ಬಿಎಸ್‌ಎಫ್‌ನಲ್ಲಿ 269 ಗ್ರೂಪ್ ಸಿ ಕಾನ್ಸ್‌ಟೇಬಲ್ ಹುದ್ದೆಗಳಿಗೆ ನೇಮಕಾತಿ ಶುರು
ಗಡಿ ಭದ್ರತಾ ಪಡೆ(ಬಿಎಸ್‌ಎಫ್) ಖಾಲಿ ಇರುವ 269 ಗ್ರೂಪ್ ಸಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದ್ದು, ಸೆಪ್ಟೆಂಬರ್ 22ರವರೆಗೆ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕಾಲಾವಕಾಶವಿದೆ.
ಗಡಿ ಭದ್ರತಾ ಪಡೆ ಸೇರಿ ದೇಶಸೇವೆ ಸಲ್ಲಿಸಲು ಬಯಸುವವರಿಗೆ ಇಲ್ಲೊಂದು ಒಳ್ಳೆ ಸುದ್ದಿ ಇದೆ. ಅದರಲ್ಲೂ ಕ್ರೀಡಾ ವಿಭಾಗದಲ್ಲಿ ಗುರುತಿಸಿಕೊಂಡಿದ್ದರೆ, ಇದಕ್ಕಿಂತ ಬೇರೆ ಚಾನ್ಸ್ ಸಿಗೋದಿಲ್ಲ. ಬಾರ್ಡರ್ ಸೆಕ್ಯುರಿಟಿ ಫೋರ್ಸ್ (ಬಿಎಸ್ಎಫ್), ಗ್ರೂಪ್ ‘ಸಿ’ ನಲ್ಲಿ ಖಾಲಿ ಇರುವ ಒಟ್ಟು 269 ಕಾನ್ಸ್ಟೇಬಲ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳುತ್ತಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಬಿಎಸ್ಎಫ್ ಅಧಿಕೃತ ವೆಬ್‌ಸೈಟ್ rectt.bsf.gov.in ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.
ಶೇ.57 ಭಾರತೀಯರಿಗೆ ವರ್ಕ್ ಫ್ರಮ್ ಹೋಮ್‌ನಲ್ಲಿ ಹೆಚ್ಚು ಕೆಲಸದ ಭಾರ; ಸಮೀಕ್ಷಾ ವರದಿ!
ಗಡಿ ಭದ್ರತಾ ಪಡೆ, ಸದ್ಯ ಅರ್ಜಿಗಳನ್ನು ಸ್ವೀಕರಿಸುತ್ತಿದ್ದು, ತಾತ್ಕಾಲಿಕ ಆಧಾರದ ಮೇಲೆ ಅಬ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಿದೆ. ಆದಾಗ್ಯೂ, ಇದನ್ನು ಗಡಿ ಭದ್ರತಾ ಪಡೆ ಖಾಯಂ ಮಾಡಬಹುದು. ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಬಿಎಸ್‌ಎಫ್ ಅರ್ಜಿ ನಮೂನೆಗಳನ್ನು ಆನ್‌ಲೈನ್‌ನಲ್ಲಿ ಮಾತ್ರ ಸಲ್ಲಿಸಬೇಕು. ಕ್ರೀಡಾ ಕೋಟಾದಡಿ ಅಭ್ಯರ್ಥಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದ್ದು, ಖಾಯಂ ಮಾಡುವ ಸಾಧ್ಯತೆಯಿದೆ.
ಸೆಪ್ಟೆಂಬರ್ 1, 2019 ರಿಂದ ಸೆಪ್ಟೆಂಬರ್ 22, 2021 ರವರೆಗೆ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿದ ಅಥವಾ ಪದಕ ಗೆದ್ದ ಅಭ್ಯರ್ಥಿಗಳು ಮಾತ್ರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರು. ಕ್ರೀಡಾ ವಿಭಾಗದ ಅಡಿಯಲ್ಲಿ ಹಾಕಿ, ಬಾಕ್ಸಿಂಗ್, ಜೂಡೋ, ಈಜು, ಕಬಡ್ಡಿ, ಜಿಮ್ನಾಸ್ಟಿಕ್ಸ್, ವೇಟ್ ಲಿಫ್ಟಿಂಗ್, ವಾಟರ್ ಸ್ಪೋರ್ಟ್ಸ್, ಆರ್ಚರಿ, ಶೂಟಿಂಗ್, ಫುಟ್ಬಾಲ್, ಕ್ರಾಸ್-ಕಂಟ್ರಿ, ಟೇಕ್ವಾಂಡೋ ಮತ್ತು ಅಥ್ಲೆಟಿಕ್ಸ್ ನಲ್ಲಿ ಭಾಗವಹಿಸಿದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಹೊರತಾಗಿ ಬೇರೆ ಯಾವುದೇ ನಮೂನೆಯಲ್ಲಿ ಸಲ್ಲಿಸುವ ಅರ್ಜಿಗಳನ್ನು ಬಿಎಸ್ ಎಫ್ ಸ್ವೀಕರಿಸುವುದಿಲ್ಲ. ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದ್ದು, ಸೆಪ್ಟೆಂಬರ್ 22ರವರೆಗೆ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕಾಲಾವಕಾಶವಿದೆ. 18 ರಿಂದ 23 ವರ್ಷದೊಳಗಿನ ಅಭ್ಯರ್ಥಿಗಳು ಮಾತ್ರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.
ಏರ್‌ಫೋರ್ಸ್‌ನಲ್ಲಿ ಗ್ರೂಪ್ ‘ಸಿ’ ನಾಗರಿಕ 282 ಹುದ್ದೆಗಳಿಗೆ ನೇಮಕಾತಿ
ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು 10 ನೇ ತರಗತಿ ಉತ್ತೀರ್ಣರಾಗಿರಬೇಕು ಅಥವಾ ಮಾನ್ಯತೆ ಪಡೆದ ಮಂಡಳಿಯಿಂದ ಯಾವುದೇ ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಇದಲ್ಲದೆ, ಅಂತರಾಷ್ಟ್ರೀಯ ಒಲಿಂಪಿಕ್ ಸಂಸ್ಥೆ ನಡೆಸುವ ಸ್ಪರ್ಧೆಗಳಲ್ಲಿ ಭಾಗವಹಿಸಿದ ಮತ್ತು ಪದಕಗಳನ್ನು ಗೆದ್ದ ಆಟಗಾರರು ಅಥವಾ ಭಾರತೀಯ ಒಲಿಂಪಿಕ್ ಸಂಸ್ಥೆಯಿಂದ ಮಾನ್ಯತೆ ಪಡೆದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಬಿಎಸ್‌ಎಫ್ ಸೇರುವವರಿಗೆ ಫಿಸಿಕಲ್ ಮಾನದಂಡ ಅತ್ಯಂತ ಪ್ರಮುಖವಾಗಿರುತ್ತದೆ. ಪುರುಷರು 170 ಸೆಂ.ಮೀ. ಎತ್ತರ ಹಾಗೂ ಎದೆಯ ಸುತ್ತಳತೆ 80 ಸೆ.ಮೀ. ಇರಬೇಕು. ಹಾಗೇ ಮಹಿಳಾ ಅಭ್ಯರ್ಥಿಯ ಎತ್ತರ 157 ಸೆಂ.ಮೀ. ಇರಬೇಕು. ಇನ್ನು ವೈದ್ಯಕೀಯ ಮಾನದಂಡಗಳ ಪ್ರಕಾರ ಪುರುಷರು ಮತ್ತು ಮಹಿಳೆಯರ ಎತ್ತರ ಹಾಗೂ ವಯಸ್ಸಿಗೆ ಅನುಗುಣವಾದ ತೂಕವನ್ನು ಹೊಂದಿರಬೇಕು.
ಕ್ರೀಡಾ ಕೋಟಾದಡಿ ಕಾನ್ಸ್ಟೇಬಲ್ (ಜನರಲ್ ಡ್ಯೂಟಿ) ಕೆಲಸಕ್ಕೆ ಅರ್ಜಿ ಸಲ್ಲಿಸುವ ಜನರಲ್ (ಯುಆರ್) ಅಥವಾ ಒಬಿಸಿ ವರ್ಗಗಳ ಪುರುಷ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ ಕೇವಲ 100 ರೂ. ಪಾವತಿಸಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡದ ವರ್ಗಗಳಿಗೆ ಸೇರಿದ ಮಹಿಳೆಯರು ಮತ್ತು ಅಭ್ಯರ್ಥಿಗಳಿಗೆ ಶುಲ್ಕ ಪಾವತಿಸುವುದರಿಂದ ವಿನಾಯಿತಿ ನೀಡಲಾಗಿದೆ.
BELನಲ್ಲಿ ಎಂಜಿನಿಯರ್ ಪದವೀಧರ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಆನ್‌ಲೈನ್ ಅರ್ಜಿ ನಮೂನೆಗಳನ್ನು ಸಲ್ಲಿಸುವಾಗ ಪ್ರಶಂಸಾಪತ್ರಗಳು/ದಾಖಲೆಗಳ ಪರಿಶೀಲನೆ, ದೈಹಿಕ ಮಾನದಂಡದ ಅಳತೆ (PST) ಹಾಗೂ ವಿವರವಾದ ವೈದ್ಯಕೀಯ ಪರೀಕ್ಷೆಯ ವರದಿಗಳನ್ನು ಲಗತ್ತಿಸಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ಇತರೆ ಭತ್ಯೆಗಳನ್ನು ಹೊರತುಪಡಿಸಿ ಮಾಸಿಕ 21,700 ರಿಂದ 69,100 ರೂಪಾಯಿವರೆಗೆ ವೇತನ ಸಿಗಲಿದೆ.