IIAP Recruitment 2022: ಆಸ್ಟ್ರೋಫಿಸಿಕ್ಸ್ ಸಂಸ್ಥೆಯಲ್ಲಿ ಟ್ರೈನಿ ಹುದ್ದೆಗಳಿಗೆ ನೇಮಕಾತಿ
ಬೆಂಗಳೂರಿನಲ್ಲಿ ಇರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಸಂಸ್ಥೆಯಲ್ಲಿ ವಿವಿಧ ವಿಭಾಗಗಳಲ್ಲಿ ಹುದ್ದೆಗಳಿದ್ದು, ಐಐಎಪಿ ವತಿಯಿಂದ ಇವುಗಳಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 16ರಂದು ಕೊನೆಯ ದಿನವಾಗಿದೆ.
ಬೆಂಗಳೂರು (ನ.24): ಬೆಂಗಳೂರಿನಲ್ಲಿ ಇರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (ಐಐಎಪಿ) ಸಂಸ್ಥೆಯಲ್ಲಿ ವಿವಿಧ ವಿಭಾಗಗಳಲ್ಲಿ ಹುದ್ದೆಗಳಿದ್ದು, ಐಐಎಪಿ ವತಿಯಿಂದ ಇವುಗಳಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 16ರಂದು ಕೊನೆಯ ದಿನವಾಗಿದೆ. ಅಧಿಸೂಚನೆಯಲ್ಲಿ ನೀಡಲಾಗಿರುವ ನೇಮಕಾತಿ ವಿವರಗಳಾದ ಆಯ್ಕೆ ಪ್ರಕ್ರಿಯೆ, ಬೇಕಾದ ದಾಖಲೆಗಳ ವಿವರ, ವೇತನ ಶ್ರೇಣಿ ಹೇಗಿದೆ? ವಯೋಮಿತಿ ಹಾಗೂ ವಿದ್ಯಾರ್ಹತೆ ಸಹಿತ ಹಲವು ವಿವರಗಳನ್ನು ನೀಡಲಾಗಿದೆ. ಹೆಚ್ಚಿನ ಮಾಹಿತಿಗೆ ಇಲಾಖೆಯ ಅಧಿಕೃತ ವೆಬ್‌ತಾಣ https://www.iiap.res.in/ ಗೆ ಭೇಟಿ ನೀಡಲು ಕೋರಲಾಗಿದೆ.
ಐಐಎಪಿ ಏನೇನು ಹುದ್ದೆ?: ಅಧಿಸೂಚನೆಯಲ್ಲಿ ನೀಡಲಾಗಿರುವ ಮಾಹಿತಿ ಅನ್ವಯ ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್, ಇನ್‌ಸ್ಟ್ರುಮೆಂಟೇಶನ್ ಎಂಜಿನಿಯರಿಂಗ್‌ನಲ್ಲಿ ಬಿ.ಇ ಅಥವಾ ಬಿ.ಟೆಲ್ ಪದವಿ ಪಡೆದವರಿಗೆ ಸಂಬಂಧಿಸಿದ ಹುದ್ದೆಗಳಾಗಿವೆ. ವಯೋಮಿತಿ. ಐಐಎಪಿ ಮಾನದಂಡದ ಪ್ರಕಾರ ಇರಬೇಕಿದೆ. ಮೆರಿಟ್ ಮೂಲಕ ಅಭ್ಯರ್ಥಿಯ ಆಯ್ಕೆ ನಡೆಯಲಿದೆ. ಅರ್ಜಿಯನ್ನು ಆಫ್‌ಲೈನ್‌ನಲ್ಲಿ ಕಳುಹಿಸಬಹುದಾಗಿದೆ.
ದಾಖಲೆಗಳು ಏನೇನು ಬೇಕು: ಅಭ್ಯರ್ಥಿಯು ಯಾವುದಾದರೂ ಗುರುತಿನ ಚೀಟಿ, ವಿದ್ಯಾರ್ಹತೆಯ ಪ್ರಮಾಣ ಪತ್ರ/ಅಂಕಪಟ್ಟಿ, ಇತರೆ ಮುಖ್ಯ ದಾಖಲೆಗಳನ್ನು (ಇದ್ದರೆ ಮಾತ್ರ) ನಕಲು ಪ್ರತಿಗಳಾಗಿ ಸಲ್ಲಿಸಬೇಕು.
*ಅರ್ಜಿ ಸಲ್ಲಿಕೆಗೆ ಡಿಸೆಂಬರ್ 16ರಂದು ಕೊನೆಯ ದಿನ
* ಹೆಚ್ಚಿನ ಮಾಹಿತಿಗಾಗಿ https://www.iiap.res.in/
ವೇತನ ವಿವರ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 30 ಸಾವಿರ ರೂ ನಿಂದ 3 ಲಕ್ಷ ರೂ ವರೆಗೆ ವೇತನ ದೊರೆಯಲಿದೆ.
ಕೆಲಸದ ಅನುಭವ: : ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಸಂಬಂಧಿಸಿದ ವಿಭಾಗದಲ್ಲಿ 1 ರಿಂದ 3 ವರ್ಷಗಳವರೆಗೆ ಅನುಭವ ಹೊಂದಿರಬೇಕು.
POWER GRID RECRUITMENT 2022: ರಾಜ್ಯ ಪವರ್‌ಗ್ರಿಡ್ ಕಾರ್ಪೊರೇಷನ್‌ನಿಂದ ನೇಮಕಾತಿ ಪ್ರಕಟಣೆ
ಆಯ್ಕೆ ಪ್ರಕ್ರಿಯೆ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ/ವೈಯಕ್ತಿಕ ಸಂದರ್ಶನ/ವೈದ್ಯಕೀಯ ಪರೀಕ್ಷೆ/ವಾಕಿನ್ ಸಂದರ್ಶನದ ಮೂಲಕ ಆಯ್ಕೆ ಮಾಡಿದ ನಂತರ ಅವರನ್ನು IIA ನಲ್ಲಿ ಇಂಜಿನಿಯರ್ ಟ್ರೈನಿಯಾಗಿ ಇರಿಸಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರಿನಲ್ಲಿ ಕೆಲಸ ಮಾಡಬೇಕಾಗುತ್ತದೆ.
ಮಂಗಳೂರು: ಕರಾವಳಿಯಲ್ಲಿ ಸೇನಾ ಪೂರ್ವ ಕೇಂದ್ರದ ಮೊದಲ ತರಬೇತಿ ಆರಂಭ
ಸದಸ್ಯರ ನೇಮಕಾತಿಗೆ ಅರ್ಜಿ ಆಹ್ವಾನ
ಕೊಪ್ಪಳ:ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಹಾಗೂ ಬಾಲನ್ಯಾಯ ಮಂಡಳಿಗಳಿಗೆ ಪರಿಷ್ಕೃತ ಕಾಯ್ದೆ ಹಾಗೂ ನಿಯಮಗಳನ್ವಯ ಅಧ್ಯಕ್ಷರು/ಸದಸ್ಯರನ್ನು ಮತ್ತು ಆಯ್ಕೆ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಬಾಲನ್ಯಾಯ(ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ- 2015 ಹಾಗೂ ಮಾದರಿ ನಿಯಮಗಳು-2016ನ್ನು ಪರಿಷ್ಕರಿಸಿ ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ- 2021 ಹಾಗೂ ಮಾದರಿ ನಿಯಮಗಳು- 2022 ಜಾರಿಗೊಳಿಸಿರುವ ಹಿನ್ನೆಲೆ ಪರಿಷ್ಕೃತ ಕಾಯ್ದೆ ಹಾಗೂ ಮಾದರಿ ನಿಯಮಗಳನ್ವಯ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
ಅಪೂರ್ಣ ಅರ್ಜಿಗಳು ಅಥವಾ ನಿಗದಿತ ದಿನಾಂಕದ ನಂತರ ಸ್ವೀಕೃತವಾದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ನಿರ್ದೇಶಕರು, ಮಕ್ಕಳ ರಕ್ಷಣಾ ನಿರ್ದೇಶನಾಲಯ ಮತ್ತು ಸದಸ್ಯ ಕಾರ್ಯದರ್ಶಿ, ರಾಜ್ಯ ಮಟ್ಟದ ಆಯ್ಕೆ ಸಮಿತಿ ಇವರು ಯಾವುದೇ ಕಾರಣ ನೀಡದೆ ಅರ್ಜಿಯನ್ನು ತಿರಸ್ಕರಿಸುವ ಅಧಿಕಾರವನ್ನು ಹೊಂದಿರುತ್ತಾರೆ. ಹೆಚ್ಚಿನ ಮಾಹಿತಿಗೆ ದೂ. 080- 228673833 ಸಂಪರ್ಕಿಸಲು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.