Asianet Suvarna News Asianet Suvarna News

ಅತಿಥಿ ಉಪನ್ಯಾಸಕರ ಪ್ರತಿಭಟನೆ, ತುಟಿ ಪಿಟಿಕ್ ಅನ್ನದ Karnataka University

ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ  ಕಳೆದ 6 ದಿನಗಳಿಂದ ಅತಿಥಿ ಉಪನ್ಯಾಸಕರು ಪ್ರತಿಭಟನೆ ನಡೆಸುತ್ತಿದ್ದು, ಆದರೆ ಈವರೆಗೆ ಯಾವೊಬ್ಬ ನಾಯಕರು ಶಿಕ್ಷಕರ ಸಮಸ್ಯೆಯನ್ನು ಆಲಿಸಿಲ್ಲ.

guest lecturers protest at Karnataka university dharwad gow
Author
Bengaluru, First Published Jun 6, 2022, 1:35 PM IST

ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್  

ಧಾರವಾಡ (ಜೂ.6) :  ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ (Karnataka university)  ಕಳೆದ 6 ದಿನಗಳಿಂದ ಅತಿಥಿ ಉಪನ್ಯಾಸಕರು (guest lecturers) ಪ್ರತಿಭಟನೆ ನಡೆಸುತ್ತಿದ್ದು, ಆದರೆ ಈವರೆಗೆ ಯಾವೊಬ್ಬ ನಾಯಕರು ಶಿಕ್ಷಕರ ಸಮಸ್ಯೆಯನ್ನು ಆಲಿಸಲಿಲ್ಲ. ಈ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಆಕ್ರೋಶ ಹೊರ ಹಾಕಿರುವ ಕಾಂಗ್ರೆಸ್ ಮುಖಂಡ ದೀಪಕ್ ಚಿಂಚೋರೆ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು  ಈಡೇರಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. 

ವಿಶ್ವವಿದ್ಯಾಲಯದ ಉಪ ಕುಲಪತಿಗಳು 185 ಕೋಟಿ ಅನುದಾನ ಬರಬೇಕು ಎಂದು ಕುಂಟು ನೆಪ ಹೇಳುತ್ತಿದ್ದಾರೆ. ಎಂದು ವಿಸಿ ವಿರುದ್ದ ದಿಪಕ್ ಚಿಂಚೋರೆ ಆಕ್ರೊಶ ಹೊರ ಹಾಕಿದರು.

NTPC RECRUITMENT 2022: ವಿವಿಧ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ನೇಮಕಾತಿ

650 ಶಿಕ್ಷಕರು ಯಾವುದೇ ಕಾರಣಕ್ಕೂ ಭಯ ಪಡಬೇಡಿ, ಸಿಎಂ ಬಸವರಾಜ ಬೊಮ್ಮಾಯಿ‌ ಅವರು ವಿದ್ಯಾಕಾಶಿ ಧಾರವಾಡ ಜಿಲ್ಲೆಗೆ  ಆದಷ್ಟು ಬೇಗ 185 ಕೋಟಿ ಅನುದಾನ ಬಿಡುಗಡೆ ಮಾಡಬೇಕಾಗಬೇಕಿತ್ತು. ಅದನ್ನ ಆದಷ್ಟು ಬೇಗ ಬಿಡುಗಡೆ ಮಾಡಿ, ಅನುದಾನ ಬಿಡುಗಡೆ ಮಾಡಲು ಮೀನಾಮೇಷ ಯಾಕೆ? 40% ಗಾಗಿ ಸರಕಾರ ಕಾಯುತ್ತಿದೆಯಾ? ಎಂದು ದಿಪಕ್ ಚಿಂಚೋರೆ ಪತ್ರಿಕಾಗೋಷ್ಠಿ ಯಲ್ಲಿ ಸರಕಾರಕ್ಕೆ ಚಾಟಿ ಬೀಸಿದರು.

ಅತಿಥಿ ಉಪನ್ಯಾಸಕರ ಸಮಸ್ಯೆಗಳಿಗೆ ಬಸವರಾಜ ಹೊರಟ್ಟಿ ಅವರು ಸ್ಪಂದಿಸಬೇಕು. ಹೊರಟ್ಟಿ ಅವರೇ ನಿಮ್ಮ ಕಾಲದಲ್ಲಿ ಶಿಕ್ಷಕರಿಗೆ ಅನ್ಯಾಯವಾಗಿದೆ.   ಆದಷ್ಟು ಬೇಗ ಶಿಕ್ಷಕರ ಸಮಸ್ಯೆ ಆಲಿಸಬೇಕು.

Tumkur University Recruitment 2022; ವಿವಿಧ ವಿಷಯಗಳ ಅತಿಥಿ ಉಪನ್ಯಾಸಕರ ಹುದ್ದೆಗೆ ನೇಮಕಾತಿ

ಸಿದ್ದರಾಮಯ್ಯ ಅವರು ಜೂನ್ 8 ರಂದು ದೈವಜ್ಞ ಕಲ್ಯಾಣ ಮಂಟಪಕ್ಕೆ ಕಾಂಗ್ರೆಸ್ ಅಭ್ಯರ್ಥಿ ಗುರಿಕಾರ ಪರವಾಗಿ ಪ್ರಚಾರಕ್ಕೆ ಬರುತ್ತಿದ್ದಾರೆ. ಆ ದಿನ ಶಿಕ್ಷಕರು ಭಾಗಿಯಾಗಬೇಕು, ಬಿಜೆಪಿಯಲ್ಲಿ ಸಂಘಟಿತ ಪ್ರಚಾರ ಕೂಡಾ ಆಗ್ತಾ ಇಲ್ಲ, ನಮ್ಮ ಆಭ್ಯರ್ಥಿ ಕೂಡಾ ಗೆಲ್ಲುತ್ತಾರೆ ಎಂದು ಕಾಂಗ್ರೆಸ್ ಮುಖಂಡ ದೀಪಕ್ ಚಿಂಚೋರೆ ಹೇಳಿದರು. 

ಸರಕಾರ ಸದ್ಯ 185 ಕೋಟಿ ಅನುದಾನವನ್ನ  ಬಿಡುಗಡೆ ಮಾಡಬೇಕಿತ್ತು. ಆದರೆ ಅದ್ಯಾವ ಅನುದಾನವನ್ನು ಸರಕಾರ ಬಿಡುಗಡೆ ಮಾಡ್ತಾ ಇಲ್ಲ. ಆದರೆ ಅದ್ಯಾವ % ವಿಚಾರಕ್ಕೆ ಸರಕಾರ ಕವಿವಿಯ ಅನುದಾನವನ್ನು ಬಿಡುಗಡೆ ಮಾಡ್ತಾ ಇಲ್ಲ ಎಂಬ ಬಗ್ಗೆ ಸ್ಪಷ್ಟನೆ ಸಿಗಬೇಕು.

Ministry of Defence Recruitment 2022 ; ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

 ಸದ್ಯ ಶಿಕ್ಷಕರ ಸಂಬಳವನ್ನು  ಹೆಚ್ಚಳ ಮಾಡಲು ಆಗುವುದಿಲ್ಲ ಎಂದು ಕವಿವಿ ಕುಲಸಚಿವರು ಹೇಳುತ್ತಿದ್ದಾರೆ. ಉಪನ್ಯಾಸಕರು ಸಂಬಳ‌ ಹೆಚ್ಚಳವಾಗಬೇಕು ಎಂದು ಹೇಳಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಅವರ ಗನ್ ಮ್ಯಾನ್ ಹಲ್ಲೆ‌ಮಾಡಿದ್ದು ಸರಿಯಲ್ಲ, ಕಾಂಗ್ರೆಸ್ ಪಕ್ಷದಲ್ಲಿ ಶಿಸ್ತು ಇದೆ. ಕುಮಾರಸ್ವಾಮಿ ಅವರು ರಾಜ್ಯ ಸಭೆಯಲ್ಲಿ ನಮಗೆ ಸಹಾಯ ಮಾಡಲಿ, ನಾವು ಯಾರಿಗೂ ಯಾರನ್ನ ಚೂ ಬಿಡಲ್ಲ ಎಂದಿದ್ದಾರೆ.

Follow Us:
Download App:
  • android
  • ios