Asianet Suvarna News Asianet Suvarna News

Karnataka Teachers Recruitment: 10 ದಿನದಲ್ಲಿ 15000 ಶಿಕ್ಷಕರ ನೇಮಕಾತಿಗೆ ನೋಟಿಫಿಕೇಶನ್ ಬಿಡುಗಡೆ

ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಎಲ್ಲವೂ ಮುಗಿದಿದ್ದು, ಇನ್ನು 10 ದಿನಗಳಲ್ಲಿ ನೋಟಿಫಿಕೇಶನ್ ಬಿಡಲಾಗುತ್ತದೆ ಎಂದು  ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಕಾರವಾರದಲ್ಲಿ ಹೇಳಿಕೆ ನೀಡಿದ್ದಾರೆ.

Karnataka Recruits 15000 Primary school Teachers soon says Education Minister B C nagesh gow
Author
Bengaluru, First Published Mar 12, 2022, 5:50 PM IST | Last Updated Mar 12, 2022, 8:30 PM IST

ಉತ್ತರಕನ್ನಡ(ಮಾ.12): ಶಿಕ್ಷಕರ ನೇಮಕಾತಿ (Teachers Recruitment) ಪ್ರಕ್ರಿಯೆ ಎಲ್ಲವೂ ಮುಗಿದಿದ್ದು, ಇನ್ನು 10 ದಿನಗಳಲ್ಲಿ ನೋಟಿಫಿಕೇಶನ್ ಬಿಡಲಾಗುತ್ತದೆ. ಏಜ್ ಲಿಮಿಟ್ ಬದಲಾವಣೆ ಸೇರಿದಂತೆ ಹಲವು ಕೆಲಸಗಳನ್ನು ನಡೆಸಲಾಗಿದೆ. ರಾಜ್ಯದಲ್ಲಿ ಸುಮಾರು 15000 ಶಿಕ್ಷಕರ ನೇಮಕಾತಿ ನಡೆಯುತ್ತದೆ. 5000 ಕಲ್ಯಾಣ ಕರ್ನಾಟಕ ಹಾಗೂ ಉಳಿದವು ರಾಜ್ಯದ ಇತರ ಭಾಗಕ್ಕೆ ನೇಮಕಾತಿಯಾಗಲಿದೆ ಎಂದು  ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವ ಬಿ.ಎನ್. ನಾಗೇಶ್ (Education Minister BC Nagesh) ಕಾರವಾರದಲ್ಲಿ ಹೇಳಿಕೆ ನೀಡಿದ್ದಾರೆ.

ಕರ್ನಾಟಕ ರಾಜ್ಯ ಪದವಿ ಪೂರ್ವ ಮಹಾವಿದ್ಯಾಲಯಗಳ ನೌಕರರ ಸಂಘ ಹಾಗೂ ಉತ್ತರ ಕನ್ನಡ ಜಿಲ್ಲೆ ಪಿಯು ಪ್ರಾಚಾರ್ಯರ ಸಂಘದ ಸಂಯುಕ್ತಾಶ್ರಯದಲ್ಲಿ ಕಾರವಾರದಲ್ಲಿ ಆಯೋಜಿಸಿದ್ದ 'ರಾಷ್ಟ್ರೀಯ ‌ಶಿಕ್ಷಣ ನೀತಿ-2020' ವಿಚಾರ ಸಂಕಿರಣ ಹಾಗೂ 'ಪದವಿ ಪೂರ್ವ ನೌಕರರ ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನ'ವನ್ನು ಉದ್ಘಾಟಿಸಿದ  ಬಳಿಕ ಈ ಹೇಳಿಕೆ ನೀಡಿದ್ದಾರೆ.

 

ಮುಂದಿನ ವರ್ಷ ರಾಜ್ಯದ ಸುಮಾರು 20ಸಾವಿರ ಶಾಲೆಗಳಲ್ಲಿ ಅರ್ಲಿ ಚೈಲ್ಡ್ ಎಜ್ಯುಕೇಶನ್ (ECE) ಪರಿಚಯಿಸಲಿದ್ದೇವೆ. 1-2 ವರ್ಷದ ಮಕ್ಕಳನ್ನು ಪ್ರೈಮರಿ ಸೆಕ್ಷನ್ ಹಾಗೂ 3ನೇ ವರ್ಷದ ಮಗುವಿನ ಅಭ್ಯಾಸವನ್ನು ಅಂಗನವಾಡಿಯಲ್ಲಿ ಮಾಡಲು ಸರಕಾರ ನಿರ್ಧರಿಸಿದೆ. ಅಗತ್ಯವಿರುವ ತರಬೇತಿ ನಿಧಾನಕ್ಕೆ ನೀಡುತ್ತಾ ಯೋಜನೆ ಪರಿಚಯಿಸುತ್ತೇವೆ ಎಂದಿದ್ದಾರೆ.

CBSE 10TH TERM 1 RESULT DECLARED: ಸಿಬಿಎಸ್‌ಇ 10ನೇ ತರಗತಿ ಟರ್ಮ್ 1ರ ಫಲಿತಾಂಶ ಪ್ರಕಟ

ಇನ್ನು ಇದೇ ವೇಳೆ ಮಾತನಾಡಿದ ನಾಗೇಶ್ ಅವರು, ರಾಷ್ಟ್ರೀಯ ಶಿಕ್ಷಣ ನೀತಿ ಸಂಬಂಧಿಸಿ 2013ರಲ್ಲಿ ತಂದಂತಹ ಬದಲಾವಣೆಯನ್ನು ಸರಿಪಡಿಸುವ ಕೆಲಸ‌ ನಡೆಯುತ್ತಿದೆ. ಮುಂದಿನ ವರ್ಷದ ಪಠ್ಯ ಪುಸ್ತಕಗಳಲ್ಲಿ ತಪ್ಪು ಮಾಹಿತಿ ತೆಗೆದು ಹಾಕಿ ಸರಿಯಾದ ಮಾಹಿತಿ ನೀಡಲಾಗುತ್ತದೆ. ಎನ್‌ಇಪಿಯಲ್ಲಿ ದೇಶ ಸ್ವಾಭಿಮಾನ ಹಾಗೂ ಸ್ವಾವಲಂಭಿಯಾಗುವ ಶಿಕ್ಷಣ ನೀಡಲಾಗುತ್ತದೆ. ಇತಿಹಾಸದಲ್ಲಿ ಯಾವುದು ಹೇಳಬೇಕು ಹಾಗೂ ಯಾವುದು ಹೇಳಬಾರದು ಅನ್ನೋ ಎಚ್ಚರಿಕೆ ವಹಿಸಲಾಗುತ್ತದೆ ಎಂದು ಹೇಳಿದ್ದಾರೆ.

 

ಹಿಜಾಬ್ ವಿವಾದ ಸಂಬಂಧಿಸಿ ಖಡಕ್ ಹೇಳಿಕೆ ನೀಡಿರುವ ಅವರು, ಹೈ ಕೋರ್ಟ್ ನೀಡಿದ ಆದೇಶದ ಪ್ರಕಾರ ಹಿಜಾಬ್ ಧರಿಸಲು ಅವಕಾಶವಿಲ್ಲ. ನ್ಯಾಯಾಲಯದ ಆದೇಶವನ್ನೇ ನಾವು ಪಾಲಿಸ್ತೇವೆ. ಪರೀಕ್ಷೆಯಲ್ಲಿ ಗೈರಾದವರಿಗೆ ಮತ್ತೆ ಅವಕಾಶ ನೀಡುವ ಪ್ರಶ್ನೆಯೇ ಇಲ್ಲ. ಹಿಜಾಬ್‌ಗೂ ಪರೀಕ್ಷೆಗೂ ಯಾವುದೇ ಸಂಬಂಧವಿಲ್ಲ. ಪರೀಕ್ಷೆ ಬರೆಯಬೇಕಂದ್ರೆ, ಪರೀಕ್ಷೆಗೆ ಹಾಜರಾಗಬೇಕು. ದೇಶದ ಅನೇಕ ಶಿಕ್ಷಣ ತಜ್ಞರು, ಕೋರ್ಟ್ ಹಾಗೂ ಸರಕಾರವೂ ಮನವಿ ಮಾಡಿದೆ. ಇದು ಒಳ್ಳೆಯ ಸಂಸ್ಕೃತಿಯಲ್ಲ, ಶಿಕ್ಷಣ ಎಲ್ಲರಿಗೂ ಮುಖ್ಯ.

ಬಾಲ್ಯವಿವಾಹಕ್ಕೆ ಒತ್ತಾಯಿಸಿ ಕೋಣೆಯಲ್ಲಿ ಕೂಡಿ ಹಾಕಿದ್ದ ಬಾಲಕಿ ಎಸ್ಕೇಪ್, SSLC ಪರೀಕ್ಷೆಗೆ ಹಾಜರ್! 

ಸುಮಾರು 86,000 ಮಕ್ಕಳಲ್ಲಿ ಹಿಜಾಬ್ ಮಣ್ಣು, ಮಸಿ ಅಂತಾ ಹೇಳ್ಕೊಂಡು ಶಾಲೆಗೆ ಬರದವರು 400-500 ಮಕ್ಕಳು ಮಾತ್ರ. ಆದರೆ, ಮುಸ್ಲಿಂ ಸಮುದಾಯ ಹೆಚ್ಚಿನ ಮಕ್ಕಳು ಶಿಕ್ಷಣಕ್ಕೆ ಆದ್ಯತೆ ನೀಡ್ತಿರೋದು ಖುಷಿಯ ವಿಚಾರ. ಈ ಘಟನೆಗಳ ಹಿಂದೆ ಸಂಘಟನೆಗಳು ಹಾಗೂ ಬೇರೆ ಬೇರೆ ವಿಚಾರವಾದಿಗಳಿದ್ದಾರೆ. ಪರೀಕ್ಷೆ ಬರೆಯಬೇಕಂದ್ರೆ ಸರಕಾರದ ನಿಯಮ ಪಾಲಿಸಬೇಕು ಎಂದು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

Latest Videos
Follow Us:
Download App:
  • android
  • ios