Asianet Suvarna News Asianet Suvarna News

KFD FG Exam Result Announced: ಫಾರೆಸ್ಟ್‌ ಗಾರ್ಡ್‌ ಹುದ್ದೆ ಲಿಖಿತ ಪರೀಕ್ಷೆಯ ಫಲಿತಾಂಶ ಬಿಡುಗಡೆ

ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯು 339  ಅರಣ್ಯ ರಕ್ಷಕ  ಹುದ್ದೆಗಳ ನೇಮಕಾತಿಗೆ ನಡೆದ ಸರ್ಧಾತ್ಮಕ ಪರೀಕ್ಷೆಗಳ ಲಿಖಿತ ಪರೀಕ್ಷೆ ಫಲಿತಾಂಶವನ್ನು ಬಿಡುಗಡೆ ಮಾಡಿದೆ.

Karnataka Forest Department FG-Written Exam-Results announced check in official website gow
Author
Bengaluru, First Published Jan 6, 2022, 9:36 PM IST

ಬೆಂಗಳೂರು(ಜ.6): ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯು (Karnataka Forest Department) 339 ಅರಣ್ಯ ರಕ್ಷಕ (Forest Guard) ಹುದ್ದೆಗಳ ನೇಮಕಾತಿಗೆ ನಡೆದ ಸರ್ಧಾತ್ಮಕ ಪರೀಕ್ಷೆಗಳ ಲಿಖಿತ ಪರೀಕ್ಷೆ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಸದರಿ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಬರೆದ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್‌ https://www.recruitapp.in/ ಗೆ ಭೇಟಿ ನೀಡಿ, ಫಲಿತಾಂಶ ಪರಿಶೀಲಿಸಬಹುದು.  

ಫಲಿತಾಂಶ ಚೆಕ್ ಮಾಡಲು ಮೊದಲು ಕರ್ನಾಟಕ ಅರಣ್ಯ ಇಲಾಖೆ ವೆಬ್‌ಸೈಟ್‌ https://www.recruitapp.in ಗೆ ಭೇಟಿ ನೀಡಿ. ಬಳಿಕ 'ನೇಮಕಾತಿ' ಟ್ಯಾಬ್‌ ಕ್ಲಿಕ್ ಮಾಡಿ ತದನಂತರ 339 FG-Written Exam-Results' ಎಂದಿರುವ ಲಿಂಕ್‌ ಕ್ಲಿಕ್ ಮಾಡಿ ಓಪನ್‌ ಆಗುವ ಹೊಸ ಪೇಜ್‌ನಲ್ಲಿ ಅಪ್ಲಿಕೇಶನ್‌ ಐಡಿ, ಜನ್ಮ ದಿನಾಂಕ ಮಾಹಿತಿ, ಓಟಿಪಿ'ಗಳನ್ನು ನೀಡಿ.

ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾಗಬೇಕಾಗುತ್ತದೆ. ಸರಿಯಾದ ದಾಖಲೆಗಳನ್ನು ಸಬ್‌ಮಿಟ್‌ ಮಾಡಿದ ಅಭ್ಯರ್ಥಿಗಳನ್ನು ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ ಮೆರಿಟ್‌ ಆಧಾರದ ಮೇಲೆ ಅಂತಿಮ ಆಯ್ಕೆ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ.

ಹಾವೇರಿ ಕಾನೂನು ಸೇವಾ ಪ್ರಾಧಿಕಾರದಲ್ಲಿ ಆಡಳಿತ ಸಹಾಯಕ, ಬಾಗಲಕೋಟೆಯಲ್ಲಿ ಸಮುದಾಯ ಸಂಪನ್ಮೂಲ ವ್ಯಕ್ತಿ ಹುದ್ದೆಗೆ ಅರ್ಜಿ ಸಲ್ಲಿಸಿ

ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯು 339 ಅರಣ್ಯ ರಕ್ಷಕ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಲಿಖಿತ ಪರೀಕ್ಷೆಯನ್ನು  ದಿನಾಂಕ ಡಿಸೆಂಬರ್ 5, 2021 ರಂದು ರಾಜ್ಯಾದ್ಯಂತ 11 ವಲಯಗಳಲ್ಲಿ ನಡೆಸಿತ್ತು. ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಹಾಜರಾಗಿ ಅರ್ಹತೆ ಪಡೆದ ಅಭ್ಯರ್ಥಿಗಳು ಲಿಖಿತ ಪರೀಕ್ಷೆಗೆ ಹಾಜರಾಗಿದ್ದರು.  

ಡಿಸೆಂಬರ್ ಮೊದಲ ವಾರದಲ್ಲಿ ಹುದ್ದೆಗಳ ನೇಮಕಾತಿಗೆ ನಡೆದ ಸರ್ಧಾತ್ಮಕ ಪರೀಕ್ಷೆಗಳ ಸರಿಯುತ್ತರಗಳನ್ನು ಬಿಡುಗಡೆ ಮಾಡಿತ್ತು. ಪರೀಕ್ಷೆ ಬರೆದ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ ಸೈಟ್  https://kfdrecruitment.in/ ಅಥವಾ https://aranya.gov.in/ ಗೆ ಭೇಟಿ ನೀಡಿ ಸರಿ ಉತ್ತರವನ್ನು ನೋಡಿಕೊಳ್ಳಲು ಮನವಿ ಮಾಡಲಾಗಿತ್ತು. ಮಾತ್ರವಲ್ಲ ಯಾವುದಾದರು ಪ್ರಶ್ನೆಗಳಿಗೆ ಆಕ್ಷೇಪ ಇದ್ದಲ್ಲಿ. ಲಿಖಿತ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಮಾತ್ರ ನಿಗದಿತ ನಮೂನೆಯಲ್ಲಿ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ಮೇಲ್ ಮಾಡಲು ಹೇಳಿತ್ತು. ಮೇಲ್ ಮಾಡಲು ಡಿಸೆಂಬರ್ 13, 2021 ಕೊನೆಯ ದಿನವಾಗಿತ್ತು, ಇದೀಗ ಅಧಿಕೃತವಾಗಿ ಯಾರೆಲ್ಲ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ ಎಂದು ಇಲಾಖೆ ಲಿಸ್ಟ್ ಬಿಡುಗಡೆ ಮಾಡಿದೆ.

DHFWS Chikkamagaluru Recruitment 2022: ಚಿಕ್ಕಮಗಳೂರಿನಲ್ಲಿ ದಾದಿಯರ ಹುದ್ದೆಗೆ ಅರ್ಜಿ ಆಹ್ವಾನ

ಬಾಗಲಕೋಟೆ ನಗರಸಭೆಯಲ್ಲಿ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಹುದ್ದೆಗೆ ಅರ್ಜಿ ಆಹ್ವಾನ:  ಬಾಗಲಕೋಟೆ ನಗರಸಭೆಯು ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ (department of skill development entrepreneurship and livelihood) ದೀನದಯಾಳ ಅಂತ್ಯೋದಯ ಯೋಜನೆ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ಸಮುದಾಯ ಸಂಪನ್ಮೂಲ ವ್ಯಕ್ತಿಗಳ (Community Resource Person) ಹುದ್ದೆಗೆ ಗೌರಧನದ ಆಧಾರದ ಮೇಲೆ ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳಲು ಅರ್ಹ ಸ್ವ-ಸಹಾಯ ಸಂಘಗಳ ಸದಸ್ಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಜನವರಿ 10 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಒಟ್ಟು 2 ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಬಾಗಲಕೋಟೆ (Bagalkote) ನಗರಸಭೆ ವ್ಯಾಪ್ತಿಯ ಸ್ವ-ಸಹಾಯ ಸಂಘದಲ್ಲಿ ಕನಿಷ್ಠ ಮೂರು ವರ್ಷದಿಂದ ಸದಸ್ಯರಾಗಿದ್ದು, ಪ್ರದೇಶ ಮಟ್ಟದ ಒಕ್ಕೂಟದ ಸದಸ್ಯರಾಗಿರುವವರು ಅರ್ಜಿ ಸಲ್ಲಿಸಬಹುದು. 18 ರಿಂದ 45 ವರ್ಷದೊಳಗಿರುವವರು ಅರ್ಜಿ ಸಲ್ಲಿಸುವವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಬಾಗಲಕೋಟೆ ನಗರಸಭೆ ಕಾರ್ಯಾಲಯ ಸಂಪರ್ಕಿಸಲು ಕೋರಲಾಗಿದೆ. ಆಯ್ಕೆಯಾದವರಿಗೆ ಮಾಸಿಕ ಗೌರಧನ 8 ಸಾವಿರ, ಟಿಎ ಗರಿಷ್ಟ 2 ಸಾವಿರ ನೀಡಲಾಗುತ್ತದೆ. 

Follow Us:
Download App:
  • android
  • ios