ಖಾಲಿಯಿದ್ದ 75 ಸಿವಿಲ್‌ ಜಡ್ಜ್‌ಗಳ ಹುದ್ದೆ ಭರ್ತಿ ಗೆ ಅಧಿಸೂಚನೆ ಪ್ರಕಟ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್  ಆದೇಶಾನುಸಾರ ಈ ಕ್ರಮ

 ಬೆಂಗಳೂರು(ಜು.9): ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಖಾಲಿಯಿದ್ದ 75 ಸಿವಿಲ್‌ ನ್ಯಾಯಾಧೀಶರ ಹುದ್ದೆಗಳನ್ನು ಭರ್ತಿ ಮಾಡಿ ಶುಕ್ರವಾರ ಅಧಿಸೂಚನೆ ಹೊರಡಿಸಲಾಗಿದೆ.

ಈ ಸಂಬಂಧ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಆದೇಶಾನುಸಾರ ರಾಜ್ಯ ಕಾನೂನು ಇಲಾಖೆ ಪ್ರಧಾನ ಕಾರ್ಯದಶಿ ಟಿ.ವೆಂಕಟೇಶ್‌ ನಾಯ್‌್ಕ ಶುಕ್ರವಾರ ಅಧಿಸೂಚನೆ ಪ್ರಕಟಿಸಿದ್ದಾರೆ. ನೂತನವಾಗಿ ನೇಮಕಗೊಂಡಿರುವ ಸಿವಿಲ್‌ ನ್ಯಾಯಾಧೀಶರು ಪ್ರೊಬೆಷನರಿ ಅವಧಿ ಎರಡು ವರ್ಷವಾಗಿದೆ.

ರಾಜ್ಯದ 541 ಪಿಯು ಕಾಲೇಜಲ್ಲಿ 3 ವರ್ಷದಿಂದ ಒಂದೂ ಅಡ್ಮಿಷನ್‌ ಇಲ್ಲ!

ನೇಮಕಗೊಂಡವರ ಹೆಸರು: ಸಿದ್ರಾಮರೆಡ್ಡಿ, ಸವಿತಾ ನಿಂಗಪ್ಪ ಮುಕ್ಕಲ್‌, ನಿರುಪಮಾ ರೇಣಕಪ್ಪ ದಂಗ್‌, ಸುಕೀತ ಎಸ್‌.ಹಡ್ಲಿ, ಎಸ್‌.ಆರ್‌. ನಂದಿನಿ ಆರ್‌.ಶಿಶಿರಾ, ಜೆ.ಚೈತ್ರಾ, ಎಚ್‌.ಪಿ.ಚರಿತಾ, ಸ್ನೇಹಾ ಪಾಟೀಲ್‌, ಚಂದ್ರಶೇಖರ್‌ ಅಲಬೂರ್‌, ಎ.ವಿಶ್ವನಾಥ, ಮಾನಸ ಶೇಖರ್‌, ವಿ.ಶೃತಿ, ಆರ್‌.ಸಹನಾ, ಬಿ.ಎಂ.ಮೋಹಿತ್‌, ಎಂ.ಕಾವೇರಮ್ಮ, ವೀರೇಶ್‌ ಹಿರೇಮಠ್‌, ಅರ್ಷದ್‌ ಅನ್ಸಾರಿ, ಅರ್ಪಿತಾ, ಎಚ್‌.ಆರ್‌.ಶಿವಣ್ಣ, ಆರ್‌.ಅಪರ್ಣಾ, ಕೆ.ಪಿ.ಸಿದ್ದಪ್ಪಾಜಿ, ಪಲ್ಲವಿ ಆದಿನಾಥ್‌ ಪಾಟೀಲ್‌, ಬಿ.ಆರ್‌.ಹನುಮಂತರಾಯಪ್ಪ, ಎಚ್‌.ದೇವದಾಸ್‌, ಅಭಿನಯ್‌, ಕೆಂಚನಗೌಡ ಪಾಟೀಲ್‌, ಶ್ವೇತಾ ಪಾಟೀಲ್‌, ಎಲ್‌.ಸುಮಲತಾ, ಪಿ.ಎಂ.ಮೇಧಾ, ಶ್ಯಾಮ ಶ್ರೀವತ್ಸಾ, ವಿ.ಹಂಸಾ,

ಎಂ.ಶೃತಿ, ಈರಣ್ಣ ಹುಣಸಿಕಟ್ಟಿ, ಎಚ್‌.ಜಿ.ಹರೀಶ್‌ ಸಿಂಗ್‌, ಸಂಜಯ್‌ ಎಂ.ಮಲ್ಲಿಕಾರ್ಜುನಯ್ಯ, ದತ್ತ ಕುಮಾರ್‌ ಜವಾಲ್‌ಕರ್‌, ಎಚ್‌.ಡಿ.ಶ್ರೀಧರ, ಅರ್ಪಿತಾ ಬಿ.ಬೆಲ್ಲದ್‌, ವಿಶಾಲಾಕ್ಷಿ, ಎಸ್‌. ತೇಜಸ್‌ ಕಮಾರ್‌, ಸಿ.ಆರ್‌.ಅಕ್ಷತಾ, ಎಂ.ಸುಷ್ಮಾ, ಲಕ್ಷ್ಮೇ ಭವಾನಿ ಶಂಕರಪ್ಪ, ಅಮ್ರೀನ್‌ ಸುಲ್ತಾನ, ಬಸವರಾಜ್‌, ಎಚ್‌.ಕೆ. ವಿಜಯಲಕ್ಷ್ಮೇ, ಜಿ.ಮಹಾಲಕ್ಷ್ಮೇ, ಆರ್‌.ಸಿ.ಕೋಮಲಾ, ಕೆ.ವಿ.ಅರ್ಪಿತಾ, ಜೆ.ಶ್ವೇತಾ, ವರ್ಜೇಶ, ಜ್ಯೋತಿ ಅಶೋಕ್‌ ಪತ್ತರ್‌, ಆರ್‌.ತೇಜಶ್ರೀ, ರಾಹುಲ್‌ ಚಂಭಾರ್‌, ವೀಣಾ ಕೊಲೇಕರ್‌, ಎಸ್‌.ಟಿ. ನಟರಾಜ್‌, ಪಿ.ಮಮತಾ, ಎಂ.ರಘು, ಎಂ.ಧನಲಕ್ಷ್ಮೇ, ಜಾಯ್ಲಿನ್‌ ಮಂಡೋನ್ಕಾ, ಎಚ್‌.ವಿ.ಸವಿತಾರಾಣಿ, ಜ್ಯೋತಿ ಬಿ.ಕಗಿನಕರ್‌, ಮುಡುಕಪ್ಪ ಓಡಾನ್‌, ಪಿ.ಮದನ್‌, ಕೆ.ಎಸ್‌. ಶೃತಿ, ಜಿ.ಬಿ.ರಂಜಿತಾ, ಟಿ.ಎಚ್‌. ವಿಜಯೇಂದ್ರ, ಅನಿತಾ ಸಾಲಿ, ಯೋಗೇಂದ್ರ ಶೆಟ್ಟಿ, ಎಸ್‌.ಕೆ.ರಂಜಿತಾ, ಬಸವರಾಜ್‌, ಸುನೀತಾ, ಇಸ್ಮಾಯಿಲ್‌ ಜಬೀವುಲ್ಲಾ, ಸಿ.ಎಸ್‌. ರಹೇಲಾ ಸಾಬ್‌.

ಕೊನೆಗೂ ಪಿಯು ಉತ್ತರಪತ್ರಿಕೆ ಡೌನ್‌ಲೋಡ್‌ಗೆ ಲಭ್ಯ, PUC ದಾಖಲಾತಿ ಜು.22ರವರೆಗೆ ವಿಸ್ತರಣೆ

ಬಾಕಿ ಅರ್ಜಿಗಳ ವಿಲೇವಾರಿಗೆ ಕ್ರಮಕೈಗೊಳ್ಳಿ: ವಿಜಯಪುರ :ಜಿಲ್ಲೆಯಲ್ಲಿ ಕಾರ್ಮಿಕ ಇಲಾಖೆ ಹಾಗೂ ಕಾರ್ಮಿಕ ಇಲಾಖೆಯ ಅಧೀನದಲ್ಲಿ ಬರುವ ಮಂಡಳಿಗಳಿಗೆ ಸಂಬಂಧಿಸಿದ ಬಾಕಿ ಉಳಿದ ಅರ್ಜಿಗಳು ಅಥವಾ ಪ್ರಕರಣಗಳನ್ನು ವಿಲೇವಾರಿ ಮಾಡುವ ಸಂಬಂಧ ಜಿಲ್ಲೆಯಾದ್ಯಂತ ಜಾಗೃತಿ ಮೂಡಿಸಲು ಕಾರ್ಮಿಕ ಅದಾಲತ್‌ ಸಂಚಾರಿ ವಾಹನಕ್ಕೆ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಜಿ.ಜಿ.ಕುರುವತ್ತಿ ಹಾಗೂ ಹಿರಿಯ ಸಿವಿಲ್‌ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವೆಂಕಣ್ಣ ಬಿ ಹೊಸಮನಿ ಚಾಲನೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕಾರ್ಮಿಕ ಇಲಾಖೆಯಿಂದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಶುಕ್ರವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಜಿ.ಜಿ.ಕುರುವತ್ತಿ ಅವರು ಮಾತನಾಡಿ, ಕಾರ್ಮಿಕರ ಸಮಸ್ಯೆಗಳನ್ನು ಆಲಿಸಲು ಹಾಗೂ ಪರಿಹಾರ ಒದಗಿಸಲು ಜು.16 ರಿಂದ ಆ.15ರವರೆಗೆ, ಕಾರ್ಮಿಕ ಇಲಾಖೆಯ ಅಧೀನದಲ್ಲಿ ಬರುವ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಹಾಗೂ ಇಲಾಖೆಯಲ್ಲಿ ಬಾಕಿ ಇರುವ ಎಲ್ಲಾ ಅರ್ಜಿಗಳು ಅಥವಾ ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಳ್ಳುವಂತೆ ತಿಳಿಸಿದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ಎಸ್‌.ಜಿ. ಖೈನೂರ, ಕಾರ್ಮಿಕ ನಿರೀಕ್ಷಕ ಜಗದೇವಿ ಸಜ್ಜನ ರವರು ಕಾರ್ಮಿಕ ಅದಾಲತ್‌ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಮಿಕ ಸಂಘದ ಅಧ್ಯಕ್ಷÜ ನಾನಾಗೌಡ, ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕಿ ಕುಮಾರಿ ನೀಲಮ್ಮ ಖೇಡಗಿ, ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ಕಾರ್ಯ ನಿರ್ವಾಹಕ ಎಸ್‌ ನಾಗರಾಜ, ಕಾರ್ಮಿಕ ಇಲಾಖೆ ಸಿಬ್ಬಂದಿ ಕುಮಾರಿ ಹರ್ಷಾ ಪಾಯಗೊಂಡ ಮತ್ತು ಕಾರ್ಮಿಕರು ಇತರರು ಇದ್ದರು.