Asianet Suvarna News Asianet Suvarna News

Tumkur University Recruitment 2022; ವಿವಿಧ ವಿಷಯಗಳ ಅತಿಥಿ ಉಪನ್ಯಾಸಕರ ಹುದ್ದೆಗೆ ನೇಮಕಾತಿ

ತುಮಕೂರು ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ವಿವಿಧ ವಿಷಯಗಳ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು,  ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಲು  ಜೂನ್​ 9 ಕೊನೆಯ ದಿನವಾಗಿದೆ.

Tumakuru University Recruitment 2022 notification for Guest Faculty  post gow
Author
Bengaluru, First Published Jun 6, 2022, 10:42 AM IST

ತುಮಕೂರು(ಜೂ.6): ತುಮಕೂರು ವಿಶ್ವವಿದ್ಯಾಲಯದಲ್ಲಿ (Tumkur University) ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ.  ವಿವಿಧ ವಿಷಯಗಳ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಲು  ಜೂನ್​ 9 ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ತಾಣ http://tumkuruniversity.ac.in/ ಗೆ ಭೇಟಿ ನೀಡಬಹುದು.

ಯಾವ್ಯಾವ ವಿಷಯಗಳಿಗೆ ಉಪನ್ಯಾಸಕರು ಬೇಕಾಗಿದ್ದಾರೆ:
ಪರಿಸರ ವಿಜ್ಞಾನ (environmental science) ಮತ್ತು ಗಣಕ ವಿಜ್ಞಾನ (computer science) :  ಪದವಿ ವಿಭಾಗಕ್ಕೆ  ಉಪನ್ಯಾಸಕರು ಬೇಕಾಗಿದ್ದಾರೆ.
ರಸಾಯನ ಶಾಸ್ತ್ರ (Chemistry), ಸೂಕ್ಷ್ಮ ಜೀವಶಾಸ್ತ್ರ (Microbiology) ಮತ್ತು ಪರಿಸರ ವಿಜ್ಞಾನ :  ಸ್ನಾತಕೋತ್ತರ ವಿಭಾಗಕ್ಕೆ  ಉಪನ್ಯಾಸಕರು ಬೇಕಾಗಿದ್ದಾರೆ.

MINISTRY OF DEFENCE RECRUITMENT 2022 ; ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಶೈಕ್ಷಣಿಕ ವಿದ್ಯಾರ್ಹತೆ: ತುಮಕೂರು (Tumakuru) ವಿಶ್ವವಿದ್ಯಾಲಯದಲ್ಲಿ  ಖಾಲಿ ಇರುವ ವಿವಿಧ ವಿಷಯಗಳ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ / ಸಂಸ್ಥೆಯಿಂದ ಹುದ್ದೆಗೆ ಅನುಸಾರವಾಗಿ ವಿದ್ಯಾರ್ಹತೆ ಪಡೆದಿರಬೇಕು.

ವಯೋಮಿತಿ:  ತುಮಕೂರು ವಿಶ್ವವಿದ್ಯಾಲಯದಲ್ಲಿ  ಖಾಲಿ ಇರುವ ವಿವಿಧ ವಿಷಯಗಳ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು  ವಿಶ್ವವಿದ್ಯಾನಿಲಯದ ನೇಮಕಾತಿ ನಿಯಮಗಳ ಪ್ರಕಾರ ವಯೋಮಿತಿ ಹೊಂದಿರಬೇಕು.

ಅರ್ಜಿ ಶುಲ್ಕ:  ತುಮಕೂರು ವಿಶ್ವವಿದ್ಯಾಲಯದಲ್ಲಿ  ಖಾಲಿ ಇರುವ ವಿವಿಧ ವಿಷಯಗಳ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.

CDS Examnನಲ್ಲಿ ಚಾಲಕನ ಪುತ್ರ ದೇಶಕ್ಕೆ ಫಸ್ಟ್ ರ‍್ಯಾಂಕ್ 

DRDO Recruitment 2022: ವಿವಿಧ scientist ಹುದ್ದೆಗಳಿಗೆ ನೇಮಕಾತಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (Defence Research and Development Organisation - DRDO)  ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಮೆಕ್ಯಾನಿಕಲ್ ಇಂಜಿನಿಯರಿಂಗ್, ಆಪ್ಟಿಕಲ್ ಇಂಜಿನಿಯರಿಂಗ್ ಸೇರಿ  ಇತರ ವಿಭಾಗಗಳಲ್ಲಿ ಹಲವಾರು ಹುದ್ದೆಗಳನ್ನು ನೇಮಿಸಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು 58 ಹುದ್ದೆಗಳು ಖಾಲಿ ಇದ್ದು,  ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಜೂನ್ 28 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು https://rac.gov.in ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು. 

ಒಟ್ಟು 58 ಹುದ್ದೆಗಳ ಮಾಹಿತಿ ಇಂತಿದೆ.
Scientist F : 3 ಹುದ್ದೆಗಳು
Scientist E : 6 ಹುದ್ದೆಗಳು
Scientist D : 15 ಹುದ್ದೆಗಳು
Scientist C : 34 ಹುದ್ದೆಗಳು

6ನೇ ತರಗತಿ ಪಠ್ಯದಲ್ಲಿ ಕನ್ನಡಕ್ಕೆ ಅವಮಾನ, ಚಕ್ರತೀರ್ಥ ವಿರುದ್ಧ ಹೊಸ ಆರೋಪ!

ಶೈಕ್ಷಣಿಕ ವಿದ್ಯಾರ್ಹತೆ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಮತ್ತು ಸಂಸ್ಥೆಯಿಂದ ಹುದ್ದೆಗೆ ಅನುಸಾರವಾಗಿ ವಿದ್ಯಾರ್ಹತೆ ಪಡೆದಿರಬೇಕು. ಸಂಬಂಧಿತ ಎಂಜಿನಿಯರಿಂಗ್ ವಿಭಾಗದಲ್ಲಿ ಬಿ.ಇ/ಬಿ.ಟೆಕ್/ಡಿಪ್ಲೊಮಾ; ಸಂಬಂಧಿತ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಮಾಡಿರಬೇಕು.

ವಯೋಮಿತಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು 35 ರಿಂದ 50 ವರ್ಷದ ಒಳಗಿರಬೇಕು.

Follow Us:
Download App:
  • android
  • ios