Asianet Suvarna News Asianet Suvarna News

ನೌಕಾಪಡೆಯಿಂದ 2500 ನಾವಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತೀಯ ನೌಕಾ ಪಡೆಯು 2500 ನಾವಿಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಮೇ 5ರೊಳಗೆ ಅರ್ಜಿ ಸಲ್ಲಿಸಬಹುದು. ಭಾರತೀಯ ನೌಕಾಪಡೆಯಲ್ಲಿ ನಾವಿಕರಾಗಿ ಕೆಲಸ ಮಾಡಲು ಇದೊಂದು ಉತ್ತಮ ಅವಕಾಶವಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

Indian Navy recruiting its sailor posts and check details
Author
Bengaluru, First Published Apr 30, 2021, 5:45 PM IST

ಭಾರತೀಯ ನೌಕಾಪಡೆಯಲ್ಲಿ ಕೆಲಸ ಮಾಡುವ ಆಸೆ ಇದ್ಯಾ? ಅದರಲ್ಲೂ ಹಡಗಿನ ಪೈಲಟ್ ಆಗಬೇಕು ಅಂತ ಏನಾದ್ರೂ ಕನಸು ಕಾಣ್ತಿದ್ದೀರಾ. ಅಂಥವರಿಗೀಗ ಒಂದು ಸುವರ್ಣ ಅವಕಾಶವೊಂದು ಹುಡುಕಿಕೊಂಡು ಬಂದಿದೆ. ಭಾರತೀಯ ನೌಕಾಸೇನೆಯು ಬರೋಬ್ಬರೀ ೨೫೦೦ ನಾವಿಕ ಹುದ್ದೆಗಳಿಗೆ ಅರ್ಜಿಗಳನ್ನ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಮೇ ೫ ಕೊನೇ ದಿನವಾಗಿದ್ದು, ಭಾರತೀಯ ನೌಕಾಸೇನೆಯ ಅಧಿಕೃತ ವೆಬ್ ಸೈಟ್ joinindiannavy.gov.in.ನಲ್ಲಿ ಅರ್ಜಿ ಸಲ್ಲಿಸಬಹುದು.

ರಾಜ್ಯದ 509 ಸೇರಿ ಒಟ್ಟು 5237 ಖಾಲಿ ಹುದ್ದೆಗಳಿಗೆ SBI ನೇಮಕಾತಿ, ಅಪ್ಲೈ ಮಾಡಿ

ಆಗಸ್ಟ್ ೨೦೨೧ರ ಬ್ಯಾಚ್‌ನಲ್ಲಿ ಖಾಲಿ ಇರುವ ೫೦೦ ಹಾಗೂ ೨೦೦೦ ಆರ್ಟಿಫೈರ್ ಅಪ್ರೆಂಟಿಸ್‌ಸ (ಎಎ) ಮತ್ತು ಸೀನಿಯರ್ ಸೆಕೆಂಡರಿ ರಿಕ್ರೂಟ್ಸ್ (ಎಸ್‌ಎಸ್‌ಆರ್) ಗೆ ನಾವಿಕರಾಗಿ ಸೇರ್ಪಡೆಯಾಗಲು ಬಯಸುವ ಅವಿವಾಹಿತ ಪುರುಷ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆರ್ಟಿಫೈರ್ ಅಪ್ರೆಂಟಿಸ್ ಆಗಿ ಚಾಲಿತ ಯಂತ್ರೋಪಕರಣಗಳು, ಡೀಸೆಲ್ ಮತ್ತು ಅನಿಲ ಟರ್ಬೈನ್ಗಳು, ಮಾರ್ಗದರ್ಶಿ ಕ್ಷಿಪಣಿಗಳು ಮತ್ತು ಇತರ ಸ್ವಯಂಚಾಲಿತವಾಗಿ ನಿಯಂತ್ರಿತ ಆಯುಧಗಳು, ಸಂವೇದಕಗಳು ಏವಿಯಾನಿಕ್ ಉಪಕರಣಗಳು, ಕಂಪ್ಯೂಟರ್ಗಳು ಮತ್ತು ಹೆಚ್ಚು ಸುಧಾರಿತ ರೇಡಿಯೋ ಮತ್ತು ವಿದ್ಯುತ್ ಶಕ್ತಿ ವ್ಯವಸ್ಥೆಗಳಲ್ಲಿ ಕೆಲಸ ಮಾಡಬೇಕು. ಆಯ್ಕೆಯಾದ ಅಭ್ಯರ್ಥಿಗಳು ಐಎನ್‌ಎಸ್ ಚಿಲ್ಕಾದಲ್ಲಿ ಒಂಬತ್ತು ವಾರಗಳ ಕಾಲ ತರಬೇತಿ ಪಡೆಯಬೇಕು.  ನಂತರ ವಿವಿಧ ನೌಕಾ ತರಬೇತಿ ಸಂಸ್ಥೆಗಳಲ್ಲಿ ನಿಗದಿಪಡಿಸಿದ ಹುದ್ದೆಗೆ ನಿಯೋಜಿಸಲಾಗುತ್ತದೆ.

ಎಸ್‌ಎಸ್‌ಆರ್‌ನ ಕೆಲಸವು ರಾಡಾರ್‌ಗಳು, ಸೋನಾರ್‌ಗಳು ಅಥವಾ ಸಂವಹನ ಅಥವಾ ಕ್ಷಿಪಣಿಗಳು, ಬಂದೂಕುಗಳು ಅಥವಾ ರಾಕೆಟ್‌ಗಳಂತಹ ಶಸ್ತ್ರಾಸ್ತ್ರಗಳ ಗುಂಡಿನಂತಹ ವಿವಿಧ ಸಾಧನಗಳ ಕಾರ್ಯಾಚರಣೆ ನಡೆಸುವುದು. ಆಯ್ಕೆಯಾದ ಅಭ್ಯರ್ಥಿಗಳು ಐಎನ್‌ಎಸ್ ಚಿಲ್ಕಾದಲ್ಲಿ 22 ವಾರಗಳ ಬೇಸಿಕ್ ತರಬೇತಿ‌ಪಡೆಯಬೇಕು. ಬಳಿಕ ವಿವಿಧ ನೌಕಾ ತರಬೇತಿ ಸಂಸ್ಥೆಗಳಲ್ಲಿ ನಿಗದಿಪಡಿಸಿದ ಕಡೆ ನಿಯೋಜಿಸಲಾಗುತ್ತದೆ.

Indian Navy recruiting its sailor posts and check details

ಗಣಿತ ಮತ್ತು ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಕಂಪ್ಯೂಟರ್ ವಿಜ್ಞಾನ- ಇತ್ಯಾದಿ ಯಾವುದೇ ವಿಷಯಗಳೊಂದಿಗೆ ಒಟ್ಟು 60% ಅಥವಾ ಹೆಚ್ಚಿನ ಅಂಕಗಳೊಂದಿಗೆ 10 + 2 ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಅಭ್ಯರ್ಥಿಯ ವಯಸ್ಸು 17 ರಿಂದ 20 ವರ್ಷಗಳೊಳಗೆ ಇರಬೇಕು.

ದಕ್ಷಿಣ ರೈಲ್ವೆಯಲ್ಲಿ 191 ಪ್ಯಾರಾ ಮೆಡಿಕಲ್ ಹುದ್ದೆ ಖಾಲಿ, ಅಪ್ಲೈ ಮಾಡಿ

ಇರುವ ಹುದ್ದೆಗಳಿಗೆ ಯುಪಿಎಸ್‌ಸಿಯಿಂದ ನೇಮಕಾತಿ
ಲೋಕಸೇವಾ ಆಯೋಗವು 7ನೇ ಕೇಂದ್ರ ವೇತನ ಆಯೋಗದ ಪ್ರಮಾಣದಲ್ಲಿ 350ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿಗಳನ್ನು ಯುಪಿಎಸ್‌ಸಿ ಆಹ್ವಾನಿಸಿದೆ. ಆನ್‌ಲೈನ್ ನೇಮಕಾತಿ ಅರ್ಜಿಗಳನ್ನು (ಒಆರ್‌ಎ), ಯುಪಿಎಸ್‌ಸಿಯ ಅಧಿಕೃತ ವೆಬ್‌ಸೈಟ್ http: /twww.upsconline.nic.in ಮೂಲಕ 2021 ಮೇ 13 ರೊಳಗೆ ಆಹ್ವಾನಿಸಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ನೇರ ನೇಮಕಾತಿಗಾಗಿ ಆಸಕ್ತ ಅಭ್ಯರ್ಥಿಗಳು ಮೇ ೧೩ರೊಳಗೆ ಅರ್ಜಿ ಸಲ್ಲಿಸಬಹುದು.

ದೆಹಲಿಯ ಎನ್‌ಸಿಟಿ ಸರ್ಕಾರದ ಶಿಕ್ಷಣ ಇಲಾಖೆ, ಶಿಕ್ಷಣ ನಿರ್ದೇಶನಾಲಯದಲ್ಲಿ ಪ್ರಾಂಶುಪಾಲರ ಹುದ್ದೆಗಳಿಗೆ 208 ಪುರುಷರು ಮತ್ತು 155 ಸ್ತ್ರೀಯರು ಸೇರಿದಂತೆ ಒಟ್ಟು 363 ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಬಹುದು. ಇದರಲ್ಲಿ ಎಸ್‌ಸಿ- 57 (31 ಪುರುಷ ಮತ್ತು 26 ಮಹಿಳೆ), ಎಸ್‌ಟಿ -26 (13 ಪುರುಷ ಮತ್ತು 13 ಮಹಿಳೆ), ಒಬಿಸಿ- 106 (65 ಪುರುಷ ಮತ್ತು 41 ಮಹಿಳೆ), ಇಡಬ್ಲ್ಯೂಎಸ್ -34 (18 ಪುರುಷ ಮತ್ತು 16 ಮಹಿಳೆ), ಯುಆರ್- 140 (81 ಪುರುಷ ಮತ್ತು 59 ಮಹಿಳೆ)] [ಪಿಹೆಚ್ - 15 (8 ಪುರುಷ ಮತ್ತು 7 ಮಹಿಳೆ)] ಹುದ್ದೆಗಳನ್ನ ಭರ್ತಿ ಮಾಡಿಕೊಳ್ಳಲಾಗುವುದು.

ನೇಮಕಾತಿ ನಂತರ ಅಭ್ಯರ್ಥಿಗಳಿಗೆ 7ನೇ ಕೇಂದ್ರ ವೇತನ ಆಯೋಗದ ಪ್ರಕಾರ ಪೇ ಮ್ಯಾಟ್ರಿಕ್ಸ್‌ನಲ್ಲಿ ಲೆವೆಲ್ -12 ರಡಿ ವೇತನ ಪಾವತಿಸಲಾಗುತ್ತದೆ. ಲಿಖಿತ ಪರೀಕ್ಷೆ / ಸಂದರ್ಶನದಲ್ಲಿ ಅಭ್ಯರ್ಥಿಗಳ ಸಾಧನೆಯ ಆಧಾರದ ಮೇಲೆ ಅವರನ್ನಯ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ. ಅಭ್ಯರ್ತಿಗಳು ಅರ್ಜಿ ಸಲ್ಲಿಸಲು http://www.upsconIirwnic.in ಗೆ ಭೇಟಿ ನೀಡಬಹುದು.

ಐಡಿಬಿಐ ಬ್ಯಾಂಕಿನಲ್ಲಿ ಆಫೀಸರ್ ಹುದ್ದೆ, ವಾರ್ಷಿಕ 60 ಲಕ್ಷ ರೂ.ವರೆಗೂ ಪ್ಯಾಕೇಜ್

Follow Us:
Download App:
  • android
  • ios