಯು ಚಿನ್ನಸ್ವಾಮಿ ಕ್ರೀಡಾಂಗಣದ ಸ್ವಾಮ್ಯತ್ವವನ್ನು ಹೊಂದಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಹಿಂದೆ ಮೈಸೂರು ಕ್ರಿಕೆಟ್‌ ಸಂಸ್ಥೆ ಎಂಬ ಹೆಸರಿನಿಂದ ಚಿರಪರಿಚಿತವಾಗಿತ್ತು.  1934ರಲ್ಲಿ ಭಾರತದ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಸದಸ್ಯತ್ವವನ್ನು ಗಳಿಸಿತು.

Follow Us:
Download App:
  • android
  • ios