Asianet Suvarna News Asianet Suvarna News

Karnataka SSLC Results 2022 ಅಡ್ಡಿಯಾಗದ ಅಂಗವೈಕಲ್ಯ , 3,762 ವಿದ್ಯಾರ್ಥಿಗಳ ಸಾಧನೆ!

ರಾಜ್ಯದ 3,762 ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಅಂಗವೈಕಲ್ಯ ಅಡ್ಡಿಯಾಗಿಲ್ಲ. ಅವರು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅದರಲ್ಲೂ ಅವರಲ್ಲಿ ಹತ್ತು ಮಂದಿ 625 ರಲ್ಲಿ 611 ರಿಂದ 622 ಅಂಕಗಳನ್ನು ಗಳಿಸಿದ್ದಾರೆ.

Karnataka SSLC results Disability not hurdle for 3762 students gow
Author
Bengaluru, First Published May 20, 2022, 4:35 PM IST

ಬೆಂಗಳೂರು (ಮೇ.20): ರಾಜ್ಯದ 3,762 ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಅಂಗವೈಕಲ್ಯ ಅಡ್ಡಿಯಾಗಿಲ್ಲ. ಅವರು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅದರಲ್ಲೂ ಅವರಲ್ಲಿ ಹತ್ತು ಮಂದಿ 625 ರಲ್ಲಿ 611 ರಿಂದ 622 ಅಂಕಗಳನ್ನು ಗಳಿಸಿದ್ದಾರೆ. 

ಬೆಂಗಳೂರು ದಕ್ಷಿಣ ಹೊನ್ನಗನಹಟ್ಟಿಯ ಕರ್ನಾಟಕ ಪಬ್ಲಿಕ್ ಶಾಲೆಯ ದಿವ್ಯಾಂಗ ವಿದ್ಯಾರ್ಥಿ ಡಿ.ಸಿ. ನೂತನ್ ಪೂಜಾರ್ 625 ಅಂಕಗಳ ಪೈಕಿ 613 ಅಂಕ ಗಳಿಸಿದ್ದಾನೆ. ಈತ ಟಾಪ್ 10 ದಿವ್ಯಾಂಗ ವಿದ್ಯಾರ್ಥಿಗಳಲ್ಲಿ ಒಬ್ಬನಾಗಿದ್ದಾನೆ. ನಾಗರಿಕ ಸೇವಾ ಪರೀಕ್ಷೆ ತೆಗೆದುಕೊಂಡು ಐಐಎಸ್ ಅಧಿಕಾರಿಯಾಗಬೇಕೆಂಬುದು ಈತನ ಗುರಿಯಾಗಿದೆ. ಅದಕ್ಕಾಗಿ ಪಿಯುಸಿಯಲ್ಲಿ ಕಲಾ ವಿಷಯ ತೆಗೆದುಕೊಳ್ಳಲು ಯೋಜಿಸಿದ್ದಾನೆ.

ನಮ್ಮ ಅಂಗವೈಕಲ್ಯದ ಬಗ್ಗೆ ದೂಷಿಸುವ ಬದಲು ಉತ್ತಮ ಪ್ರಯತ್ನ, ಶ್ರಮದಿಂದ ಯಶಸ್ಸು ಗಳಿಸಬಹುದು ಎಂದು ನೂತನ್ ಹೇಳಿದ್ದಾರೆ. ಕನ್ನಡ ಪ್ರೊಫೆಸರ್ ಡಾ. ಚಿತ್ತಯ್ಯ ಪೂಜಾರ್  ಮತ್ತು ಎ.ಜಿ ಶ್ರೀಲಕ್ಷ್ಮಿ ಅವರ ಮಗನಾಗಿರುವ ನೂತನ್ ಹುಟ್ಟಿನಿಂದಲೇ ದಿವ್ಯಾಂಗತೆ ಇದ್ದರೂ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದಾನೆ. ಪರೀಕ್ಷೆ ತಯಾರಿಗಾಗಿ ಆತ ಯಾವ ರೀತಿ ಯೂ ಟ್ಯೂಬ್ ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡಿದ್ದಾಗಿ ಪ್ರಿನ್ಸಿಪಾಲ್ ಮೃತ್ಯುಂಜಯ ವಿವರಿಸಿದರು.

15 ತಿಂಗಳಾದ್ರೂ ಫಲಿತಾಂಶವಿಲ್ಲ, ವಯಸ್ಸು ಮೀರುವ ಆತಂಕದಲ್ಲಿ ಕೆಎಎಸ್ ಆಕಾಂಕ್ಷಿಗಳು!

ಜೂನ್ 27 ರಿಂದ ಪೂರಕ ಪರೀಕ್ಷೆ ಆರಂಭ: 2021-22ನೇ ಸಾಲಿನ ಎಸ್​ಎಸ್‌ಎಲ್​ಸಿ ಪರೀಕ್ಷೆ  ಫಲಿತಾಂಶ (karnataka sslc result 2022) ಪ್ರಕಟವಾಗಿದೆ. ಶೇಕಡಾವಾರು 85.63 ಫಲಿತಾಂಶ ಬಂದಿದೆ. ಇದು ಕಳೆದ 10 ವರ್ಷಗಳಲ್ಲಿ ದಾಖಲೆಯ ಫಲಿತಾಂಶವಾಗಿದೆ. ವಿಶೇಷವೆಂದರೆ ಈ ಬಾರಿ 145 ಮಂದಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. 

 

ಇದರ ನಡುವೆಯೇ ಅನುತ್ತೀರ್ಣರಾದವರಿಗೆ, ಮೊದಲ ಬಾರಿ ಪರೀಕ್ಷೆ ಬರೆಯಲು ಸಾಧ್ಯವಾಗದೇ ಇದ್ದವರರಿಗೆ  ಜೂ. 27 ರಿಂದ ಜುಲೈ 4ರ ತನಕ ಪೂರಕ ಪರೀಕ್ಷೆ  ನಡೆಯಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ  ಬಿ.ಸಿ. ನಾಗೇಶ್ (Minister of Primary and SecondEducation BC Nagesh) ಮಾಹಿತಿ ನೀಡಿದ್ದಾರೆ.  ಈ ಬಗ್ಗೆ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಪೂರಕ ಪರೀಕ್ಷೆಗೆ ನೋಂದಣಿ ಪ್ರಕ್ರಿಯೆ ಮೇ.20 ರಿಂದ ಮೇ 30ರವರೆಗೆ ಸಮಯಾವಕಾಶ ಇರಲಿದೆ. ನಂತರ ಪರೀಕ್ಷೆ ನಡೆಯಲಿದೆ.

ಮರುಮೌಲ್ಯಮಾಪನ ಅರ್ಜಿ ಸಲ್ಲಿಸುವುದು ಹೇಗೆ? (How to apply for revaluation): ಕೆಎಸ್‌ಇಇಬಿ (Karnataka Secondary Education Examination Board) ಪ್ರಕಟಿಸಿರುವ ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶಗಳಿಂದ ತೃಪ್ತರಾಗದ ವಿದ್ಯಾರ್ಥಿಗಳು ಮರುಮೌಲ್ಯಮಾಪನ ಅಥವಾ ಅದರ ಪರಿಶೀಲನೆಗೆ ಅರ್ಜಿ ಸಲ್ಲಿಸಬಹುದು. ಮಂಡಳಿಯು ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಮರು ಮೌಲ್ಯಮಾಪನ ಮಾಡಲು ಶಿಕ್ಷಕರನ್ನು ನಿಯೋಜಿಸುತ್ತದೆ. ವಿದ್ಯಾರ್ಥಿಗಳು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬೇಕು ಮತ್ತು ಅವರು ಪರಿಶೀಲನೆಗೆ ವಿನಂತಿಸಲು ಬಯಸುವ ವಿಷಯಗಳನ್ನು ಆಯ್ಕೆ ಮಾಡಬೇಕಾಗುತ್ತದೆ. ಅವರು ಅನ್ವಯವಾಗುವ ಶುಲ್ಕವನ್ನು ಸಹ ಪಾವತಿಸಬೇಕು. ಹಾಗೆ ಮಾಡಲು ಅವರು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು:

1. KSEEB ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ - sslc.karnataka.gov.in. 

2. ವೆಬ್‌ಸೈಟ್‌ನಲ್ಲಿ ಹೋಮ್‌ ಪೇಜ್‌ನಲ್ಲಿ ಲೇಟೆಸ್ಟ್‌ ನ್ಯೂಸ್‌ ಎಂಬ ಆಪ್ಷನ್‌ ಕ್ಲಿಕ್‌ ಮಾಡಿ

3. Tap to Apply for SSLC Result 2022 Scrutiny ಎಂಬ ಆಪ್ಷನ್‌ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್‌ ಮಾಡಿ. 

4. ವಿದ್ಯಾರ್ಥಿಯ ಮಾಹಿತಿಯನ್ನು ನಮೂದಿಸಿ ಮತ್ತು ಮರುಮೌಲ್ಯಮಾಪನ ಮಾಡಲು ಬಯಸುವ ಉತ್ತರ ಪತ್ರಿಕೆಗಳನ್ನು (ವಿಷಯಗಳನ್ನು) ಸೆಲೆಕ್ಟ್‌ ಮಾಡಿ. 

5. ಪ್ರತಿ ವಿಷಯಗಳಿಗೂ ಮರುಮೌಲ್ಯಮಾಪನಕ್ಕೆ ಇರುವ ಫೀಸನ್ನು ಆನ್‌ಲೈನ್‌ ಮುಖಾಂತರ ಕಟ್ಟಿ. 

6. ರಶೀದಿಯನ್ನು ಸೇವ್‌ ಮಾಡಿಕೊಳ್ಳಿ, ಇದು ಮುಂದಿನ ದಿನಗಳಲ್ಲಿ ರೆಫರೆನ್ಸ್‌ಗೆ ಬೇಕಾಗಲಿದೆ. 

 

Follow Us:
Download App:
  • android
  • ios