Asianet Suvarna News Asianet Suvarna News

ಬಿಎಂಟಿಸಿ ಕಂಡಕ್ಟರ್ ಹುದ್ದೆ ನೇಮಕಾತಿ ಪರೀಕ್ಷೆಯಲ್ಲಿ ಕಾಪಿ ಚೀಟಿ ಪತ್ತೆ..!

ಎರಡು ಪರೀಕ್ಷೆಗಳಿಗೆ ಎರಡು ಗಂಟೆ ಸಮಯ ನಿಗದಿಯಾಗಿತ್ತು. ಪರೀಕ್ಷೆಯಲ್ಲಿ ಕಾಪಿ ಮಾಡಿ ಕೆಳಗೆ ಎಸೆಯಲಾಗಿದೆ ಎಂದು ಆರೋಪಿಸಲಾಗಿದೆ. ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ ಕಾಪಿ ಚೀಟಿ ಎಸೆಯಲಾಗಿತ್ತು. ಸದ್ಯ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಕೈಗೆ ಕಾಪಿ ಚೀಟಿ ಸಿಕ್ಕಿದೆ. ಕಾಪಿ ಚೀಟಿಯಲ್ಲಿ 10 ಕ್ಕೂ ಪ್ರಶ್ನೆಗಳಿಗೆ ಉತ್ತರ ಬರೆದು ಕಳುಹಿಸಲಾಗಿತ್ತು. 

Illegal in BMTC Conductor Post Recruitment Exam in Dharwad grg
Author
First Published Sep 1, 2024, 4:21 PM IST | Last Updated Sep 1, 2024, 4:21 PM IST

ಧಾರವಾಡ(ಸೆ.01): ರಾಜ್ಯಾದ್ಯಂತ ಇಂದು(ಭಾನುವಾರ) ನಡೆದ ಬಿಎಂಟಿಸಿ ಕಂಡಕ್ಟರ್ ಹುದ್ದೆ ನೇಮಕಾತಿ ಪರೀಕ್ಷೆಯಲ್ಲಿ ಕಾಪಿ ಚೀಟಿ ಪತ್ತೆಯಾದ ಆರೋಪ ಕೇಳಿ ಬಂದ ಘಟನೆ ನಗರದಲ್ಲಿ ನಡೆದಿದೆ.  ಧಾರವಾಡ ಪರೀಕ್ಷಾ ಕೇಂದ್ರದಲ್ಲಿ ಕಾಪಿ ಚೀಟಿ ಪತ್ತೆಯಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. 2500 ಹುದ್ದೆಗಳಿಗೆ ಪರೀಕ್ಷೆ ನಡೆದಿದೆ. ಸಾಮಾನ್ಯ ಜ್ಞಾನ ಮತ್ತು ಕಮ್ಯೂನಿಕೇಶನ್ ಎರಡೂ ಪರೀಕ್ಷೆಗಳು ನಡೆದಿವೆ.  

ಎರಡು ಪರೀಕ್ಷೆಗಳಿಗೆ ಎರಡು ಗಂಟೆ ಸಮಯ ನಿಗದಿಯಾಗಿತ್ತು. ಪರೀಕ್ಷೆಯಲ್ಲಿ ಕಾಪಿ ಮಾಡಿ ಕೆಳಗೆ ಎಸೆಯಲಾಗಿದೆ ಎಂದು ಆರೋಪಿಸಲಾಗಿದೆ. ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ ಕಾಪಿ ಚೀಟಿ ಎಸೆಯಲಾಗಿತ್ತು. ಸದ್ಯ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಕೈಗೆ ಕಾಪಿ ಚೀಟಿ ಸಿಕ್ಕಿದೆ. ಕಾಪಿ ಚೀಟಿಯಲ್ಲಿ 10 ಕ್ಕೂ ಪ್ರಶ್ನೆಗಳಿಗೆ ಉತ್ತರ ಬರೆದು ಕಳುಹಿಸಲಾಗಿತ್ತು. 

ರಾಜ್ಯದ ವಿವಿಧ ಇಲಾಖೆಗಳ ಬ್ಯಾಕ್ ಲಾಗ್ ಹುದ್ದೆ ಭರ್ತಿಗೆ ಮುಂದಾದ ಸರ್ಕಾರ!

ಸ್ಥಳಕ್ಕೆ ಆಗಮಿಸಿದ ಧಾರವಾಡ ಶಹರ ಠಾಣೆಯ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಧಾರವಾಡದ ಬಾಸೆಲ್ ಮಿಷನ್ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಸಬ್ ಸೆಂಟರ 123 ನಲ್ಲಿ ಪರೀಕ್ಷೆ ನಡೆದಿದೆ. 
ಸದ್ಯ ಕಾಪೀ ಚೀಟಿಯನ್ನ ಪೋಲಿಸರಿಗೆ ಒಪ್ಪಿಸಿದ್ದಾರೆ ಪ್ರತ್ಯಕ್ಷದರ್ಶಿ ಅಭ್ಯರ್ಥಿ ಮಹಾಂತೇಶ. ಮಧ್ಯಾಹ್ನ 2:30 ರಿಂದ 4:30 ರವೆಗೆ ಮತ್ತೊಂದು ಪರೀಕ್ಷೆ ನಡೆಯುತ್ತಿದೆ.

ಸದ್ಯ ಪರೀಕ್ಷೆಯಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿದೆ. ಪ್ರತ್ಯಕ್ಷದರ್ಶಿ ಅಭ್ಯರ್ಥಿಗಳಿಂದ ಸ್ಥಳ ಪರಿಶಿಲನೆ ನಡೆಸಿ ಮಾಹಿತಿಯನ್ನ ಪೋಲಿಸರು ಪಡೆದುಕೊಂಡಿದ್ದಾರೆ. ಸ್ಥಳಕ್ಕೆ ತಹಸೀಲ್ದಾರ ದೊಡ್ಡಪ್ಪ ಹೂಗಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

Latest Videos
Follow Us:
Download App:
  • android
  • ios