Asianet Suvarna News Asianet Suvarna News

ರಾಜ್ಯದ ವಿವಿಧ ಇಲಾಖೆಗಳ ಬ್ಯಾಕ್ ಲಾಗ್ ಹುದ್ದೆ ಭರ್ತಿಗೆ ಮುಂದಾದ ಸರ್ಕಾರ!

ರಾಜ್ಯದ ಎಲ್ಲ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಮುಂದಾಗಿದ್ದು, ಈ ಹುದ್ದೆಗಳನ್ನು ಗುರುತಿಸಲು 5 ತಂಡಗಳನ್ನು ರಚಿಸಲಾಗಿದೆ.

Karnataka Govt recruitment fill of various departments backlog posts sat
Author
First Published Aug 29, 2024, 9:03 PM IST | Last Updated Aug 29, 2024, 9:03 PM IST

ಬೆಂಗಳೂರು (ಆ.29): ರಾಜ್ಯದಲ್ಲಿರುವ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವಂತಹ ಬ್ಯಾಕ್ ಲಾಗ್ ಹುದ್ದೆ ಭರ್ತಿ ಮಾಡಲು ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಯಾವ್ಯಾವ ಇಲಾಖೆಗಳಲ್ಲಿ, ಸರ್ಕಾರದ ನಿಗಮ ಮಂಡಳಿಗಳು, ಸಂಸ್ಥೆಗಳಲ್ಲಿ ಎಷ್ಟು ಬ್ಯಾಕ್ ಲಾಗ್ ಹುದ್ದೆಗಳು ಖಾಲಿ ಇವೆ ಎಂಬುದನ್ನು ಗುರುತಿಸಿ ಕೂಡಲೇ ವರದಿ ನೀಡುವಂತೆ ಸರ್ಕಾರದಿಂದ 5 ತಂಡಗಳನ್ನು ರಚನೆ ಮಾಡಿ ಆದೇಶ ಹೊರಡಿಸಿದೆ.

ಸರ್ಕಾರದ ವಿವಿಧ ಇಲಾಖೆಗಳು/ ನಿಗಮಗಳು/ ಮಂಡಳಿಗಳು/ ವಿಶ್ವ ವಿದ್ಯಾಲಯಗಳು/ ಸಹಕಾರ ಸಂಸ್ಥೆಗಳು/ ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ನೇರನೇಮಕಾತಿ ಹಾಗೂ ಮುಂಬಡ್ತಿಯಲ್ಲಿ ಬ್ಯಾಕ್‌ಲಾಗ್ ಹುದ್ದೆಗಳನ್ನು ಗುರುತಿಸುವ ಬಗ್ಗೆ ತನಿಖೆ ಕೈಗೊಂಡು, ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ ಇವರಿಗೆ ವರದಿ ಸಲ್ಲಿಸಲು ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ಆಯೋಗ / ನಿಗಮ / ಸಂಸ್ಥೆಗಳಲ್ಲಿನ ಕೆಳಕಂಡ ಅಧಿಕಾರಿ & ಸಿಬ್ಬಂದಿಗಳನ್ನು ಒಳಗೊಂಡ 05 ತಂಡಗಳನ್ನು ರಚಿಸಿ, ಆದೇಶಿಸಿದೆ.

ಭಾರತದಲ್ಲಿ ಅತಿಹೆಚ್ಚು ಬಳಸುವ ಟಾಪ್ 10 ಹೆಸರುಗಳು!

ಆದೇಶಕ್ಕೂ ಮುನ್ನ ಕಳಿಸಿದ್ದ ಪ್ರಸ್ತಾವನೆ ಇಲ್ಲಿದೆ ನೋಡಿ..!
ಸಮಾಜ ಕಲ್ಯಾಣ ಇಲಾಖೆಯಿಂದ ಸರ್ಕಾರದ ವಿವಿಧ ಇಲಾಖೆಗಳು/ ನಿಗಮಗಳು/ ಮಂಡಳಿಗಳು/ ವಿಶ್ವವಿದ್ಯಾಲಯಗಳು / ಸಹಕಾರ ಸಂಸ್ಥೆಗಳು /ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ 2001ರಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ನೇರ ನೇಮಕಾತಿಯಲ್ಲಿ ಬ್ಯಾಕ್‌ಲಾಗ್ ಹುದ್ದೆಗಳನ್ನು ಗುರುತಿಸಲಾಗಿತ್ತು. 2001ರ ನಂತರ ಸಮಾಜ ಕಲ್ಯಾಣ ಇಲಾಖೆಯಿಂದ ಇಲಾಖೆಗಳಿಗೆ ಭೇಟಿ ನೀಡಿ ಯಾವುದೇ ನೇರ ನೇಮಕಾತಿ ಹಾಗೂ ಮುಂಬಡ್ತಿ ಬ್ಯಾಕ್‌ಲಾಗ್ ಹುದ್ದೆಗಳನ್ನು ಗುರುತಿಸಿರುವುದಿಲ್ಲ. ಪ್ರಸ್ತುತ ವಿವಿಧ ಕಚೇರಿ, ಮಂಡಳಿ ಹಾಗೂ ಸಂಸ್ಥೆಗಳಲ್ಲಿ ನೇರ ನೇಮಕಾತಿ ಹಾಗೂ ಮುಂಬಡ್ತಿ ಮಾಡುವಾಗ ಬ್ಯಾಕ್‌ಲಾಗ್ ಹುದ್ದೆಗಳನ್ನು ಸದರಿ ಇಲಾಖೆಗಳೇ ಗುರುತಿಸಿಕೊಳ್ಳುತ್ತಿರುವುದು ಹಾಗೂ ಕೆಲವೊಂದು ಇಲಾಖೆಗಳಲ್ಲಿ ಬ್ಯಾಕ್‌ಲಾಗ್ ಹುದ್ದೆಗಳನ್ನು ಗುರುತಿಸದೇ ಇರುವುದು ಕಂಡುಬಂದಿರುತ್ತದೆ.

ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಸಮಾಜ ಕಲ್ಯಾಣ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ಜೂ.10ರಮದು ನಡೆದ ಸಭೆಯಲ್ಲಿ ಸರ್ಕಾರದ ವಿವಿಧ ಇಲಾಖೆಗಳು/ ನಿಗಮಗಳು/ ಮಂಡಳಿಗಳು/ ವಿಶ್ವ ವಿದ್ಯಾಲಯಗಳು/ ಸಹಕಾರ ಸಂಸ್ಥೆಗಳು/ ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ನೇರನೇಮಕಾತಿ ಹಾಗೂ ಮುಂಬಡ್ತಿಯಲ್ಲಿ ಬ್ಯಾಕ್‌ಲಾಗ್ ಹುದ್ದೆಗಳನ್ನು ಗುರುತಿಸುವ ಬಗ್ಗೆ ತನಿಖೆ ಕೈಗೊಳ್ಳಲು ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಬರುವ ಸಂಸ್ಥೆಗಳ ಅಧಿಕಾರಿ/ ಸಿಬ್ಬಂದಿಗಳನ್ನು ನಿಯೋಜಿಸಿಕೊಂಡು ತನಿಖಾ ತಂಡವನ್ನು ರಚಿಸಿ ನಿಯೋಜಿಸುವಂತೆ ನಿರ್ದೇಶನ ನೀಡಿರುತ್ತಾರೆ.

ರಾಷ್ಟ್ರೋತ್ಥಾನ ಪರಿಷತ್‌, ಚಾಣಕ್ಯ ವಿವಿಗೆ ನೀಡಿದ ಭೂಮಿ ವಾಪಸ್?: ಎಂ.ಬಿ. ಪಾಟೀಲ

ಸಮಾಜ ಕಲ್ಯಾಣ ಇಲಾಖೆಯ ಅಧೀನ ವ್ಯಾಪ್ತಿಗೆ ಒಳಪಡುವ ಆಯೋಗ / ನಿಗಮ / ಸಂಸ್ಥೆಗಳಲ್ಲಿನ ಅಧಿಕಾರಿ & ಸಿಬ್ಬಂದಿಗಳ ತಂಡಗಳ ವಿವರಗಳೊಂದಿಗೆ ಗೊತ್ತುಪಡಿಸಲಾಗುವ /ನಿಗಧಿಪಡಿಸಲಾಗುವ ಇಲಾಖೆಗಳಲ್ಲಿ ಬ್ಯಾಕ್‌ಲಾಗ್ ಹುದ್ದೆಗಳ ಬಗ್ಗೆ ಪರಿಶೀಲನೆ ನಡೆಸಿ, ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು ರವರಿಗೆ ವರದಿ ಸಲ್ಲಿಸುವ ಬಗ್ಗೆ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು ನಡೆದ ಸಚಿವ ಸಂಪುಟ ಉಪಸಮಿತಿಯಿಂದ ಅನುಮೋದನೆ ಪಡೆದು, ಸರ್ಕಾರದ ಹಂತದಲ್ಲಿ ಸೂಕ್ತ ಆದೇಶ ಹೊರಡಿಸಲು ಕೋರಿ ಏಕ ಕಡತದಲ್ಲಿ ಪ್ರಸ್ತಾವನೆ ಸಲ್ಲಿಸಿದ್ದರು.

Latest Videos
Follow Us:
Download App:
  • android
  • ios