ಕೇಂದ್ರ ರಕ್ಷಣಾ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್(ಬಿಇಎಲ್) ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 29 ಕೊನೆಯದಿನವಾಗಿದೆ. ಎಂಜಿನಿಯರಿಂಗ್ ಪದವೀಧರರು ಈ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಸಾರ್ವಜನಿಕ ವಲಯದ ಪ್ರಮುಖ ಕಂಪನಿಗಳಲ್ಲಿ ಒಂದಾಗಿರುವ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್(ಬಿಇಎಲ್), ಬಿಇಎಲ್ ಜಿಇ ಅಪ್ರೆಂಟಿಸ್ ನೋಟಿಫಿಕೇಷನ್ ಹೊರಡಿಸಿದೆ. ಈ ಅಧಿಸೂಚನೆ ಅನ್ವಯ ಕಂಪನಿಯು ಗ್ರಾಜ್ಯುಯೇಟ್ ಎಂಜನಿಯರ್ 50 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಬಿಇಎಲ್ ಕೇಂದ್ರ ರಕ್ಷಣಾ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತದೆ.

ಆಸಕ್ತ ಹಾಗೂ ಅರ್ಹ ಎಂಜಿನಿಯರ್‌ಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು 2021ರ ಆಗಸ್ಟ್ 29 ಕೊನೆಯ ದಿನವಾಗಿದೆ. ಆಯ್ಕೆಯಾದ ಎಂಜಿನಿಯರ್‌ಗಳನ್ನು ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿರುವ ಬಿಇಎಲ್‌ಗೆ ನಿಯೋಜಿಸಲಾಗುತ್ತದೆ. ಎನ್ಎಟಿಎಸ್‌ ಮೂಲಕ ಆಸಕ್ತ ಅರ್ಜಿಗಳನ್ನು ಸಲ್ಲಿಸಬಹುದು. ಆಗಸ್ಟ್ 9ರಿಂದಲೇ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದೆ.

50 ಪದವೀಧರ ಎಂಜಿನಿಯರ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಬಿಇಎಲ್ ಹೊರಡಿಸಿರುವ ನೇಮಕಾತಿ ಅಧಿಸೂಚನೆ ಬಗ್ಗೆ ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

ಬಿಇಎಲ್ ಪವೀಧರ ಎಂಜನಿಯರ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ 2021 ನವೆಂಬರ್ 30ಕ್ಕೆ ಅನ್ವಯವಾಗುವಂತೆ 25 ವರ್ಷ ಮೀರಬಾರದು. ಇದೇ ವೇಳೆ, ಹಿಂದುಳಿದ ವರ್ಗಗಳ(ಒಬಿಸಿ) ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಎಸ್ಸಿ ಎಸ್ಟಿ ಪಿಡಬ್ಲೂಡಿ ವರ್ಗದ ಅಭ್ಯರ್ಥಿಗಳಿಗೆ 5 ವರ್ಷದ ವಿನಾಯ್ತಿ ಇದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. 

ಗ್ರಾಚ್ಯುಟಿ ಲೆಕ್ಕ ಹಾಕೋದು ಹೇಗೆ? ಇಲ್ಲಿದೆ ನೋಡಿ ಸರಳ ಸೂತ್ರ…

ಈ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸು ಇಚ್ಛಿಸುವ ಅಭ್ಯರ್ಥಿಗಳು ಮೆಕಾನಿಕಲ್ ಎಂಜನಿಯರ್, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್, ಸಿವಿ ಅಥವಾ ಅದಕ್ಕೆ ತತ್ಸಮಾನ ಎಂಜಿನಿಯರ್ ಬಿಇ ಮತ್ತು ಬಿಟೆಕ್ ಪದವಿಗಳನ್ನು ಪಡೆದುಕೊಂಡಿರಬೇಕು. ಅಭ್ಯರ್ಥಿಗಳು ತಮ್ಮ ಎಂಜಿನಿಯರಿಂಗ್ ಪದವಿಗಳನ್ನು ಅಧಿಕೃತ ವಿಶ್ವವಿದ್ಯಾಲಯ ಅಥವಾ ಸಂಸ್ಥೆಗಳಿಂದ ಪಡೆದುಕೊಂಡಿರಬೇಕು.

ಮೆಕಾನಿಕಲ್ ಎಂಜಿನಯರಿಂಗ್ 20 ಹುದ್ದೆಗಳು, ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ 10 ಹುದ್ದೆಗಳು, ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ 10 ಮತ್ತು ಸಿವಿಲ್ ಎಂಜಿನಿಯರಿಂಗ್ 10 ಸೇರಿ ಒಟ್ಟು 50 ಅಪ್ರಂಟಿಸ್ ಹುದ್ದೆಗಳಿಗೆ ಬಿಇಎಲ್ ನೇಮಕಾತಿ ಮಾಡಿಕೊಳ್ಳುತ್ತಿದೆ.

ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ತಮ್ಮ ಬಿಇ, ಬಿಟೆಕ್ ಪದವಿಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಈ ಅಪ್ರೆಂಟಿಸ್ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ. ಕಂಪನಿಯ ನಿಯಮಗಳ ಪ್ರಕಾರ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ 11,110 ರೂಪಾಯಿ ಸ್ಟೈಫಂಡ್ ಕೂಡಾ ಸಿಗಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. 

ಆಸಕ್ತ ಅಭ್ಯರ್ಥಿಗಳು ಅಪ್ರೆಂಟಿಸ್ ಹುದ್ದೆಗಳಿಗೆ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಾಗುತ್ತದೆ. ಅಭ್ಯರ್ಥಿಗಳು ಎನ್‌ಎಟಿಎಸ್(NATS) ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಆ ಬಳಿಕ ತಮ್ಮ ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

ಬಿಇಎಲ್ ಎಂಜಿನಿಯರ್ ಅಪ್ರಂಟಿಸ್ ಹುದ್ದೆಗಳ ನೇಮಕಾತಿಗೆಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್(ಬಿಇಎಲ್) ಕಂಪನಿಯು ಸರ್ಕಾರಿ ಸ್ವಾಮ್ಯದ ಕಂಪನಿಯಾಗಿದೆ. ಕೇಂದ್ರ ರಕ್ಷಣಾ ಇಲಾಖೆಯ ಅಧೀನ ಕಾರ್ಯನಿರ್ವಹಿಸುತ್ತಿರುವ ಬಿಇಎಲ್ ಅನ್ನು ಕೇಂದ್ರ ಸರ್ಕಾರವು 1954ರಲ್ಲಿ ಆರಂಭಿಸಿತ್ತು. ಇದು ನವರತ್ನ ಕಂಪನಿಯಾಗಿದ್ದು, ಸಾರ್ವಜನಿಕ ವಲಯದ ಪ್ರಮುಖ ಕಂಪನಿಗಳಲ್ಲಿ ಒಂದು ಎನಿಸಿಕೊಂಡಿದೆ.

ಭಾರತದಲ್ಲಿ ಕಾಗ್ನಿಜೆಂಟ್ ನೇಮಕಾತಿ ಆರಂಭ; 1 ಲಕ್ಷ ಅನುಭವಿ, 1 ಲಕ್ಷ ಫ್ರೆಶರ್‌ಗೆ ಅವಕಾಶ!

ಬಿಇಎಲ್ ಕೇಂದ್ರ ಕಚೇರಿ ಬೆಂಗಳೂರಿನಲ್ಲಿದ್ದು, ದೇಶದವ ವಿವಿಧ ನಗರಗಳಲ್ಲಿ ತನ್ನ ಶಾಖೆಗಳನ್ನು ಹೊಂದಿದೆ. 9000ಕ್ಕೂ ಅಧಿಕ ಉದ್ಯೋಗಿಗಳು ಈ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. 

ಚೆನ್ನೈ, ಪಂಚಕುಲ, ಘಾಜಿಯಾಬಾದ್, ಪುಣೆ, ಹೈದ್ರಾಬಾದ್, ನವಿ ಮುಂಬೈ ಮತ್ತು ಮಚಲಿಪಟ್ಟಣಂ ನಗರಗಳಲ್ಲಿ ಘಟಕಗಳಿವೆ. ಜೊತೆಗೆ, ನ್ಯೂಯಾರ್ಕ್ ಸಿಟಿ, ಸಿಂಗಾಪುರ,ಹನೋಯಿ, ಯಾಂಗೂನ್‌ಗಳಲ್ಲೂ ವಿದೇಶಿ ಆಫೀಸ್‌ಗಳಿವೆ. 

ನವದೆಹಲಿ, ಮುಂಬೈ, ಕೋಲ್ಕೋತ್ತಾ ಮತ್ತು ವೈಜಾಗ್‌ಗಳಲ್ಲಿ ಬಿಇಎಲ್‌ನ ಪ್ರಾದೇಶಿಗ ಕಚೇರಿಗಳು ಕಾರ್ಯನಿರ್ಹಿಸುತ್ತವೆ. ಬಿಇಎಲ್ ಆಪ್ಟ್ರಾನಿಕ್ ಡಿವೈಸಸ್ ಲಿಮಿಟೆಡ್ ಬಿಇಎಲ್‌ನ ಅಂಗ ಸಂಸ್ಥೆಯಾಗಿದೆ.