ನಾಳೆಯಿಂದ ಶಿಕ್ಷಕರ ನೇಮಕಾತಿ ಪರೀಕ್ಷೆ, 144 ಸೆಕ್ಷನ್ ಜಾರಿ

ರಾಜ್ಯದಲ್ಲಿ ಪರೀಕ್ಷಾ ಅಕ್ರಮ ಬಯಲಾದ ಬೆನ್ನಲ್ಲೇ  ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ಮೇಲೆ ಶಿಕ್ಷಣ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಪರೀಕ್ಷೆ ಮೇ. 21 ಮತ್ತು ಮೇ 22 ರಂದು ನಡೆಯಲಿದೆ.

karnataka-15000-teachers-recruitment exam-2022 will be held on may 21st and may 22nd  gow

ಬೆಂಗಳೂರು (ಮೇ.20): ರಾಜ್ಯ ಸರ್ಕಾರಿ ಶಾಲೆಗಳಲ್ಲಿನ (Government Schools) 6ರಿಂದ 8ನೇ ತರಗತಿಗಳಿಗೆ 15 ಸಾವಿರ ಪದವೀಧರ ಶಿಕ್ಷಕರ ನೇಮಕಾತಿಗೆ (Teacher Recruitment)   (Karnataka Teacher Recruitment 2022) ಪರೀಕ್ಷೆ ಮೇ. 21 ಮತ್ತು ಮೇ 22 ರಂದು ನಡೆಯಲಿದ್ದು,  ಎಲ್ಲಾ ಪರೀಕ್ಷಾ ಕೇಂದ್ರದಲ್ಲಿ ಭಿಗಿ ಭದ್ರತೆ ಕೈಗೊಳ್ಳಲಾಗಿದೆ. ಒಟ್ಟು 1 ಲಕ್ಷದ 6 ಸಾವಿರಕ್ಕೂ ಹೆಚ್ಚು ಪರೀಕ್ಷಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 

ಸಮಾಜ ವಿಜ್ಞಾನ, ಗಣಿತ, ಇಂಗ್ಲಿಷ್ ಮತ್ತು ಜೀವ ವಿಜ್ಞಾನ ಶಿಕ್ಷಕರ 15 ಸಾವಿರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು.  ಒಟ್ಟು 435 ಕೇಂದ್ರಗಳಲ್ಲಿ  ಶಿಕ್ಷಕರ ನೇಮಕಾತಿ ಪರೀಕ್ಷೆ ನಡೆಯಲಿದ್ದು, ಚಿಕ್ಕೋಡಿಯಲ್ಲಿ ಹೆಚ್ಚು ಕೇಂದ್ರಗಳು ಇರಲಿವೆ. ಪರೀಕ್ಷಾ ಕೇಂದ್ರಗಳಲ್ಲಿ ಎರಡು ಹಂತದಲ್ಲಿ ತಪಾಸಣೆ ನಡೆಯಲಿದೆ.  

KARNATAKA SSLC RESULTS 2022 ಅಡ್ಡಿಯಾಗದ ಅಂಗವೈಕಲ್ಯ , 3,762 ವಿದ್ಯಾರ್ಥಿಗಳ ಸಾಧನೆ!

ಇನ್ನು ಪರೀಕ್ಷೆ  ಬರೆಯುವ ಅಭ್ಯರ್ಥಿಗಳಿಗೆ ಕೆಲವು ನಿಯಮಗಳನ್ನು ಮಾಡಲಾಗಿದ್ದು, ಈ ಬಗ್ಗೆ ಮೇ 14ರಂದು ಪರೀಕ್ಷಾ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಪರೀಕ್ಷಾ ಕೇಂದ್ರಕ್ಕೆ ಒಂದು ಗಂಟೆ ಮೊದಲೇ ಹಾಜರಾಗಬೇಕು. ಯಾರಿಗೂ ಕೈಗಡಿಯಾರಕ್ಕೆ ಅವಕಾಶ ಇಲ್ಲ.  ಪರೀಕ್ಷಾ ಕೇಂದ್ರದೊಳಗೆ ಎಲೆಕ್ಟ್ರಾನಿಕ್‌ ವಸ್ತು ಒಯ್ಯುವಂತಿಲ್ಲ. ಮೊಬೈಲ್‌, ವಾಚ್‌, ಎಲೆಕ್ಟ್ರಾನಿಕ್‌ ಡಿವೈಸ್‌ಗೆ ಅವಕಾಶ ಇಲ್ಲ. ಪ್ರಶ್ನೆಪತ್ರಿಕೆ ಗೌಪ್ಯತೆ, ಪರೀಕ್ಷೆಗೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ. ಪರೀಕ್ಷಾ ಕೇಂದ್ರದಲ್ಲೇ ಗೋಡೆ ಗಡಿಯಾರ ಅಳವಡಿಸಲಾಗುವುದು ಜೊತೆಗೆ   ಸಿಸಿಟಿವಿ ಅಳವಡಿಕೆ ಕಡ್ಡಾಯವಾಗಿರಲಿದೆ. 

ಒಂದು ಕೊಠಡಿಯಲ್ಲಿ 20 ಮಂದಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶವಿದೆ.  ಮೆಟಲ್ ಡಿಟೆಕ್ಟರ್ ಬಳಕೆ ಬಗ್ಗೆಯೂ ತೀರ್ಮಾನ ಮಾಡಲಾಗಿದೆ. ಅಗತ್ಯವಿರುವ ಸೂಕ್ಷ್ಮ ಕೇಂದ್ರಗಳಲ್ಲಿ ಮೆಟಲ್ ಡಿಟೆಕ್ಟರ್ ಬಳಕೆ ಅವಕಾಶ ನೀಡಲಾಗಿದೆ.   ಪರೀಕ್ಷಾ ಸಂಬಂಧ ಮೂರು ಕಮಿಟಿಯನ್ನು  ರಚಿಸಲಾಗಿದೆ.

ಪರೀಕ್ಷಾ ಕೇಂದ್ರದ ಶಾಲೆಗಳ ಶಿಕ್ಷಕರನ್ನು ಅದೇ ಕೇಂದ್ರಕ್ಕೆ ನೇಮಿಸಿಲ್ಲ. ಪ್ರತಿ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು, ಸಿಇಓ, ಎಸ್ಪಿಗಳ ನೇತೃತ್ವದಲ್ಲಿ ಕಮಿಟಿ ಮಾಡಲಾಗಿದೆ. ಈ ಕಮಿಟಿ ಪರೀಕ್ಷಾ ಕೇಂದ್ರಗಳ ಮೇಲೆ ಹದ್ದಿನ ಕಣ್ಣಿಡಲಿದೆ.  144 ಸೆಕ್ಷನ್ ಪರೀಕ್ಷಾ ಕೇಂದ್ರದಲ್ಲಿ ಇರಲಿದೆ.

ಜೂನ್ ಮೂರನೇ ವಾರದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ

15 ಸಾವಿರ ಹುದ್ದೆಗಳಲ್ಲಿ 6,500 ಗಣಿತ ಶಿಕ್ಷಕರು, 5000 ಸಮಾಜ ವಿಜ್ಞಾನ ವಿಷಯ ಶಿಕ್ಷಕರು, 2000 ಜೀವ ವಿಜ್ಞಾನ ವಿಷಯ ಶಿಕ್ಷಕರು ಹಾಗೂ 1500 ಆಂಗ್ಲ ಭಾಷಾ ವಿಷಯ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಸಾಮಾನ್ಯ ಜ್ಞಾನ, ವಿಷಯ ಸಾಮರ್ಥ್ಯ, ಭಾಷಾ ಸಾಮರ್ಥ್ಯ ಎಂಬ ಮೂರು ಪ್ರಶ್ನೆ ಪತ್ರಿಕೆಗಳಿದ್ದು, 1 ಮತ್ತು 2ನೇ ಪತ್ರಿಕೆಗೆ ತಲಾ 150 ಅಂಕ ಹಾಗೂ 3ನೇ ಪತ್ರಿಕೆಗೆ 100 ಅಂಕ ಸೇರಿದಂತೆ ಒಟ್ಟಾರೆ 400 ಅಂಕಗಳಿಗೆ ಅಭ್ಯರ್ಥಿಗಳು ಪರೀಕ್ಷೆ ಬರೆಯಬೇಕು.

ಪತ್ರಿಕೆ-1ರಲ್ಲಿ ಕನಿಷ್ಠ ಅಂಕಗಳನ್ನು ಗಳಿಸಬೇಕೆಂಬ ಮಾನದಂಡ ವಿಧಿಸಿಲ್ಲ. ಆದರೆ, ಮೆರಿಟ್‌ಗೆ ಪರಿಗಣಿಸಲಾಗುತ್ತದೆ. 2ನೇ ಪತ್ರಿಕೆಯಲ್ಲಿ ಕನಿಷ್ಠ ಶೇ.45, 3ನೇ ಪತ್ರಿಕೆಯಲ್ಲಿ ಶೇ.50ರಷ್ಟು ಅಂಕಗಳಿಸುವುದು ಕಡ್ಡಾಯ. ಈ ಎರಡೂ ಪತ್ರಿಕೆಗಳಲ್ಲಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕನಿಷ್ಠ ಅರ್ಹತಾ ಅಂಕಗಳನ್ನು ಶೇ.5ರಷ್ಟುಇಳಿಸಲಾಗಿದೆ. ತೃತೀಯ ಲಿಂಗಿಗಳಿಗೆ ಪ್ರತಿ ಪ್ರವರ್ಗದಲ್ಲಿ ಶೇ.1 ಹುದ್ದೆಗಳ ಮೀಸಲಾತಿಯನ್ನು ನೀಡಲಾಗಿದೆ ಎಂದು ಹೇಳಿದರು.

ಮೆರಿಟ್‌ ಪಟ್ಟಿ ಸಿದ್ಧಪಡಿಸುವಾಗ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ(Competitive Exam) ಪಡೆದ ಅಂಕಗಳಲ್ಲಿ ಶೇ.0.50, ಟಿಇಟಿ ಶೇ.0.20, ಪದವಿ ಅಂಕ ಶೇ.0.20 ಶಿಕ್ಷಕರ ಶಿಕ್ಷಣದ ಕೋರ್ಸ್‌ನಲ್ಲಿ ಪಡೆದ ಶೇ.0.10 ಅಂಕಗಳನ್ನು ಪರಿಗಣಿಸಲಾಗುತ್ತದೆ.

Latest Videos
Follow Us:
Download App:
  • android
  • ios