ಏರ್‌ಫೋರ್ಸ್‌ನಲ್ಲಿ ಗ್ರೂಪ್ ‘ಸಿ’ ನಾಗರಿಕ 282 ಹುದ್ದೆಗಳಿಗೆ ನೇಮಕಾತಿ
ಭಾರತೀಯ ವಾಯು ಪಡೆಯು ಗ್ರೂಪ್ ಸಿ ನಾಗರಿಕ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಒಟ್ಟು 282 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ಸೆಪ್ಟೆಂಬರ್ 7ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಕನಿಷ್ಠ ವಿದ್ಯಾರ್ಹತೆ ಮತ್ತು ಅರ್ಹ ಅಭ್ಯರ್ಥಿಗಳು ಪಾಲ್ಗೊಳ್ಳಬಹುದು.
ಭಾರತೀಯ ವಾಯುಪಡೆ ಸೇರುವ ಆಸೆ ನಿಮಗಿದ್ಯಾ? ಕನಿಷ್ಟ ವಿದ್ಯಾರ್ಹತೆ ಹೊಂದಿದ್ದರೂ ಸಾಕು, ವಾಯುಪಡೆ ಸೇರುವ ನಿಮ್ಮ ಕನಸನ್ನು ಈಡೇರಿಸಿಕೊಳ್ಳಬಹುದು. ಯಾಕಂದ್ರೆ ನೂರಾರು ಹುದ್ದೆಗಳನ್ನು ಭರ್ತಿಮಾಡಿಕೊಳ್ಳಲು ಇಂಡಿಯನ್ ಏರ್ ಫೋರ್ಸ್ ಮುಂದಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಐಎಎಫ್, ವಿವಿಧ ಏರ್ ಫೋರ್ಸ್ ಸ್ಟೇಷನ್/ಯೂನಿಟ್ ಗಳಲ್ಲಿ ಖಾಲಿ ಇರುವ ಗ್ರೂಪ್ 'ಸಿ' ನಾಗರಿಕ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಕನಿಷ್ಠ ವಿದ್ಯಾರ್ಹತೆ ಹೊಂದಿದವರು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿ ಹಾಗೂ ನೇಮಕಾತಿ ಅಧಿಸೂಚನೆ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
BELನಲ್ಲಿ ಎಂಜಿನಿಯರ್ ಪದವೀಧರ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಭಾರತೀಯ ವಾಯು ಪಡೆ(ಐಎಎಫ್) 282 ಗ್ರೂಪ್ ಸಿ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಪ್ರಕ್ರಿಯೆ ಆರಂಭಿಸಿದ್ದು, ಅಭ್ಯರ್ಥಿಗಳು ಸೆಪ್ಟೆಂಬರ್ 7 ರೊಳಗೆ ಅರ್ಜಿ ಸಲ್ಲಿಸಬಹುದು.
ಹೆಚ್ ಕ್ಯೂ ಮೆಂಟೆನನ್ಸ್ ಕಮ್ಯಾಂಡ್-153 ಹುದ್ದೆಗಳು, ಹೆಚ್ ಕ್ಯೂ ಈಸ್ಟರ್ನ್ ಏರ್ ಕಮ್ಯಾಂಡ್-32 ಹುದ್ದೆಗಳು, ಹೆಚ್ ಕ್ಯೂ ಸೌತ್ ವೆಸ್ಟರ್ನ್ ಏರ್ ಕಮ್ಯಾಂಡ್-11 ಹುದ್ದೆಗಳು, ಇಂಡಿಪೆಂಡೆಂಟ್ ಯೂನಿಟ್ಸ್- 1ಹುದ್ದೆ, ಕುಕ್ (ಸಾಮಾನ್ಯ ಗ್ರೇಡ್)- 5 ಹುದ್ದೆಗಳು, ಮೆಸ್ ಸ್ಟಾಫ್- 9 ಹುದ್ದೆಗಳು, ಮಲ್ಟಿ ಟಾಸ್ಕಿಂಗ್ ಸ್ಟಾಫ್- 18 ಹುದ್ದೆಗಳು, ಹೌಸ್ ಕೀಪಿಂಗ್ ಸ್ಟಾಫ್- 15 ಹುದ್ದೆಗಳು, ಹಿಂದಿ ಟೈಪಿಸ್ಟ್- 3 ಹುದ್ದೆಗಳು, ಲೋಯರ್ ಡಿವಿಷನ್ ಕ್ಲರ್ಕ್- 10 ಹುದ್ದೆಗಳು, ಸ್ಟೋರ್ ಕೀಪರ್- 3 ಹುದ್ದೆಗಳು, ಕಾರ್ಪೆಂಟರ್- 3 ಹುದ್ದೆಗಳು, ಪೈಂಟರ್ - 1 ಹುದ್ದೆ, ಸ್ಟೋರ್ ಸೂಪರ್ ವೈಸರ್-5 ಹುದ್ದೆಗಳು, ಸಿವಿಲಿಯನ್ ಮೆಕಾನಿಕ್ ಟ್ರಾನ್ಸ್ ಪೋರ್ಟ್ ಡ್ರೈವರ್- 3 ಹುದ್ದೆಗಳು ಸೇರಿ ಒಟ್ಟು 282 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಸೂಪರಿಂಟೆಂಡೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಹಾಗೇ ಎಲ್ ಡಿಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಮಾನ್ಯತೆ ಪಡೆದ ಮಂಡಳಿಯಿಂದ 12 ನೇ ತರಗತಿ ಉತ್ತೀರ್ಣರಾಗಿರಬೇಕು. ಇನ್ನು ಸ್ಟೋರ್ ಕೀಪರ್ ಹುದ್ದೆಗೆ ಅರ್ಜಿದಾರರು
12 ನೇ ತರಗತಿ ಉತ್ತೀರ್ಣರಾಗಿರಬೇಕು.
ಪೊಲೀಸ್ ಹುದ್ದೆಗಾಗಿ 1.36 ನಿಮಿಷದಲ್ಲಿ 400 ಮೀ. ಓಡಿದ ಎರಡೂವರೆ ತಿಂಗಳ ಗರ್ಭಿಣಿ
ವಯೋಮಿತಿ, ಕನಿಷ್ಠ ವಿದ್ಯಾರ್ಹತೆ, ದಾಖಲೆಗಳು ಮತ್ತು ಪ್ರಮಾಣಪತ್ರಗಳ ಆಧಾರದ ಮೇಲೆ ಎಲ್ಲ ಅರ್ಜಿಗಳನ್ನು ಪರಿಶೀಲಿಸಲಾಗುತ್ತದೆ. ನಂತರ, ಅರ್ಹ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಗೆ ಆಹ್ವಾನ ನೀಡಲಾಗುತ್ತದೆ. ಅರ್ಹ ಅಭ್ಯರ್ಥಿಗಳು ಲಿಖಿತ ಪರೀಕ್ಷೆಗೆ ಹಾಜರಾಗಬೇಕು. ಲಿಖಿತ ಪರೀಕ್ಷೆಯು ಕನಿಷ್ಠ ಶೈಕ್ಷಣಿಕ ಅರ್ಹತೆಯನ್ನು ಆಧರಿಸಿರುತ್ತದೆ. ಲಿಖಿತ ಪರೀಕ್ಷೆಯಲ್ಲಿ ಜನರಲ್ ಇಂಟೆಲಿಜೆನ್ಸ್ ಮತ್ತು ರೀಸನಿಂಗ್, ಸಂಖ್ಯಾತ್ಮಕ ಸಾಮರ್ಥ್ಯ, ಸಾಮಾನ್ಯ ಇಂಗ್ಲಿಷ್ ಹಾಗೂ ಜನರಲ್ ನಾಲ್ಡೆಜ್ ಕುರಿತ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಪ್ರಶ್ನೆಪತ್ರಿಕೆ ಇರುತ್ತದೆ.
ಲಿಖಿತ ಪರೀಕ್ಷೆಯಲ್ಲಿ ಮೆರಿಟ್/ಕೆಟಗರಿಯ ಆಧಾರದ ಮೇಲೆ ತೇರ್ಗಡೆಯಾದ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ಬಳಿಕ ಕೌಶಲ್ಯ/ದೈಹಿಕ/ಪ್ರಾಯೋಗಿಕ ಪರೀಕ್ಷೆಗೆ ಕರೆಯಲಾಗುತ್ತದೆ. ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳು ಮೂಲ ಪ್ರಮಾಣಪತ್ರಗಳನ್ನು ಸಲ್ಲಿಸಬೇಕಾಗುತ್ತದೆ.
ಅರ್ಹ ಅಭ್ಯರ್ಥಿಗಳು ಖಾಲಿ ಹುದ್ದೆಗಳು ಮತ್ತು ವಿದ್ಯಾರ್ಹತೆಗಳಿಗೆ ಒಳಪಟ್ಟಂತೆ ತಮ್ಮ ಆಯ್ಕೆಯ ಯಾವುದೇ ವಾಯುಪಡೆ ಕೇಂದ್ರಗಳಿಗೆ ಅರ್ಜಿ ಸಲ್ಲಿಸಬಹುದು. ಶೈಕ್ಷಣಿಕ ಅರ್ಹತೆ, ವಯಸ್ಸು, ತಾಂತ್ರಿಕ ಅರ್ಹತೆ, ದೈಹಿಕ ಅಂಗವೈಕಲ್ಯ, ಅನುಭವ ಪ್ರಮಾಣಪತ್ರ ಮತ್ತು ಜಾತಿ ಪ್ರಮಾಣಪತ್ರ ಇತ್ಯಾದಿ ಎಲ್ಲಾ ದಾಖಲೆಗಳ ಜೊತೆಗೆ ಅರ್ಜಿಯನ್ನು ಸಹ ಸರ್ಕಾರಿ ಅಧಿಕಾರಿಗಳಿಂದ ಸ್ವಯಂ ದೃಢೀಕರಣ ಮಾಡಿಸಿರಬೇಕು.
ಗ್ರಾಚ್ಯುಟಿ ಲೆಕ್ಕ ಹಾಕೋದು ಹೇಗೆ? ಇಲ್ಲಿದೆ ನೋಡಿ ಸರಳ ಸೂತ್ರ…